AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Summer Wedding Style: ಈ ಸೆಕೆಗೆ ಮದುವೆ ಸಮಾರಂಭಗಳಲ್ಲಿ ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು?

ಬೇಸಿಗೆ ಪ್ರಾರಂಭವಾಗಿದೆ, ಜೊತೆಗೆ ಇದು ಮದುವೆಯ ಸೀಸನ್ ಕೂಡ ಹೌದು. ಆದರೆ ಈ ಸುಡು ಬಿಸಿಲು ಹಾಗೂ ಸೆಕೆಯ ಮದುವೆ ಸಮಾರಂಭಗಳಲ್ಲಿ ಹೇಗಪ್ಪ ಭಾಗಿಯಾಗಿವುದು ಎಂಬುದು ಸಾಕಷ್ಟು ಜನರ ಚಿಂತೆ.

Summer Wedding Style: ಈ ಸೆಕೆಗೆ ಮದುವೆ ಸಮಾರಂಭಗಳಲ್ಲಿ ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು?
ಅಕ್ಷತಾ ವರ್ಕಾಡಿ
|

Updated on:Apr 01, 2023 | 2:04 PM

Share

ಬೇಸಿಗೆ ಪ್ರಾರಂಭವಾಗಿದೆ, ಜೊತೆಗೆ ಇದು ಮದುವೆಯ ಸೀಸನ್ ಕೂಡ ಹೌದು. ಆದರೆ ಈ ಸುಡು ಬಿಸಿಲು ಹಾಗೂ ಸೆಕೆಯ ಮದುವೆ ಸಮಾರಂಭಗಳಲ್ಲಿ ಹೇಗಪ್ಪ ಭಾಗಿಯಾಗಿವುದು ಎಂಬುದು ಸಾಕಷ್ಟು ಜನರ ಚಿಂತೆ. ಹೌದು ಮದುವೆ ಸಮಾರಂಭಗಳಿಗಾಗಿಯೇ ದುಬಾರಿ ಬೆಲೆಯ ಬಟ್ಟೆಗಳನ್ನು, ಆಭರಣಗಳನ್ನು ಧರಿಸುವುದಂತೂ ಸಾಮಾನ್ಯ. ಆದರೆ ಬೇಸಿಗೆಯಲ್ಲಿ ಸಾಕಷ್ಟು ಆಭರಣಗಳು ಹಾಗೂ ಗ್ರ್ಯಾಂಡ್​​ ಬಟ್ಟೆಗಳು ಸಾಕಷ್ಟು ಕಿರಿ ಕಿರಿಯನ್ನುಂಟು ಮಾಡುತ್ತವೆ. ಆದ್ದರಿಂದ ಈ ಬೇಸಿಗೆಯಲ್ಲಿ ಮದುವೆ ಸಮಾರಂಭಗಳಿಗೆ ಯಾವ ರೀತಿ ಬಟ್ಟೆಗಳನ್ನು ಧರಿಸಬೇಕು ಎಂದು ಕಾಸ್ಟೂಮ್​​​ ಡಿಸೈನರ್ ರಿಧಿ ಮೆಹ್ರಾ ಹೆಚ್​​​ ಟಿ ಲೈಫ್‌ಸ್ಟೈಲ್​ನ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ.

ಮದುವೆ ಸಮಾರಂಭಗಳಲ್ಲಿ ಸಾಮಾನ್ಯ ವಧು ವರರಿಗೆ ಗಾಢ ಬಣ್ಣದ ಬಟ್ಟೆಗಳನ್ನೇ ಆಯ್ಕೆ ಮಾಡುತ್ತಾರೆ. ಗಾಢ ಕೆಂಪು, ಕೇಸರಿ , ಹಳದಿ ಬಣ್ಣಗಳನ್ನು ಆಯ್ಕೆ ಮಾಡುತ್ತಾರೆ. ಆದರೆ ವಿಶೇಷವಾಗಿ ಬೇಸಿಗೆಯಲ್ಲಿ ಇಂತಹ ಬಟ್ಟೆಗಳು ಅಧಿಕ ಸೆಕೆ ಹಾಗೂ ಸಾಕಷ್ಟು ಕಿರಿಕಿರಿಯನ್ನುಂಟು ಮಾಡಬಹುದು. ಆದ್ದರಿಂದ ಈ ಗಾಢ ಬಣ್ಣದ ಬಟ್ಟೆಗಳಿಗೆ ಪರ್ಯಾಯವಾಗಿ ಲ್ಯಾವೆಂಡರ್, ತಿಳಿ ನೀಲಿಬಣ್ಣದ ಛಾಯೆಗಳು ಬೇಸಿಗೆಯ ವಿವಾಹಗಳಿಗೆ ಹಸಿರು ಮತ್ತು ಪುಡಿ ನೀಲಿ ಬಣ್ಣವು ಉತ್ತಮ ಆಯ್ಕೆಯಾಗಿದೆ ಎಂದು ರಿಧಿ ಮೆಹ್ರಾ ಹೇಳುತ್ತಾರೆ.

ಇದನ್ನೂ ಓದಿ: ನಿಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಇದ್ದಿಲಿನ ಪಾತ್ರವನ್ನು ತಿಳಿದುಕೊಳ್ಳಿ

ಸಾಮಾನ್ಯವಾಗಿ ಮದುವೆ ಸಮಾರಂಭವೆಂದರೆ ಲೆಹೆಂಗಾ, ಸೀರೆಗಳೇ ಮೊದಲ ಆಯ್ಕೆಯಾಗಿರುತ್ತದೆ. ಆದರೆ ವಿಶೇಷವಾಗಿ ಬೇಸಿಗೆಯಲ್ಲಿ ಮದುವೆ ನಡೆಯುತ್ತಿದ್ದರೆ ಆದಷ್ಟು ಹಗುರವಾಗಿ ವಿನ್ಯಾಸಗೊಳಿಸಿರುವ ಬಟ್ಟೆಗಳನ್ನು ಆಯ್ಕೆ ಮಾಡಿ. ಚಿಫೋನ್, ಜಾರ್ಜೆಟ್ ಮತ್ತು ಆರ್ಗನ್ಜಾದಂತಹ ಹಗುರವಾದ ಬಟ್ಟೆಗಳನ್ನು ಆಯ್ದು ಕೊಳ್ಳಿ, ಇದು ಬೇಸಿಗೆಯ ಶಾಖದಲ್ಲಿಯೂ ಕೂಡ ತಂಪಾಗಿರುತ್ತದೆ ಮತ್ತು ಆರಾಮದಾಯಕವಾಗಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 2:04 pm, Sat, 1 April 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ