Heat stroke to food poisoning; ಬೇಸಿಗೆಯಲ್ಲಿ ನಿಮ್ಮ ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳಬಹುದು, ವೈದ್ಯರ ಸಲಹೆ ಇಲ್ಲಿದೆ

ಬೇಸಿಗೆಯ ಋತುವಿನಲ್ಲಿ ಮಕ್ಕಳಿಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಶಾಖ ಸಂಬಂಧಿತ ಕಾಯಿಲೆಗಳು ಉಂಟಾಗಬಹುದು. ಪೋಷಕರು ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಕುರಿತ ಮಾಹಿತಿ ಇಲ್ಲಿದೆ.

Heat stroke to food poisoning; ಬೇಸಿಗೆಯಲ್ಲಿ ನಿಮ್ಮ ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳಬಹುದು, ವೈದ್ಯರ ಸಲಹೆ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 01, 2023 | 6:22 PM

ಬೇಸಿಗೆಯಲ್ಲಿ ವಿಶೇಷವಾಗಿ ಮಕ್ಕಳು ತುಂಬಾ ತಮಾಷೆಯ ಹಾಗೂ ಖುಷಿಯ ಮನಸ್ಥಿತಿಯಲ್ಲಿರುತ್ತಾರೆ ಏಕೆಂದರೆ ಇದು ಅವರಿಗೆ ರಜೆಯ ಸಮಯವಾಗಿದೆ. ಈ ಬೇಸಿಗೆ ರಜೆಯಲ್ಲಿ ಮಕ್ಕಳು ಹೆಚ್ಚಿನ ಸಮಯ ಮನೆಯಿಂದ ಹೊರಗೆ ಆಟವಾಡುತ್ತಾ ಸಮಯವನ್ನು ಕಳೆಯುತ್ತಿರುತ್ತಾರೆ. ಹಾಗೂ ನೈರ್ಮಲ್ಯದ ಬಗ್ಗೆ ಗಮನಹರಿಸುವುದಿಲ್ಲ. ಆದ್ದರಿಂದ ಅವರು ಈ ಋತುಮಾನದ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮಕ್ಕಳು ಹೆಚ್ಚಾಗಿ ಹೊರಗಡೆ ಆಟವಾಡುವುದರಿಂದ ನಿರ್ಜಲೀಕರಣ, ಹೀಟ್ ಸ್ಟೊಕ್, ಶಾಖದ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳು ಬೇಸಿಗೆಯಲ್ಲಿ ಏನು ಸೇವಿಸುತ್ತಿದ್ದಾರೆ ಎಂಬುದರ ಬಗ್ಗೆ ಗಮನಹರಿಸಬೇಕು. ಏಕೆಂದರೆ ಜಂಕ್ ಫುಡ್ ಮತ್ತು ಸಕ್ಕರೆ ತುಂಬಿದ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ಚಿಕ್ಕ ಮಕ್ಕಳಲ್ಲಿ ಆಮ್ಲೀಯತೆ ಮತ್ತು ಮಲಬದ್ಧತೆ ಉಂಟಾಗುತ್ತದೆ.

ಚಳಿಗಾಲದಂತೆಯೇ, ಬೇಸಿಗೆಯ ಋತುವಿನಲ್ಲೂ ಸಹ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಈ ಸಮಯದಲ್ಲಿ ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಜಾಗರೂಕರಾಗಿರಬೇಕು ಮತ್ತು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸಬೇಕು ಎಂದು ಖಾರ್ಘರ್‌ನ ಮದರ್‌ಹುಡ್ ಆಸ್ಪತ್ರೆಯ ನಿಯೋನಾಟಾಲಜಿಸ್ಟ್ ಮತ್ತು ಮಕ್ಕಳ ವೈದ್ಯರಾದ ಡಾ. ಸುರೇಶ್ ಬಿರಾಜದರ್ ಹೇಳುತ್ತಾರೆ. ಹಾಗೂ ಅವರು ಸಾಮಾನ್ಯ ಬೇಸಿಗೆಯ ಆರೊಗ್ಯ ಸಮಸ್ಯೆಗಳು ಮತ್ತು ಅವುಗಳನ್ನು ನಿರ್ವಹಿಸಲು ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ನೀರಿನಿಂದ ಹರಡುವ ರೋಗಗಳು: ಕಲುಷಿತ ನೀರನ್ನು ಕುಡಿಯುವುದರಿಂದ ನಿಮ್ಮ ಮಗುವಿನ ಆರೋಗ್ಯಕ್ಕೆ ಹಾನಿಯುಂಟುಮಾಡುವ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಬೆಸಿಗೆಯ ಕಾಲದಲ್ಲಿ ಮಕ್ಕಳು ಟೈಫಾಯಿಡ್, ಅತಿಸಾರ, ಕಾಲರಾ, ಕಾಮಾಲೆ ಮತ್ತು ಭೇದಿ ಮುಂತಾದ ಕಾಯಿಲೆಗಳಿಗೆ ತುತ್ತಾಗಬಹುದು. ರಜೆಯಲ್ಲಿ ಮಕ್ಕಳೊಂದಿಗೆ ಪ್ರಯಾಣಿಸುವಾಗ ಪೋಷಕರು ನೀರಿನ ಬಾಟಲಿಯನ್ನು ಅಗತ್ಯವಾಗಿ ಕೊಂಡೊಯ್ಯಬೇಕು. ಅಲ್ಲದೆ ಚೆನ್ನಾಗಿ ಕುದಿಸಿದ ನೀರನ್ನೇ ಮಕ್ಕಳಿಗೆ ಕುಡಿಯಲು ಕೊಡಬೇಕು.

ಉರಿಯೂತ (ಗುಲಾಬಿ ಕಣ್ಣು): ಇದೊಂದು ರೀತಿಯ ಉರಿಯೂತವಾಗಿದೆ. ಇದು ಕೆಂಪು, ತುರಿಕೆ ಮತ್ತು ಕಣ್ಣಿನ ಉರಿಯೂತವನ್ನು ಉಂಟುಮಾಡುತ್ತದೆ. ಆದ್ದರಿಂದ ಪೋಷಕರು ಸಮಯೋಚಿತವಾಗಿ ಮಕ್ಕಳ ಆರೋಗ್ಯವನ್ನು ಪರಿಶೀಲಿಸುತ್ತಿರಬೇಕು. ವೈದ್ಯರು ಸೂಚಿಸಿದ ಕಣ್ಣಿನ ಡ್ರಾಪ್ಸ್ಗನ್ನು ಮಾತ್ರ ಕಣ್ಣಿಗೆ ಹಾಕಬೇಕು. ಉರಿಯೂತವು ಸಾಂಕ್ರಾಮಿಕವಾಗಿರುವುದರಿAದ ನಿಮ್ಮ ಕಣ್ಣುಗಳನ್ನು ಉಜ್ಜಬೇಡಿ.

ಕೆಮ್ಮು: ಬೇಸಿಗೆಯಲ್ಲಿ ಮಕ್ಕಳು ಐಸ್‌ಕ್ರೀಮ್ ಮತ್ತು ತಂಪು ಪಾನೀಯಗಳನ್ನು ಸೇವಿಸುತ್ತಿರುತ್ತಾರೆ. ಇದು ಗಂಟಲಿನ ದಟ್ಟಣೆಗೆ ಕಾರಣವಾಗಬಹುದು. ಈ ರೀತಿಯ ಆಹಾರವನ್ನು ಮಿತವಾಗಿ ಸೇವಿಸಲು ಸಲಹೆಯನ್ನು ನೀಡಲಾಗುತ್ತದೆ. ಹಾಗಾಗಿ ಮಕ್ಕಳಿಗೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ನೀಡುವ ಮೂಲಕ ಮಕ್ಕಳ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಿ.

ಮೂತ್ರನಾಳದ ಸೋಂಕು: ಇದು ಮೂತ್ರಪಿಂಡಗಳು, ಮೂತ್ರನಾಳಗಳು, ಮೂತ್ರಕೋಶ ಸೇರಿದಂತೆ ನಿಮ್ಮ ಮೂತ್ರದ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಭಾಗದಲ್ಲಿ ಸೋಂಕನ್ನು ಉಂಟುಮಾಡಬಹುದು. ಮಕ್ಕಳು ಸಾಕಷ್ಟು ಪ್ರಮಾಣದ ನೀರನ್ನು ಕುಡಿಯದಿದ್ದರೆ, ಬೇಸಿಗೆಯಲ್ಲಿ ಮಕ್ಕಳಲ್ಲಿ ಮೂತ್ರನಾಳದ ಸೋಂಕಿನ ಪ್ರಕರಣಗಳು ಕಂಡುಬರುತ್ತವೆ. ಮಕ್ಕಳು ಉತ್ತಮ ವೈಯಕ್ತಿಕ ನೈರ್ಮಲ್ಯ ಅಭ್ಯಾಸಗಳನ್ನು ಅನುಸರಿಸುವಂತೆ ಪೋಷಕರು ನೋಡಿಕೊಳ್ಳಬೇಕು.

ಇದನ್ನೂ ಓದಿ: Health Tips: ಬ್ಲ್ಯಾಕ್​​ ಕಾಫಿ ಕುಡಿಯಲು ಸರಿಯಾದ ಸಮಯ ಯಾವುದು? ತಜ್ಞರು ಹೇಳುವುದೇನು?

ವಿಷಪೂರಿತ ಆಹಾರ: ಕಲುಷಿತ ಆಹಾರ ಅಥವಾ ಕಲುಷಿತ ನೀರನ್ನು ಮಕ್ಕಳು ಸೇವಿಸಿದರೆ ಮಗುವಿಗೆ ಹೊಟ್ಟೆನೋವು, ವಾಕರಿಕೆ, ಅತಿಸಾರ ಅಥವಾ ವಾಂತಿ ಮುಂತಾದ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ರಸ್ತೆಬದಿಯ ಆಹಾರವನ್ನು ಸೇವನೆ ಮಾಡುವುದನ್ನು ತಪ್ಪಿಸಿ.

ನಿರ್ಜಲೀಕರಣ: ಸುಡುವ ಶಾಖವು ಮಕ್ಕಳನ್ನು ನಿರ್ಜಲೀಕರಣಗೊಳಿಸುತ್ತದೆ. ಎಲೆಕ್ಟೊಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಮಗುವಿಗೆ ಸಾಕಷ್ಟು ಪ್ರಮಾಣದ ನೀರನ್ನು ಕುಡಿಸಬೇಕು. ಅಲ್ಲದೆ ಹೈಡ್ರೇಟೆಡ್ ಆಗಿರಲು ಸೀಯಾಳ, ಮಜ್ಜಿಗೆ ಹಾಗೂ ನಿಂಬೆ ಹಣ್ಣಿನ ನೀರನ್ನು ಮಕ್ಕಳಿಗೆ ನೀಡಿ. ಕಲ್ಲಂಗಡಿ ಹಾಗೂ ಸೌತೆಕಯಿಯನ್ನು ಹೆಚ್ಚಾಗಿ ಸೇವಿಸಲು ನೀಡಿ. ಹಾಗೂ ಹೆಚ್ಚು ಸಕ್ಕರೆಯುಕ್ತ ಹಣ್ಣಿನ ಜ್ಯೂಸ್ ಹಾಗೂ ನಿಂಬೆ ಪಾನಕವನ್ನು ನೀಡುವುದನ್ನು ತಪ್ಪಿಸಿ.

ಬಿಸಿಲಿನ ಹೊಡೆತ: ಮಕ್ಕಳು ಸರಿಯಾದ ಆರೈಕೆಯನ್ನು ತೆಗೆದುಕೊಳ್ಳದೆ ಬಿಸಿಲಿನಲ್ಲಿ ಹೋದರೆ ಬಿಸಿಲಿನ ಹೊಡೆತಕ್ಕೆ ಮಕ್ಕಳು ಗುರಿಯಾಗಬಹುದು. ಇದರಿಂದ ಮಕ್ಕಳಿಗೆ ಜ್ವರ ಕೂಡಾ ಉಂಟಾಗಬಹುದು. ಆದ್ದರಿಂದ ಹೆಚ್ಚು ಬಿಸಿಲು ಇರುವಾಗ ಅಂದರೆ ಮಧ್ಯಾಹ್ನ 1 ರಿಂದ ಸಂಜೆ 4 ಗಂಟೆಯ ವರೆಗೆ ಮಕ್ಕಳನ್ನು ಮನೆಯಿಂದ ಹೊರಗೆ ಹೋಗಲು ಬಿಡಬೇಡಿ.

Published On - 6:22 pm, Sat, 1 April 23