‘ಓಂ’ ಚಿತ್ರಕ್ಕೆ ಕೇಳಿ ಬಂದಿತ್ತು ತಕರಾರು; ರಾಜ್ಕುಮಾರ್ ಹೇಳಿದ ಒಂದೇ ಮಾತಿಗೆ ಎಲ್ಲರೂ ಸೈಲೆಂಟ್
Rajkumar Death Anniversary: ಶಿವರಾಜ್ ಕುಮಾರ್ ಅಭಿನಯದ 'ಓಂ' ಚಿತ್ರವು ತನ್ನ 30ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಚಿತ್ರವು ಸೆನ್ಸಾರ್ ಮಂಡಳಿಯಿಂದ ತೀವ್ರ ವಿರೋಧ ಎದುರಿಸಿತು. ಆದರೆ, ರಾಜ್ ಕುಮಾರ್ ಅವರ ಒಂದೇ ಒಂದು ಮಾತಿನಿಂದ ಈ ವಿವಾದ ಬಗೆಹರಿಯಿತು. ಕೋಟೆ ಪ್ರಭಾಕರ್ ಅವರ ಸಂದರ್ಶನದಲ್ಲಿ ಈ ಘಟನೆಯ ವಿವರಗಳನ್ನು ತಿಳಿಸಲಾಗಿದೆ.

ಶಿವರಾಜ್ಕುಮಾರ್ (Shiva Rajkumar) ನಟನೆಯ ‘ಓಂ’ ಸಿನಿಮಾ 1995ರಲ್ಲಿ ರಿಲೀಸ್ ಆಯಿತು. ಈ ಸಿನಿಮಾ ನೂರಾರು ಬಾರಿ ರೀ-ರಿಲೀಸ್ ಆಗಿದೆ. ಈ ಚಿತ್ರವನ್ನು ಉಪೇಂದ್ರ ನಿರ್ದೇಶನ ಮಾಡಿದ್ದರೆ, ಪಾರ್ವತಮ್ಮ ಅವರು ನಿರ್ಮಾಣ ಮಾಡಿದ್ದರು. ಈ ಸಿನಿಮಾ ಈಗ 30 ವರ್ಷಗಳನ್ನು ಪೂರೈಸುತ್ತಿದೆ. ಈ ಚಿತ್ರಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಸೆನ್ಸಾರ್ ಮಂಡಳಿಯಿಂದಲೇ ತಕರಾರರು ಎದ್ದಿತ್ತು. ಈ ಬಗ್ಗೆ ರಾಜ್ಕುಮಾರ್ ಹೇಳಿದ ಒಂದೇ ಮಾತಿನಿಂದ ಎಲ್ಲವೂ ಸೈಲೆಂಟ್ ಆಯಿತು.
ಇಂದು (ಏಪ್ರಿಲ್ 12) ರಾಜ್ಕುಮಾರ್ ಅವರ ಪುಣ್ಯತಿಥಿ. ಅವರು ನಮ್ಮನ್ನು ಅಗಲಿ 19 ವರ್ಷಗಳು ಕಳೆದಿವೆ. ರಾಜ್ಕುಮಾರ್ ಅವರು ಇಲ್ಲದೆ ಹೋದರು ಅವರು ಮಾಡಿದ ಕೆಲಸಗಳನ್ನು ನೆನಪಿಸಿಕೊಳ್ಳಲಾಗುತ್ತಿದೆ. ರಾಜ್ಕುಮಾರ್ ಪುಣ್ಯತಿಥಿ ವೇಳೆ ಅವರು ಮಾಡಿದ ಕೆಲವು ಒಳ್ಳೆಯ ಕೆಲಸಗಳ ಬಗ್ಗೆ ಮಾತನಾಡೋಣ. ಅದರಲ್ಲಿ ‘ಓಂ’ ಚಿತ್ರದ ಸಂದರ್ಭದಲ್ಲಿ ಎದ್ದ ತಕಾರರು ಕೂಡ ಒಂದು. ಈ ಬಗ್ಗೆ ಕೋಟೆ ಪ್ರಭಾಕರ್ ಅವರು ‘ಕಲಾಮಾಧ್ಯಮ’ ಯೂಟ್ಯೂಬ್ ಚಾನೆಲ್ಗ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
‘ಓಂ ಸಿನಿಮಾ ಇನ್ನೂ ಅದ್ದೂರಿಯಾಗಿತ್ತು. ಆದರೆ, ಸಿನಿಮಾಗೆ ಸೆನ್ಸಾರ್ ಮಂಡಳಿಯವರು ತಕರಾರು ಎತ್ತಿದ್ದರು. ರೌಡಿಗಳನ್ನು ನೀವೇ ಬೆಳೆಸುತ್ತಿದ್ದೀರಾ ಎಂದು ಸೆನ್ಸಾರ್ ಮಂಡಳಿಯವರು ಹೇಳಿದರು. ಹಾಗಾಗಿ ಹಲವು ಕಡೆ ಟ್ರಿಮ್ ಮಾಡಲಾಯಿತು. ಆಮೇಲೆ ರಾಜ್ಕುಮಾರ್ ಅವರೇ ಬಂದು, ಬ್ರಾಹ್ಮಣ ರೌಡಿ ಆಗೋದಷ್ಟೇ ಅಲ್ಲವಾ? ಕಥೆ ಹಾಗಿದೆ. ಅದಕ್ಕೆ ಹಾಗೆ ಮಾಡಲಾಗಿದೆ ಎಂದು ರಾಜ್ಕುಮಾರ್ ಮನ ಒಲಿಸಿದ ಬಳಿಕ ಯಾರೂ ಸಿನಿಮಾ ಬಗ್ಗೆ ಮಾತನಾಡಲಿಲ್ಲ’ ಎಂದು ಕೋಟೆ ಪ್ರಭಾಕರ್ ಹೇಳಿದ್ದಾರೆ.
ಇದನ್ನೂ ಓದಿ: ‘ನನ್ನ ಸುದೀಪ್ ಮಧ್ಯೆ ಸಣ್ಣಪುಟ್ಟ ಮನಸ್ತಾಪ ಆಗಿರಬಹುದು, ಆದರೆ ವೈರತ್ವ ಬೆಳೆದಿಲ್ಲ’; ಶಿವರಾಜ್ಕುಮಾರ್
ರಾಜ್ಕುಮಾರ್ ಅವರು ಸಿನಿಮಾ ರಂಗಕ್ಕೆ ನೀಡಿದ ಕೊಡಗೆ ತುಂಬಾನೇ ದೊಡ್ಡದು. ಅವರು ಅನೇಕರನ್ನು ಬೆಳೆಸಿದ್ದಾರೆ. ಅವರು ಇಲ್ಲ ಎಂಬ ನೋವು ಅಭಿಮಾನಿಗಳಿಗೆ ಎಂದಿಗೂ ಮರೆ ಆಗುವಂಥದ್ದಲ್ಲ. ಅವರ ಹಿಟ್ ಚಿತ್ರಗಳನ್ನು ಈಗಲೂ ಫ್ಯಾನ್ಸ್ ವೀಕ್ಷಿಸುತ್ತಾರೆ. ರಾಜ್ಕುಮಾರ್ ಅವರ ಪುಣ್ಯಸ್ಮರಣೆ ಪ್ರಯುಕ್ತ ಕುಟುಂಬದವರು ರಾಜ್ಕುಮಾರ್ ಸಮಾಧಿಗೆ ತೆರಳಿ ಪೂಜೆ ಸಲ್ಲಿಸೋ ಸಾಧ್ಯತೆ ಇದೆ. ರಾಜ್ಕುಮಾರ್ ಹುಟ್ಟಿದ್ದು ಹಾಗೂ ಸತ್ತಿದ್ದು ಒಂದೇ ತಿಂಗಳಲ್ಲಿ. ಅವರಿಗೆ ಏಪ್ರಿಲ್ 24 ಜನ್ಮದಿನ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.