Masters Tournament 2023: ಮಾಸ್ಟರ್ಸ್ ಗಾಲ್ಫ್ ಟೂರ್ನಮೆಂಟ್‌ನಲ್ಲಿ ದೊರೆಯಲಿದೆ ಅಗ್ಗದ ಬೆಲೆಯ ಆಹಾರಗಳು

|

Updated on: Apr 07, 2023 | 2:34 PM

ವೈರಲ್ ಟ್ವೀಟ್‌ನಲ್ಲಿ ಗಾಲ್ಫ್ ಪಂದ್ಯಾವಳಿಯ ಸಮಯದಲ್ಲಿ ನೀಡಲಾಗುವ ಅಗ್ಗದ ಬೆಲೆಯ ಆಹಾರ ಮತ್ತು ಮದ್ಯದ ಮೆನುವನ್ನು ನೋಡಬಹುದು. ಈ ಟ್ವೀಟ್ ನೆಟ್ಟಿಗರ ಗಮನಸೆಳೆದಿದೆ.

Masters Tournament 2023: ಮಾಸ್ಟರ್ಸ್ ಗಾಲ್ಫ್ ಟೂರ್ನಮೆಂಟ್‌ನಲ್ಲಿ ದೊರೆಯಲಿದೆ ಅಗ್ಗದ ಬೆಲೆಯ ಆಹಾರಗಳು
ವೈರಲ್ ಫೋಟೋ
Follow us on

ಅತಿದೊಡ್ಡ ಗಾಲ್ಫ್ ಪಂದ್ಯಾವಳಿಗಳಲ್ಲಿ ಒಂದಾದ  ಮಾಸ್ಟರ್ಸ್ 2023 ಇದೇ ತಿಂಗಳಲ್ಲಿ ಪ್ರಾರಂಭವಾಗಲಿದೆ. ಮಾಸ್ಟರ್ಸ್ (masters) ಟೂರ್ನಮೆಂಟ್ ನ 87ನೇ ಆವೃತ್ತಿಯು ಜಾರ್ಬಿಯಾದ ಆಗಸ್ಟಾದಲ್ಲಿರುವ ಆಗಸ್ಟಾ ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ನಡೆಯಲಿದೆ. ಗಾಲ್ಫ್ ಮಾಸ್ಟರ್ಸ್ ಪ್ರೇಮಿಗಳು ಮಾಸ್ರ‍್ಸ್ ಟೂರ್ನಮೆಂಟ್ 2023 ಪಂದ್ಯಾವಳಿಯನ್ನು ಲೈವ್ ಆಗಿ ವೀಕ್ಷಿಸಲು ಉತ್ಸುಕರಾಗಿದ್ದಾರೆ. ಜೊತೆಗೆ ಅವರು ಈಗ ಎದುರು ನೋಡುತ್ತಿರುವ ಇನ್ನೊಂದು ವಿಷಯವೇನೆಂದರೆ ಅದು ಟೂರ್ನಮೆಂಟ್‌ನಲ್ಲಿನ ರಿಯಾಯಿತಿ ದರದ ಆಹಾರ ಮತ್ತು ಪಾನೀಯಗಳ ಮೆನು. ಈ ಕಡಿಮೆ ಬೆಲೆಯ ಆಹಾರದ ಮೆನು ಟ್ವಿಟರ್‌ನಲ್ಲಿ ವೈರಲ್ ಆಗಿ ಎಲ್ಲರ ಗಮನ ಸೆಳೆದಿದೆ. ಫ್ರಂಟ್ ಆಫೀಸ್ ಸ್ಪೋರ್ಟ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ಟ್ವೀಟ್ ಪ್ರಕಾರ, ಟೂರ್ನಮೆಂಟ್ ಸ್ಥಳದಲ್ಲಿ ಆಹಾರ ಮತ್ತು ಮದ್ಯವನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು. ಟ್ವೀಟ್‌ನಲ್ಲಿರುವ ಆಹಾರದ ಮೆನುವಿನ ಚಿತ್ರದಲ್ಲಿ ಆಹಾರದ ರಿಯಾಯಿತಿಯ ದರವನ್ನು ಕಾಣಬಹುದು. 2023 ಮಾಸ್ರ‍್ಸ್ ರಿಯಾತಿಯ ಬೆಲೆಗಳು ಇಲ್ಲಿವೆ. 66 ಡಾಲರ್‌ಗೆ ನೀವು ಮೆನುವಿನಲ್ಲಿರುವ ಪ್ರತಿ ಐಟಂಗಳಲ್ಲಿ ಒಂದನ್ನು ಖರೀದಿಸಬಹುದು ಎಂಬ ಶೀರ್ಷಿಕೆಯನ್ನು ಟ್ವಿಟರ್ ಪೋಸ್ಟ್​​ನಲ್ಲಿ ನೀಡಲಾಗಿದೆ.

ಯಾವುದೇ ಆಹಾರ ಪದಾರ್ಥಗಳ ಬೆಲೆಯು 3 ಡಾಲರ್ (೨೫೦ ರೂ) ಗಿಂತ ಹೆಚ್ಚಿಲ್ಲ ಎಂಬುದನ್ನು ಆ ಮೆನುವಿನ ಚಿತ್ರದಲ್ಲಿ ಗಮನಿಸಬಹುದು. ನೀವು ಎಗ್‌ಸ್ಯಾಂಡ್‌ವಿಚ್, ಚಾಕೊಲೇಟ್ ಕುಕೀಸ್, ಚೀಸ್, ಪಾಪ್‌ಕಾರ್ನ್, ಮಿಠಾಯಿಗಳು ಹಾಗೂ ಇತರ ತಿಂಡಿಗಳನ್ನು ಇಲ್ಲಿ 1.5 ಡಾಲರ್‌ಗಿಂತಲು ಕಡಿಮೆ ಬೆಲೆಗೆ ಪಡೆಯಬಹುದು. ಚಹಾ, ನಿಂಬೆ ಜ್ಯೂಸ್ ಮತ್ತು ಕಾಫಿಯಂತಹ ಪಾನೀಯಗಳನ್ನು ಫ್ಲಾಟ್ 2 ಡಾಲರ್‌ಗೆ ಪಡೆಯಬಹುದು. ಮೆನುವಿನಲ್ಲಿರುವ ಇತರ ಐಟಂಗಳು ಜಾರ್ಜಿಯಾ ಪೀಚ್ ಐಸ್‌ಕ್ರೀಮ್, ಸ್ಯಾಂಡ್ವಿಚ್, ಹ್ಯಾಮ್ ಮತ್ತು ಚೀಸ್, ಚಿಕನ್ ಸಲಾಡ್. ಬಿಯರ್ ಬೆಲೆ 5 ಡಾಲರ್ ಹಾಗೂ ವೈನ್ ಬೆಲೆ 6 ಡಾಲರ್ ಆಗಿದೆ.

ಇದನ್ನೂ ಓದಿ: Heat stroke to food poisoning; ಬೇಸಿಗೆಯಲ್ಲಿ ನಿಮ್ಮ ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳಬಹುದು, ವೈದ್ಯರ ಸಲಹೆ ಇಲ್ಲಿದೆ

ಟ್ವಿಟರ್‌ನಲ್ಲಿ ವೈರಲ್ ಆಗಿರುವ ಈ ಮೆನುವಿನ ಪೋಸ್ಟ್ ಆಹಾರಪ್ರಿಯರ ಗಮನಸೆಳೆಯುತ್ತಿದೆ. ಈ ಪೋಸ್ಟ್​​ಗೆ ಹಲವರು ಸಕರಾತ್ಮಕ ಕಮೆಂಟ್‌ಗಳು ಬಂದಿದೆ. ಕೆಲವು ಬಳಕೆದಾರರು ಈ ಅಗ್ಗದ ಬೆಲೆಯ ತಿನಿಸುಗಳನ್ನು ಸವಿಯಲು ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ನಾವು ಈ ಮೆನುವನ್ನು ನೋಡಿ ಗಾಲ್ಫ್ ಕ್ರೀಡೆಯ ಅಭಿಮಾನಿಗಳಾಗಿದ್ದೇವೆ ಎಂದು ತಮಾಷೆಯ ಕಮೆಂಟ್‌ಗಳನ್ನು ಬರೆದುಕೊಂಡಿದ್ದಾರೆ.