National Epilepsy Day 2022: ಯಾವ ವಯಸ್ಸಿನವರಲ್ಲಿ ಈ ಮೂರ್ಛೆ ರೋಗ ಕಾಯಿಲೆ ಹೆಚ್ಚಾಗಿ ಕಂಡುಬರುತ್ತದೆ? ತಜ್ಞರ ಸಲಹೆಗಳು ಇಲ್ಲಿವೆ

ಯಾವುದೇ ಸ್ಪಷ್ಟ ಕಾರಣವಿಲ್ಲದೆ ನೀವು ಇದ್ದಕ್ಕಿದ್ದಂತೆ ಬೀಳುತ್ತೀರಾ ಅಥವಾ ಪ್ರಜ್ಞಾಹೀನರಾಗುತ್ತೀರಾ? ಬಾಯಿಯಿಂದ ನೊರೆಯುಂಟಾಗುತ್ತಿದೆಯೇ? ಇದರ ಕುರಿತ ಮಾಹಿತಿ ಇಲ್ಲಿದೆ

National Epilepsy Day 2022: ಯಾವ ವಯಸ್ಸಿನವರಲ್ಲಿ ಈ ಮೂರ್ಛೆ ರೋಗ ಕಾಯಿಲೆ ಹೆಚ್ಚಾಗಿ ಕಂಡುಬರುತ್ತದೆ? ತಜ್ಞರ ಸಲಹೆಗಳು ಇಲ್ಲಿವೆ
National Epilepsy DayImage Credit source: Jagran TV
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Nov 16, 2022 | 11:51 AM

ಪ್ರತಿ ವರ್ಷ ನವೆಂಬರ್ 17 ರಂದು ರಾಷ್ಟ್ರೀಯ ಅಪಸ್ಮಾರ ದಿನ ಅಥವಾ ಮೂರ್ಛೆ ರೋಗ ದಿನವನ್ನು ಆಚರಿಸಲಾಗುತ್ತದೆ. ಇದು ಮೆದುಳಿಗೆ ಸಂಬಂಧಪಟ್ಟ ಕಾಯಿಲೆಯಾಗಿದ್ದು, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಆಚರಿಸಲಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಎಪಿಲೆಪ್ಸಿ(Epilepsy) ಎಂದು ಕರೆಯಲಾಗುತ್ತದೆ. ಜೊತೆಗೆ ಫಿಟ್ಸ್ ಎಂದು ಕೂಡ ಇದನ್ನು ಕರೆಯಲಾಗುತ್ತದೆ.

ಯಾವುದೇ ಸ್ಪಷ್ಟ ಕಾರಣವಿಲ್ಲದೆ ನೀವು ಇದ್ದಕ್ಕಿದ್ದಂತೆ ಬೀಳುತ್ತೀರಾ ಅಥವಾ ಪ್ರಜ್ಞಾಹೀನರಾಗುತ್ತೀರಾ? ಬಾಯಿಯಿಂದ ನೊರೆಯುಂಟಾಗುತ್ತಿದೆಯೇ? ಇದು ಮೂರ್ಛೆ ರೋಗದ ಪ್ರಮುಖ ಲಕ್ಷಣವಾಗಿದ್ದು ಪ್ರಾರಂಭದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯವಾಗಿದೆ.

ಮೂರ್ಛೆರೋಗದಿಂದ ಬಳಲುತ್ತಿರುವವ ವ್ಯಕ್ತಿ ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ. ಯಾಕೆಂದರೆ ಯಾವುದೇ ಕಾರಣಗಳಿಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಪ್ರಜ್ಞಾಹೀನನಾಗಿ ಬೀಳುವುದರಿಂದ ತನ್ನಿಂದ ಇತರರಿಗೂ ತೊಂದರೆಯನ್ನುಂಟು ಮಾಡಿದೆ ಎಂಬ ಚಿಂತೆ ಆತನಲ್ಲಿ ಕಾಡುತ್ತಿರುತ್ತದೆ. ಆದ್ದರಿಂದ ಮೂರ್ಛೆರೋಗದ ಜೊತೆಗೆ ಸಾಕಷ್ಟು ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ ಎಂದು ಸಂಶೋಧನೆಯ ಮೂಲಕ ತಿಳಿದು ಬಂದಿದೆ.

ಮಕ್ಕಳಲ್ಲಿ ಈ ಕಾಯಿಲೆಯು ಜನ್ಮ ಗಾಯಗಳು, ಜ್ವರ, ಸೋಂಕು ಮತ್ತು ತಲೆಗೆ ಆಘಾತ ಮುಂತಾದವುಳಿಂದ ಕಂಡುಬರುತ್ತದೆ. ವಯಸ್ಕರಲ್ಲಿ ತಲೆಗೆ ಗಾಯ, ಆಲ್ಕೋಹಾಲ್, ಡ್ರಗ್ಸ್, ಜೆನೆಟಿಕ್ ಅಂಶಗಳು, ಪಾರ್ಶ್ವವಾಯು ಮತ್ತು ಪೆರಿನಾಟಲ್ ಅಸ್ವಸ್ಥತೆಗಳು ಕಾರಣವಾಗಬಹುದು.

ಆದರೆ ಸಾಕಷ್ಟು ಜನರಲ್ಲಿ ಇದು ಯಾವ ಕಾರಣಕ್ಕೆ ಸಂಭವಿಸುತ್ತದೆ ಎಂಬುದರ ಎಂಬುದರ ಕುರಿತು ತಿಳಿದಿಲ್ಲ. ನಿಮ್ಮನ್ನು ದುರ್ಬಲರನ್ನಾಗಿಸುವ ಈ ರೋಗದ ಕುರಿತು ನೀವು ತಿಳಿದುಕೊಂಡು ಸರಿಯಾದ ಚಿಕಿತ್ಸೆಯನ್ನು ಪಡೆಯುವುದು ಅತ್ಯಂತ ಅಗತ್ಯವಾಗಿದೆ.

ಸಾಮಾನ್ಯವಾಗಿ ಈ ಕಾಯಿಲೆಯಿಂದಾಗಿ ಮೂರ್ಛೆ ಬಿದ್ದವರಿಗೆ ಕಬ್ಬಿಣದ ವಸ್ತುಗಳು, ಹಾಗೂ ಹೆಚ್ಚಾಗಿ ಕೀಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಕೊಡಲಾಗುತ್ತದೆ. ಇದ್ದರಿಂದ ಆ ಕ್ಷಣಕ್ಕೆ ಪರಿಹಾರ ಸಿಗಬಹುದೇ ವಿನಹ ಇದುವೇ ಶಾಶ್ವತ ಪರಿಹಾರವಲ್ಲ. ಆದ್ದರಿಂದ ಆದಷ್ಟು ಇದಕ್ಕೆ ಸಂಬಂಧಿಸಿದ ತಜ್ಞರನ್ನು ಭೇಟಿ ಮಾಡಿ. ಈ ಕಾಯಿಲೆಗೆ ಪ್ರಾರಂಭದಲ್ಲೇ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ.

ಈ ಕಾಯಿಲೆಯ ಪ್ರಮುಖ ಲಕ್ಷಣವೆಂದರೆ: ಯಾವುದೇ ಕಾರಣವಿಲ್ಲದೆ ಆಕಸ್ಮಿಕವಾಗಿ ನೀವು ಕುಸಿದು ಬಿದ್ದರೆ ಇದು ಈ ಕಾಯಿಲೆಯ ಲಕ್ಷಣವಾಗಿರಬಹುದು. ಯಾವುದೇ ಸಂಕ್ಷಿಪ್ತ ಅವಧಿಗೆ ಶಬ್ದ ಅಥವಾ ಪದಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗದಿರುವುದು.

ಇದನ್ನು ಓದಿ: ಬಾಯಿ ಹುಣ್ಣು ನಿಮಗೆ ಸಾಕಷ್ಟು ತೊಂದರೆಯನ್ನುಂಟು ಮಾಡುತ್ತಿದೆಯೇ? ಆಯುರ್ವೇದ ತಜ್ಞರ ಸಲಹೆಯನ್ನು ಪಾಲಿಸಿ

ನೀವು ಈಕಾಯಿಲೆಗೆ ಪ್ರಾರಂಭದಲ್ಲಿಯೇ ಸೂಕ್ತ ಚಿಕಿತ್ಸೆ ನೀಡದ್ದಿದ್ದರೆ ಕಾಲ ನಂತರದಲ್ಲಿ ಶಸ್ತ್ರ ಕ್ರಿಯೆಯ ವರೆಗೆ ತಲುಪುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಯಾವುದೇ ಕಾಯಿಲೆಯನ್ನು ನಿರ್ಲಕ್ಷಿಸಲು ಹೋಗದಿರಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ