Chanakya Niti: ಚಾಣಕ್ಯನ ಪ್ರಕಾರ ನಿಜವಾದ ಗೆಳೆಯ ಯಾರು? ಅವರ ಗುಣ ತಿಳಿಯುವುದು ಹೇಗೆ?

ಚಾಣಕ್ಯನ ಮಾತುಗಳು ಸುಳ್ಳಾಗುವುದಿಲ್ಲ. ಹಾಗಾಗಿ ಚಾಣಕ್ಯನ ಪ್ರಕಾರ ನಿಜವಾದ ಗೆಳೆಯರನ್ನು ಗುರುತಿಸುವುದು ಹೇಗೆ? ಆ ಬಗ್ಗೆ ಚಾಣಾಕ್ಯ ಹೇಳಿರುವುದು ಏನು? ಇಲ್ಲಿದೆ ಮಾಹಿತಿ.

Chanakya Niti: ಚಾಣಕ್ಯನ ಪ್ರಕಾರ ನಿಜವಾದ ಗೆಳೆಯ ಯಾರು? ಅವರ ಗುಣ ತಿಳಿಯುವುದು ಹೇಗೆ?
ಚಾಣಕ್ಯ ನೀತಿ
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Apr 01, 2023 | 7:23 AM

ಚಾಣಕ್ಯ ಬದುಕಿನ ಬಗೆಗೆ ಹೇಳಿರುವ ಮಾತುಗಳನ್ನು ನೀವು ಕೇಳಿರಬಹುದು ಆ ಗುಣಗಳನ್ನು ಅಳವಡಿಸಿಕೊಂಡರೆ ನಿಮ್ಮ ಜೀವನ ಸುಖಮಯವಾಗಿರುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಸರಿಯಾದ ಸ್ನೇಹಿತರನ್ನು ಹೇಗೆ ಆರಿಸಬೇಕು ಎನ್ನುವುದನ್ನು ಕೂಡ ಚಾಣಕ್ಯ ತಿಳಿಸಿಕೊಟ್ಟಿದ್ದಾನೆ. ಕೆಲವರು ಮೊದ ಮೊದಲು ತುಂಬಾ ಚೆನ್ನಾಗಿಯೇ ಮಾತನಾಡುತ್ತಾರೆ, ಆದರೆ ಬರುಬರುತ್ತಾ ಅವರ ಗುಣ ಗೊತಾಗುತ್ತಾ ಹೋಗುತ್ತವೆ. ನಿಮ್ಮ ಮುಂದೆ ಚೆನ್ನಾಗಿ ಮಾತನಾಡಿ ನಿಮ್ಮ ಹಿಂದೆ ಕೆಟ್ಟದಾಗಿ ಮಾತನಾಡುತ್ತಾರೆ. ಇದು ಒಂದು ಸಲವಾದರೂ ನಿಮ್ಮ ಅನುಭವಕ್ಕೆ ಬಂದಿರಬಹುದು. ಹಾಗೆಯೇ ನಿಜವಾದ ಗೆಳೆತನದಲ್ಲಿ ನೀವು ಮಾಡಿದ್ದೆಲ್ಲ ಒಪ್ಪಬೇಕೆಂದೇನಿಲ್ಲ. ನೀವು ಮಾಡಿದ್ದು ಸರಿಯಿಲ್ಲ, ಅದರಿಂದ ನಿಮಗೆ ಬೇಸರವಾಗುತ್ತಿದೆ ಎಂದು ಅವನು/ಅವಳು ಸುಮ್ಮನಾಗುವುದಿಲ್ಲ, ಅವರಿಗೆ ನಿಮ್ಮ ಬೇಸರಕ್ಕಿಂತ ನಿಮ್ಮ ಒಳಿತು ಮುಖ್ಯವಾಗಿರುತ್ತದೆ ಅಂಥವರು ನಿಜವಾದ ಸ್ನೇಹಿತರು.

ನಿಮಗೆ ಏನಾದರೂ ಆದಾಗ ಸಹಾಯ ಮಾಡಿದವರನ್ನು ಮರೆಯಬಾರದು. ಏಕೆಂದರೆ ಅವರೇ ನಿಮ್ಮ ನಿಜವಾದ ಸ್ನೇಹಿತರು. ಇನ್ನು ಇಡೀ ಜಗತ್ತು ನಿಮ್ಮನ್ನು ದೂಷಿಸುವಾಗ ನಿಮ್ಮ ಜೊತೆ ನಿಂತು ಸರಿ ದಾರಿಯಲ್ಲಿ ನಡೆಸುವವರೇ ನಿಜವಾದ ಸ್ನೇಹಿತರು ಎನ್ನುತ್ತಾನೆ ಚಾಣಕ್ಯ. ನಿಮ್ಮ ರಹಸ್ಯ ವಿಷಯವನ್ನಾಗಲಿ ಅಥವಾ ನಿಮ್ಮ ಖಾಸಗಿ ಬದುಕಿನ ಕುರಿತಾಗಲಿ ಬೇರೆಯವರ ಜೊತೆ ಮಾತನಾಡುವವನು ನಿಜವಾದ ಸ್ನೇಹಿತ ಅಲ್ಲ. ಹೀಗೆಲ್ಲಾ ಮಾಡುವವರು ನಿಮ್ಮ ಜೊತೆ ಇನ್ನು ಇದ್ದಾರೆ ಎಂದರೆ ನಿಮ್ಮಿಂದ ಏನೋ ಬಯಸಿ ನಿಮ್ಮ ಜೊತೆಯಲ್ಲಿದ್ದಾರೆ ಎಂದರ್ಥ.

ಪ್ರತಿಯೊಬ್ಬರನ್ನೂ ನಂಬುವುದು ಒಳ್ಳೆಯದಲ್ಲ. ಆದರೆ ತನ್ನನ್ನು ಬಿಟ್ಟು ಯಾರನ್ನೂ ನಂಬದಿರುವುದು ಕೂಡ ಅಷ್ಟೇ ಕೆಟ್ಟದು. ಹಾಗಾಗಿ ಯೋಚಿಸಿ ಮುನ್ನಡೆಯಬೇಕು. ಕಷ್ಟ ಬಂದಾಗ ಕೆಲವೇ ಕೆಲವರಷ್ಟೇ ಇರುತ್ತಾರೆ. ಏಕೆಂದರೆ ನಾವು ಯಾರು ನಮ್ಮವರು ಯಾರು ಅಲ್ಲ ಎಂದು ಗುರುತಿಸುವಲ್ಲಿ ಎಡವಿರುತ್ತೇವೆ. ಹಾಗಾಗಿ ಏನಾದರೂ ಕಹಿ ಘಟನೆ ಸಂಭವಿಸಿದಾಗ ನಮ್ಮನ್ನು ಮಾತು ನಮ್ಮ ಮನಸ್ಸನ್ನು ಕುಗ್ಗಿಸಿಬಿಡುತ್ತದೆ. ಹಾಗಾಗಿ ವ್ಯಕ್ತಿ ಆಯ್ಕೆ ಬಹಳ ಮುಖ್ಯ ವಾಗಿರುತ್ತದೆ.

ಎಲ್ಲರಿಗೂ ಕುಟುಂಬದಲ್ಲಿ ಒಬ್ಬ ಸಚ್ಚಾ ದೋಸ್ತ್ ಇರುತ್ತಾನೆ. ಹಾಗಾಗಿ ಮೊದಲೇ ಫ್ಯಾಮಿಲಿ ಫ್ರೆಂಡ್‌ ಅನ್ನು ಆಯ್ಕೆ ಮಾಡುವಾಗ ತುಂಬಾ ಹುಷಾರಾಗಿರಬೇಕು. ಚಾಣಕ್ಯ ಹೇಳುತ್ತಾರೆ ಈ ಫ್ಯಾಮಿಲಿ ಫ್ರೆಂಡ್ಸ್‌ ಆಯ್ಕೆ ಮಾಡುವಾಗ ಕೆಟ್ಟ ಹವ್ಯಾಸ ಇರುವವರನ್ನು ದೂರವಿಡಬೇಕು. ಇಲ್ಲದಿದ್ದರೆ ಅವರ ಸಂಗದಿಂದ ನಾವೂ ನಾಶವಾಗುತ್ತೇವೆ. ಹಾಗಾಗಿ ಒಳ್ಳೆಯವರ ಸಂಘ ಮಾಡಬೇಕು. ಸ್ನೇಹಿತರು ನಮ್ಮ ಸುಖದಲ್ಲಿ ಮಾತ್ರವಲ್ಲ, ಕಷ್ಟದಲ್ಲೂ ಭಾಗಿಯಾಗುವವರು ಆಗಿರಬೇಕು.

ಇದನ್ನೂ ಓದಿ: ಕರ್ನಾಟಕದ ಪ್ರಮುಖ 15 ದೇವಾಲಯಗಳು: ಜೀವನದಲ್ಲಿ ಒಮ್ಮೆಯಾದ್ರೂ ಈ ದೇವಸ್ಥಾನಗಳಿಗೆ ಭೇಟಿ ನೀಡಲೇಬೇಕು

ಕೆಲವರೊಂದಿಗೆ ಸ್ನೇಹ ಮಾಡುವುದು ಉತ್ತಮ ಎನ್ನುತ್ತಾರೆ ಚಾಣಕ್ಯ. ಅದರಲ್ಲಿ ನಿಮ್ಮ ಕುಟುಂಬದಲ್ಲಿ ಯಾರಾದರೂ ತೀವ್ರವಾಗಿ ಅಸ್ವಸ್ಥರಾದಾಗ, ನಿಮಗೆ ಸಹಾಯ ಮಾಡಲು ಧಾವಿಸಿ ಬರುವ ವ್ಯಕ್ತಿ ನಿಮ್ಮ ಉತ್ತಮ ಸ್ನೇಹಿತ. ನಿಮ್ಮ ಪ್ರತಿಸ್ಪರ್ಧಿಗಳಿಂದ ಅಥವಾ ನಿಮ್ಮ ವಿರುದ್ಧ ಪಿತೂರಿ ಮಾಡುವವರಿಂದ ನೀವು ತೊಂದರೆ ಎದುರಿಸುತ್ತಿರುವಾಗ, ಸಹಾಯ ಮಾಡಲು ಧಾವಿಸುವ ವ್ಯಕ್ತಿ ನಿಮ್ಮ ಉತ್ತಮ ಸ್ನೇಹಿತ. ನಿಮ್ಮನ್ನು ಕಾಡುವ ವಿಚಾರದಲ್ಲಿ ಯಾರಾದರೂ ನಿಮ್ಮನ್ನು ಬೆಂಬಲಿಸಿದರೆ, ನೀವು ಕಣ್ಣು ಮುಚ್ಚಿ ಒಪ್ಪಿಕೊಳ್ಳಬಹುದಾದ ನಿಜವಾದ ಸ್ನೇಹಿತ.

ನಿಮಗೆ ಅವಶ್ಯಕತೆ ಬಿದ್ದಾಗ ನಿಮಗಾಗಿ ಅವರು ತ್ಯಾಗ ಮಾಡಲು ಸಿದ್ಧರಿದ್ದಾರೋ ಅವರೇ ನಿಜವಾದ ಸ್ನೇಹಿತ. ಹಾಗಾಗಿ ತಕ್ಷಣವೇ ಒಬ್ಬರು ಒಳ್ಳೆಯವರು ಅಥವಾ ಕೆಟ್ಟವರು ಎಂಬ ನಿರ್ಧಾರಕ್ಕೆ ಬರದೆ ಸಮಯ ಕೊಟ್ಟು ನಂತರ ನಿಮ್ಮ ನಿರ್ಧಾರಕ್ಕೆ ಬನ್ನಿ. ಆ ವ್ಯಕ್ತಿ ನೋಡೋಕೆ ಚೆನ್ನಾಗಿದ್ದಾನೆ, ಒಳ್ಳೆ ಯ ಪದವಿಯಲ್ಲಿದ್ದಾನೆ ಎಂದ ಮಾತ್ರಕ್ಕೆ ನಿಮ್ಮ ಸ್ನೇಹಿತ ಎಂದು ಒಪ್ಪಿಕೊಳ್ಳಬೇಡಿ, ನಿಮ್ಮ ಬಗ್ಗೆ ಯಾವ ರೀತಿಯ ಭಾವನೆ ಇದೆ ಎಂದು ಗಮನಿಸಿ ಬಳಿಕ ಸ್ನೇಹಿತರನ್ನಾಗಿ ಮಾಡಿಕೊಳ್ಳಿ ಎನ್ನುವುದು ಚಾಣಕ್ಯ ಮಾತು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು