ಬೇಸಿಗೆ ರಜೆ ನಿಮಿತ್ತ ಅಜ್ಜಿ ಮನೆಗೆ ಬಂದಿದ್ದ ಬಾಲಕ ಶವವಾಗಿ ಪತ್ತೆ: ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ

ಇನ್ನು ಎಂಟು ವರ್ಷದ ಪುಟ್ಟ ಬಾಲಕ. ಶಾಲೆ ರಜೆ ಇರುವ ಕಾರಣ ಅಜ್ಜಿ ಮನೆಗೆ ಬಂದಿದ್ದ. ಬಳಿಕ ಬಾಲಕ ಆಟ ಆಡಿಕೊಂಡು ಎಂಜಾಯ್ ಮಾಡುತ್ತಾ ಕಾಲ‌ ಕಳಿಯುತಿದ್ದ. ಅಜ್ಜಿ ಮನೆಗೆ ಬಂದಿದ್ದ ಆ ಬಾಲಕ ನಿನ್ನೆ(ಮಾ.30) ನಾಪತ್ತೆಯಾಗಿದ್ದ. ಸಂಜೆಯಾದ್ರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಅಜ್ಜಿ ಆತಂಕದಿಂದ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ರು. ಆದರೆ ಇಂದು(ಮಾ.31) ಪಾಳು ಬಿದ್ದ ಜಾಗದಲ್ಲಿ ಪುಟ್ಟ ಬಾಲಕನ ಶವ ಪತ್ತೆಯಾಗಿದೆ.ಅದು ಅರೆ ಬೆತ್ತಲೆ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಬೇಸಿಗೆ ರಜೆ ನಿಮಿತ್ತ ಅಜ್ಜಿ ಮನೆಗೆ ಬಂದಿದ್ದ ಬಾಲಕ ಶವವಾಗಿ ಪತ್ತೆ: ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ
ಮೃತ ಬಾಲಕ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Apr 01, 2023 | 8:58 AM

ಹುಬ್ಬಳ್ಳಿ: ಒಂದು ಕಡೆ ಪಾಳು ಬಿದ್ದ ಜಾಗದಲ್ಲಿ ಅರೆ ಬೆತ್ತಲೆಯಲ್ಲಿ ಬಿದ್ದಿರುವ ಬಾಲಕನ ಶವ, ಇನ್ನೊಂದು ಕಡೆ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ಮಾಡುತ್ತಿರುವ ಪೊಲೀಸರು. ಮತ್ತೊಂದು ಕಡೆ ಕುಟುಂಬಸ್ಥರ ಕಣ್ಣೀರು. ಸ್ಥಳಕ್ಕೆ ಓಡೋಡಿ ಬಂದ ಸ್ಥಳೀಯ ಶಾಸಕ ಅಬ್ಬಯ್ಯ ಪ್ರಸಾದ್. ಹೌದು ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯ ದೊಡ್ಡಮನಿ ಕಾಲೋನಿಯ ಪಾಳು ಬಿದ್ದ ಜಾಗದಲ್ಲಿ 8 ವರ್ಷದ ಬಾಲಕ ನದೀಂ ಶವ ಪತ್ತೆಯಾಗಿದ್ದು, ಬಾಲಕನ ಶವ ಪತ್ತೆ ಸಾಕಷ್ಟು ಅನುಮಾನ ಹುಟ್ಟಿಸಿದೆ. ನದೀಂ ಶಾಲೆಗೆ ರಜೆ ಕೊಟ್ಟ ಕಾರಣ ಹುಬ್ಬಳ್ಳಿಯ ಶ್ರೀನಗರದಲ್ಲಿರುವ ಅಜ್ಜಿ ಮನೆಗೆ ಬಂದಿದ್ದ. ಬಳಿಕ ಅಜ್ಜಿ‌ ಮನೆಯಿಂದ ನಾಪತ್ತೆಯಾಗಿದ್ದ ಬಾಲಕನ ಶವ ಅರೆ ಬೆತ್ತಲೆಯಾಗಿ ಪತ್ತೆಯಾಗಿದೆ. ಇನ್ನು ಶವ ಪತ್ತೆಯಾದ ಸ್ಥಳದಲ್ಲಿ ಬೀಯರ್ ಬಾಟಲಿ ಕೂಡ ಇದೆ. ಹೀಗಾಗಿ ಬಾಲಕನನ್ನು ಯಾರೋ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಡಿಸಿಪಿ, ಬೆಂಡಿಗೇರಿ ಪೊಲೀಸರು ಹಾಗೂ ಸ್ಥಳೀಯ ಶಾಸಕ ಅಬ್ಬಯ್ಯ ಪ್ರಸಾದ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಇನ್ನು ಬಾಲಕ ನದೀಂ ತಂದೆ ತಾಯಿ ಹುಬ್ಬಳ್ಳಿಯ ಉಣಕಲ್​ನಲ್ಲಿ ವಾಸವಾಗಿದ್ದಾರೆ. ನದೀಂ ಶಾಲೆಗೆ ರಜೆ ಇರುವ ಕಾರಣ ಶ್ರೀನಗರದಲ್ಲಿರುವ ಅಜ್ಜಿ‌ ಮನೆಗೆ ಬಂದಿದ್ದ. ಅಜ್ಜಿ ಮನೆಗೆ ಬಂದ ನದೀಂ ನಿನ್ನೆ(ಮಾ.30) ಇಂದ ನಾಪತ್ತೆಯಾಗಿದ್ದ. ಇದರಿಂದ ಆತಂಕಕ್ಕೆ ಒಳಗಾಗಿದ್ದ ಕುಟುಂಬಸ್ಥರು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಇಂದು(ಮಾ.31) ಮುಂಜಾನೆ ನದೀಂ ಶವವಾಗಿ ಪತ್ತೆಯಾಗಿದ್ದಾನೆ. ನದೀಂ ಸಾವಿನ ಹಿಂದೆ ಸಾಕಷ್ಟು ಅನುಮಾನಗಳು ಮೂಡಿದ್ದು, ನದೀಂ ಆಟ ಆಡುವಾಗ ಯಾರೂ ಕಿಡ್ನ್ಯಾಪ್ ಮಾಡಿ ಆತನನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ನಿನ್ನೆ ಸಂಜೆ ನಾಲ್ಕು ಗಂಟೆಯವರೆಗೂ ನದೀಂ ಅಜ್ಜಿಯ ಜೊತೆ ಇದ್ದ, ಆದರೆ ಐದು ಗಂಟೆಯಿಂದ ನದೀಂ ನಾಪತ್ತೆಯಾಗಿದ್ದ. ನದೀಂ ತಂದೆ ತಾಯಿಗೆ ಒಬ್ಬನೇ ಗಂಡು ಮಗ. ಕಳೆದ ಸೋಮುವಾರ ಅಜ್ಜಿ ಮನೆಗೆ ಬಂದಿದ್ದ ನದೀಂ ಇಂದು ಶವವಾಗಿ ಪತ್ತೆಯಾಗಿದ್ದಾನೆ‌. ನದೀಂ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರೋದು ಮೇಲ್ನೋಟಕ್ಕೆ ಕಂಡು ಬರ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:Odisha: 15 ವರ್ಷದ ಬಾಲಕನನ್ನು ರೂ.50 ಲಕ್ಷಕ್ಕಾಗಿ ಅಪಹರಿಸಿ ಕೊಲೆ; ಸರ್ಕಾರವನ್ನು ಖಂಡಿಸಿದ ಧರ್ಮೇಂದ್ರ ಪ್ರಧಾನ್

ಒಟ್ಟಾರೆ ಏನು ಅರಿಯದ ಪುಟ್ಟ ಬಾಲಕನನ್ನ ಕ್ರೂರವಾಗಿ ಕೊಲೆ ಮಾಡಲಾಗಿದೆ. 8 ವರ್ಷದ ಬಾಲಕನನ್ನು ಇಷ್ಟೊಂದು‌ ಕ್ರೂರವಾಗಿ ಕೊಲ್ಲೋಕೆ ಕಾರಣ ಏನು, ಅತ್ಯಾಚಾರ ಮಾಡಿನೇ ಕೊಲೆ ಮಾಡಿದ್ದಾದ್ರೆ ಅತ್ಯಾಚಾರ ಮಾಡಿದ ಪಾಪಿಗಳು ಯಾರೂ ಎನ್ನುವುದುಜ ಪೊಲೀಸ್​ ತನಿಖೆಯಿಂದಲೇ ಬಯಲಾಗಬೇಕಿದೆ. ಇನ್ನು ಮೃತ ಬಾಲಕನನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್​ಗೆ ರವಾನೆ ಮಾಡಲಾಗಿದೆ.

ವರದಿ: ಶಿವಕುಮಾರ್​ ಪತ್ತಾರ್​ ಟಿವಿ9 ಹುಬ್ಬಳ್ಳಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ