ಸಿಂಪತಿ ಗಳಿಸಲು ತಮಗೆ ಕಷ್ಟ ಇತ್ತು ಎಂದು ಸುಳ್ಳು ಹೇಳಿದ್ರಾ ವಿಕ್ಕಿ ಕೌಶಲ್?
ವಿಕ್ಕಿ ಕೌಶಲ್ ಅವರ ಇತ್ತೀಚಿನ ಸಂದರ್ಶನದ ಹೇಳಿಕೆ ವೈರಲ್ ಆಗಿದೆ. ತಾವು ಕಷ್ಟದಲ್ಲಿ ಬೆಳೆದು ಬಾಲಿವುಡ್‌ನಲ್ಲಿ ನೆಲೆ ಕಂಡುಕೊಂಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ, ಅವರ ತಂದೆ ಶ್ಯಾಮ್ ಕೌಶಲ್ ಪ್ರಸಿದ್ಧ ಆ್ಯಕ್ಷನ್ ಡೈರೆಕ್ಟರ್ ಆಗಿದ್ದು, ವಿಕ್ಕಿಗೆ ಚಿತ್ರರಂಗದಲ್ಲಿ ಸಹಾಯ ದೊರೆತಿತ್ತು ಎಂಬುದು ಬಹಿರಂಗವಾಗಿದೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೇಳಿಕೆಯನ್ನು ಟ್ರೋಲ್ ಮಾಡಲಾಗುತ್ತಿದೆ.

ವಿಕ್ಕಿ ಕೌಶಲ್ (Vicky Kaushal) ಅವರು ಈಗ ಬೇಡಿಕೆಯ ಹೀರೋ ಎನಿಸಿಕೊಂಡಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡೀರೋ ಅವರು ‘ಛಾವಾ’ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿದ್ದಾರೆ. 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ನ ಈ ಚಿತ್ರ ಮಾಡಿದೆ. ವಿಕ್ಕಿ ಕೌಶಲ್ ಅವರ ವೃತ್ತಿ ಜೀವನವನ್ನು ಸಂಪೂರ್ಣವಾಗಿ ಈ ಚಿತ್ರ ಬದಲಿಸಿದೆ. ಈಗ ವಿಕ್ಕಿ ಕೌಶಲ್ ಅವರ ಒಂದು ಸಿಂಪತಿಗಾಗಿ ನೀಡಿದ್ದ ಹೇಳಿಕೆ ವೈರಲ್ ಆಗಿದೆ. ಈ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ.
ವಿಕ್ಕಿ ಕೌಶಲ್ ಅವರು ‘ಗ್ಯಾಂಗ್ ಆಫ್ ವಸ್ಸೇಪುರ್’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. ಈ ಸಿನಿಮಾ 2012ರಲ್ಲಿ ರಿಲೀಸ್ ಆಯಿತು. 2015ರಲ್ಲಿ ಬಂದ ‘ಮಾಸನ್’ ಚಿತ್ರದಲ್ಲಿ ಹೀರೋ ಆಗಿ ವಿಕ್ಕಿ ಕೌಶಲ್ ನಟಿಸಿದರು. ಈ ಚಿತ್ರದ ಮೂಲಕ ಅವರು ಹೀರೋ ಆದರು. ಹೊರಗಿನವರಿಗೆ ಬಾಲಿವುಡ್ ಮಣೆ ಹಾಕುವುದಿಲ್ಲ ಎನ್ನುವ ಮಾತಿದೆ. ಆದಾಗ್ಯೂ ವಿಕ್ಕಿ ಯಶಸ್ಸು ಕಂಡಿದ್ದು ಹೇಗೆ? ಇದಕ್ಕೆ ಕಾರಣ ಆಗಿದ್ದು ಅವರ ತಂದೆ.
View this post on Instagram
ವಿಕ್ಕಿ ಕೌಶಲ್ ಸಂದರ್ಶನ ಒಂದರಲ್ಲಿ ‘ನಾನು ಬಸ್ ಹಾಗೂ ರಿಕ್ಷಾದಲ್ಲಿ ಓಡಾಡುತ್ತಿದ್ದೆ. ಆದರೆ, ಬ್ಯಾಂಕ್ ಬ್ಯಾಲೆನ್ಸ್ ಜೀರೋ. ನನಗೆ ಕೆಲಸ ಬೇಕಿತ್ತು. ಆದರೆ, ಅದು ಎಲ್ಲಿ ಸಿಗುತ್ತದೆ ಅನ್ನೋದು ಗೊತ್ತಿರಲಿಲ್ಲ’ ಎಂದು ವಿಕ್ಕಿ ಕೌಶಲ್ ಹೇಳಿದ್ದರು. ಆದರೆ, ಅಸಲಿ ವಿಚಾರ ಹಾಗೆ ಇರಲೇ ಇಲ್ಲ. ಏಕೆಂದರೆ ಅವರ ತಂದೆ ಶ್ಯಾಮ್ ಕೌಶಲ್ ಬಾಲಿವುಡ್‌ನಲ್ಲಿ ದೊಡ್ಡ ಆ್ಯಕ್ಷನ್ ಡೈರೆಕ್ಟರ್ ಆಗಿದ್ದರು.
ಇದನ್ನೂ ಓದಿ: ‘ಛಾವ’ 540 ಕೋಟಿ ರೂ. ಯಶಸ್ಸಿನ ಹಿಂದಿದೆ ವಿಕ್ಕಿ ಕೌಶಲ್ ಪರಿಶ್ರಮ
ಶ್ಯಾಮ್ ಕೌಶಲ್ ಬಗ್ಗೆ ಎಲ್ಲರಿಗೂ ಗೌರವ ಇತ್ತು. ಅಲ್ಲದೆ, ವಿಕ್ಕಿ ಸಣ್ಣ ವಯಸ್ಸಿನಲ್ಲೇ ಸೆಟ್ನಲ್ಲಿ ಕಳೆಯುತ್ತಾ ಇದ್ದಿದ್ದರಿಂದ ಶಾರುಖ್ ಖಾನ್ ಹಾಗೂ ಹೃತಿಕ್ ರೋಷನ್ ರೀತಿಯ ಸ್ಟಾರ್ ಹೀರೋಗಳನ್ನು ಭೇಟಿ ಮಾಡುತ್ತಿದ್ದರು. ಹೀಗಾಗಿ, ಚಿತ್ರರಂಗದ ಯಾರೊಬ್ಬರೂ ಗೊತ್ತಿರಲಿಲ್ಲ, ಕೆಲಸ ಸಿಗೋದು ಕಷ್ಟ ಆಯಿತು ಎಂದು ಅವರು ಹೇಳಿದ ಮಾತು ಶುದ್ಧ ಸುಳ್ಳು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ತಾವು ಕಷ್ಟ ಅನುಭವಿಸಿದ್ದೇವೆ ಎಂದು ಹೇಳಲು ಏನೋ ಒಂದನ್ನು ಹೇಳೋದು ಸರಿ ಅಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ತಂದೆ ಹಂಗು ಬೇಡ ಎಂಬ ಕಾರಣಕ್ಕೆ ಅವರು ತಮ್ಮ ಸ್ವಂತ ಪರಿಶ್ರಮದಲ್ಲಿ ಸಿನಿಮಾ ರಂಗ ಪ್ರವೇಶಿಸಲು ಪ್ರಯತ್ನಿಸಿರಬಹುದು ಎನ್ನುವ ಮಾತು ಕೇಳಿ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.