AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಬ್ಲ್ಯಾಕ್​​ ಕಾಫಿ ಕುಡಿಯಲು ಸರಿಯಾದ ಸಮಯ ಯಾವುದು? ತಜ್ಞರು ಹೇಳುವುದೇನು?

ಬ್ಲ್ಯಾಕ್​​ ಕಾಫಿ ಕುಡಿಯುವುದರಿಂದ ಅದು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಹಾಗೂ ಬ್ಲ್ಯಾಕ್​​ ಕಾಫಿ ಕುಡಿಯುವ ಸರಿಯಾದ ಸಮಯ ಯಾವುದು ಎಂಬೆಲ್ಲಾ ವಿಷಯಗಳ ಕುರಿತು ಆರೋಗ್ಯ ತಜ್ಞರಾದ ಪೂಜಾ ಶೆಲತ್ ಮಾಹಿತಿ ನೀಡಿದ್ದಾರೆ.

Health Tips: ಬ್ಲ್ಯಾಕ್​​ ಕಾಫಿ ಕುಡಿಯಲು ಸರಿಯಾದ ಸಮಯ ಯಾವುದು? ತಜ್ಞರು ಹೇಳುವುದೇನು?
ಬ್ಲ್ಯಾಕ್​​ ಕಾಫಿ ಕುಡಿಯಲು ಸರಿಯಾದ ಸಮಯImage Credit source: Black Insomnia Coffee
ಅಕ್ಷತಾ ವರ್ಕಾಡಿ
|

Updated on: Apr 01, 2023 | 3:06 PM

Share

ಮುಖ್ಯಾಂಶಗಳು

  • ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ಬ್ಲ್ಯಾಕ್​​ ಕಾಫಿ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ ಎಂದು ಸಾಕಷ್ಟು ಅಧ್ಯಯನಗಳು ತಿಳಿಸುತ್ತದೆ.
  • ಬ್ಲ್ಯಾಕ್ ​​ ಕಾಫಿ ನಿಯಮಿತವಾಗಿ ಕುಡಿಯುವುದರಿಂದ ಟೈಪ್ 2 ಮಧುಮೇಹ ಬರುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು ಮತ್ತು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು ಅಧ್ಯಯನವು ಕಂಡುಕೊಂಡಿದೆ. ಜೊತೆಗೆ ಪಾರ್ಕಿನ್ಸನ್ ಕಾಯಿಲೆ ಮತ್ತು ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.
  • ನಿಮ್ಮ ದೇಹದಲ್ಲಿ ಕಾರ್ಟಿಸೋಲ್ ಮಟ್ಟವು ಕಡಿಮೆ ಇರುವಾಗ ಅಂದರೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 11 ಗಂಟೆಯೊಳಗೆ ಬ್ಲ್ಯಾಕ್​​ ಕಾಫಿ ಕುಡಿಯಲು ಸರಿಯಾದ ಸಮಯ ಎಂದು ಅವರು ಸಲಹೆ ನೀಡುತ್ತಾರೆ.

ಒಂದು ಕಪ್​​​ ಕಾಫಿ ಇಲ್ಲದಿದ್ದರೆ ದಿನವೇ ಅಪೂರ್ಣ ಎನ್ನುವ ಸಾಕಷ್ಟು ಕಾಫಿ ಪ್ರಿಯರನ್ನು ಕಾಣಬಹುದು. ಆದರೆ ಅತಿಯಾದ ಅಮೃತವು ವಿಷ ಎನ್ನುವ ಮಾತಿಗೆ. ಹೌದು ಕಾಫಿ ಅತಿಯಾಗಿ ಕುಡಿಯುವುದರಿಂದ ಕೆಫೀನ್​​​​ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು. ಸಾಕಷ್ಟು ಜನರು ಹಾಲಿನ ಕಾಫಿಯ ಬದಲಾಗಿ ಬ್ಲ್ಯಾಕ್​​ ಕಾಫಿ ಕುಡಿಯಲು ಇಷ್ಟ ಪಡುತ್ತಾರೆ. ಬ್ಲ್ಯಾಕ್​​ ಕಾಫಿ ಕುಡಿಯುವುದರಿಂದ ಅದು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಹಾಗೂ ಬ್ಲ್ಯಾಕ್​​ ಕಾಫಿ ಕುಡಿಯುವ ಸರಿಯಾದ ಸಮಯ ಯಾವುದು ಎಂಬೆಲ್ಲಾ ವಿಷಯಗಳ ಕುರಿತು ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ಬ್ಲ್ಯಾಕ್​​ ಕಾಫಿ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ ಎಂದು ಸಾಕಷ್ಟು ಅಧ್ಯಯನಗಳು ತಿಳಿಸುತ್ತದೆ. ಬ್ಲ್ಯಾಕ್​​ ಕಾಫಿ ನಿಯಮಿತವಾಗಿ ಕುಡಿಯುವುದರಿಂದ ಟೈಪ್ 2 ಮಧುಮೇಹ ಬರುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು ಮತ್ತು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು ಅಧ್ಯಯನವು ಕಂಡುಕೊಂಡಿದೆ. ಜೊತೆಗೆ ಪಾರ್ಕಿನ್ಸನ್ ಕಾಯಿಲೆ ಮತ್ತು ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ಇದಲ್ಲದೇ ಬ್ಲ್ಯಾಕ್​​ ಕಾಫಿ ಅತಿಯಾಗಿ ಕುಡಿಯುವುದರಿಂದ ಎದೆಯುರಿ, ಹೆದರಿಕೆ ಅಥವಾ ನಿದ್ರಾಹೀನತೆಗೂ ಕಾರಣವಾಗಬಹುದು.ಆದ್ದರಿಂದ ನಿಯಮಿತವಾಗಿರಲಿ.

ಇದನ್ನೂ ಓದಿ: ಚಾಣಕ್ಯನ ಪ್ರಕಾರ ನಿಜವಾದ ಗೆಳೆಯ ಯಾರು? ಅವರ ಗುಣ ತಿಳಿಯುವುದು ಹೇಗೆ?

ಬ್ಲ್ಯಾಕ್​​ ಕಾಫಿ ಕುಡಿಯಲು ಉತ್ತಮ ಸಮಯ ಯಾವುದು?

ಆರೋಗ್ಯ ತಜ್ಞರಾದ ಪೂಜಾ ಶೆಲತ್, ಬ್ಲ್ಯಾಕ್​​ ಕಾಫಿ ಕುಡಿಯಲು ಸರಿಯಾದ ಸಮಯದ ಕುರಿತು ಮಾಹಿತಿ ನೀಡಿದ್ದಾರೆ. ನಿಮ್ಮ ದೇಹದಲ್ಲಿ ಕಾರ್ಟಿಸೋಲ್ ಮಟ್ಟವು ಕಡಿಮೆ ಇರುವಾಗ ಅಂದರೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 11 ಗಂಟೆಯೊಳಗೆ ಬ್ಲ್ಯಾಕ್​​ ಕಾಫಿ ಕುಡಿಯಲು ಸರಿಯಾದ ಸಮಯ ಎಂದು ಅವರು ಸಲಹೆ ನೀಡುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!