Chanakya: ನೆಮ್ಮದಿಯ ಸಪ್ತ ಸೂತ್ರಗಳು ಯಾವುದು? ಈ ಕುರಿತಾಗಿ ಚಾಣಕ್ಯರು ಏನು ಹೇಳಿದ್ದಾರೆ?

ಭಗವಂತ ಕೊಟ್ಟ ಸುಂದರ ಮಾನವ ಜನ್ಮ ವ್ಯರ್ಥವಾಗಿ ಒತ್ತಡದಲ್ಲೇ ಮುಗಿಯಿತಲ್ಲಾ ಎಂದು ಇಳಿ ವಯಸ್ಸಲ್ಲಿ ಕೊರಗುತ್ತಾ ಕಾಲ ಕಳೆದುಬಿಡುತ್ತೇವೆ. ಇತ್ತೀಚೆಗಂತು ಪಾರ್ಕ್ ಧಾರ್ಮಿಕ ಶ್ರದ್ಧಾಕೇಂದ್ರ ಇತ್ಯಾದಿಗಳಲ್ಲಿ ಇಂತಹ ನೆಮ್ಮದಿ ಅರಸಿ ಬರುವವರೇ ಹೆಚ್ಚು. ಇದರಿಂದ ಹೊರಗೆ ಬಂದು ನೆಮ್ಮದಿ ಕಾಣಲು ಚಾಣಕ್ಯರು ಏಳು ಮುಖ್ಯ ಅಂಶಗಳನ್ನು ಹೇಳಿದ್ದಾರೆ ಆ ಕುರಿತು ನೋಡೋಣ;

Chanakya: ನೆಮ್ಮದಿಯ ಸಪ್ತ ಸೂತ್ರಗಳು ಯಾವುದು? ಈ ಕುರಿತಾಗಿ ಚಾಣಕ್ಯರು ಏನು ಹೇಳಿದ್ದಾರೆ?
ಚಾಣಕ್ಯ ನೀತಿ
Follow us
TV9 Web
| Updated By: Ganapathi Sharma

Updated on: Mar 25, 2023 | 6:25 AM

ಮಗುವೊಂದು ತನ್ನ ತಾಯಿ ಗರ್ಭದಿಂದ ಭೂ ಸ್ಪರ್ಶ ಆದಾಗಿನಿಂದ ತನ್ನ ಹಿತಕ್ಕೋಸ್ಕರ ಪ್ರಯತ್ನಿಸುತ್ತಲೇ ಇರುತ್ತದೆ. ಬಾಲ್ಯದಲ್ಲಿ ಮಕ್ಕಳ ಹಿತವನ್ನು ಹಿರಿಯರು ಕಾಯುತ್ತಾರೆ. ಅದು ಸ್ವಾಭಾವಿಕ ಮತ್ತು ಕರ್ತವ್ಯವೂ ಆಗಿದೆ. ಕಾಲ ಕಳೆದಂತೆ ಆ ಮಗು ಬೆಳೆಯುತ್ತಿರಲು ಅದರ ಜವಾಬ್ದಾರಿ ಹೆಚ್ಚುತ್ತದೆ ಹಾಗೆಯೇ ಕರ್ತವ್ಯವೂ ಕೂಡ. ಈ ಮಧ್ಯದಲ್ಲಿ ಹಲವು ಕಾರಣಗಳಿಂದ ಆ ವ್ಯಕ್ತಿ ತನ್ನ ಆಂತರಂಗಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಿರುತ್ತಾನೆ. ಇದರಿಂದಾಗಿ ಆತ ಕೋಪ ತಾಪ ಜಗಳ ಅನಾರೋಗ್ಯವೇ ಮೊದಲಾದ ವಿಪತ್ತುಗಳಿಗೆ ತುತ್ತಾಗತೊಡಗುತ್ತಾನೆ. ಈ ವಿಪತ್ತಿನಿಂದ ಹೊರಗೆ ಬರಲು ಹವಣಿಸುತ್ತಾ ತನ್ನ ಸುಂದರವಾದ ಅನುಭವ ವೇದ್ಯವಾದ ಕ್ಷಣಗಳನ್ನು ಒದ್ದಾಟದಲ್ಲೇ ಮುಗಿಸಿಬಿಡುತ್ತಾನೆ.

ಭಗವಂತ ಕೊಟ್ಟ ಸುಂದರ ಮಾನವ ಜನ್ಮ ವ್ಯರ್ಥವಾಗಿ ಒತ್ತಡದಲ್ಲೇ ಮುಗಿಯಿತಲ್ಲಾ ಎಂದು ಇಳಿ ವಯಸ್ಸಲ್ಲಿ ಕೊರಗುತ್ತಾ ಕಾಲ ಕಳೆದುಬಿಡುತ್ತೇವೆ. ಇತ್ತೀಚೆಗಂತು ಪಾರ್ಕ್ ಧಾರ್ಮಿಕ ಶ್ರದ್ಧಾಕೇಂದ್ರ ಇತ್ಯಾದಿಗಳಲ್ಲಿ ಇಂತಹ ನೆಮ್ಮದಿ ಅರಸಿ ಬರುವವರೇ ಹೆಚ್ಚು. ಇದರಿಂದ ಹೊರಗೆ ಬಂದು ನೆಮ್ಮದಿ ಕಾಣಲು ಚಾಣಕ್ಯರು ಏಳು ಮುಖ್ಯ ಅಂಶಗಳನ್ನು ಹೇಳಿದ್ದಾರೆ ಆ ಕುರಿತು ನೋಡೋಣ;

  1. ವ್ಯರ್ಥವಾಗಿ ಯಾವತ್ತೂ ಇನ್ನೊಬ್ಬರೊಡನೆ ವಾದಕ್ಕೆ ಮಾಡಬೇಡರಿ. ಯಾಕೆಂದರೆ ಹಲವು ಜನರಿಗೆ ಮಾತನಾಡಲೂ ಬರುವುದಿಲ್ಲ.
  2. ನಾವು ಉಣ್ಣುವ ಆಹಾರದ ಬಗ್ಗೆ ಅದರ ರುಚಿಯ ಕುರಿತಾಗಿ ಯಾವತ್ತು ದೂರಬೇಡಿ ಹಲವಾರು ಜನ ಆಹಾರವಿಲ್ಲದೇ ನರಳುತ್ತಿದ್ದಾರೆ.
  3. ನಿಮ್ಮ ಜೊತೆಗಾರ್ತಿ ಅಥವಾ ಜೊತೆಗಾರನ (ಪತ್ನಿ ಅಥವಾ ಪತಿ) ಬಗ್ಗೆ ಸಹನೆ ಕಳೆದುಕೊಳ್ಳಬೇಡಿ ಹಲವು ಜನ ತಮ್ಮ ಸಂಗಾತಿಯನ್ನು ಮಣ್ಣು ಮಾಡಿ ಬಂದ ದುಃಖದಲ್ಲಿದ್ದಾರೆ.
  4. ಮನೆ ಸಣ್ಣದೆಂದು ಕೊರಗಬೇಡಿ ಹಲವು ಜನರು ಸೂರೇ ಕಾಣದೆ ಬದುಕುತ್ತಿದ್ದಾರೆ.
  5. ಸ್ವಂತ ಮಕ್ಕಳನ್ನು ಪ್ರೀತಿಯಿಂದ ಕಾಣಿರಿ. ಹಲವಾರು ದಂಪತಿಗಳು ಸಂತಾನ ಭಾಗ್ಯವಿಲ್ಲದೇ ತಮ್ಮ ಜೀವನದ ತಂದೆ ತಾಯಿ ಎಂಬ ಪದವಿಯನ್ನೇ ಕಾಣದೇ ಮಣ್ಣಾಗಿದ್ದಾರೆ.
  6. ತಮ್ಮ ಪಾಲಿಗಿರುವ ಉದ್ಯೋಗವನ್ನು ಪ್ರೀತಿಯಿಂದ ಪ್ರಾಮಾಣಿಕವಾಗಿ ಶ್ರದ್ಧಾಪೂರ್ವಕ ಮಾಡಿರಿ. ಅಲ್ಲಿ ಅಸಡ್ಡೆ ಔದಾಸಿನ್ಯ ದುರಾಸೆ ಇತ್ಯಾದಿ ಮಾಡಬೇಡಿ. ಹಲವು ಜನ ವಿದ್ಯಾವಂತರು ಉದ್ಯೋಗವಿಲ್ಲದೇ ಇದ್ದಾರೆ.
  7. ಭಗವಂತ ಕರುಣಿಸಿದ ಸುಂದರ ಜೀವನನ್ನು ಖುಷಿಯಿಂದ ಅನುಭವಿಸಿ. ಅದಿಲ್ಲ ಇದಿಲ್ಲ ಅದುತಪ್ಪು ಇದುತಪ್ಪು ಎಂದು ಕಾರಣಗಳನ್ನು ಹೇಳುತ್ತಾ ಕೂರಬೇಡಿ. ಅದೆಷ್ಟೋ ಜನ ಹುಟ್ಟಿದಾಕ್ಷಣ ಇನ್ನು ಕೆಲವರು ಬಾಲ್ಯದಲ್ಲಿ ಇನ್ನು ಕೆಲವರು ಯೌವ್ವನದಲ್ಲಿ ಮಲಗಿದಲ್ಲೇ ಆಗಿದ್ದಾರೆ ಅಲ್ಲದೇ ಕೆಲವರು ಜೀವನ ಯಾತ್ರೆಯನ್ನೇ ಮುಗಿಸಿದ್ದಾರೆ.

ಭಗವನ್ನಾಮ ಜಪಿಸಿ, ತತ್ವಗ್ರಂಥಗಳನ್ನು ಪಠಿಸಿ, ಸತ್ಸಂಗ ಮಾಡಿ, ಸುಂದರ ಪ್ರಕ್ರತಿಯ ಮಧ್ಯೆ ಒಬ್ಬರೇ ಸಂಚರಿಸಿ, ಪ್ರತೀದಿನ ಕನಿಷ್ಠ ಹದಿನೈದು ನಿಮಿಷಗಳ ಕಾಲ ಕಣ್ಣುಮುಚ್ಚಿ ಜೀವನದ ಹೆಜ್ಜೆಗಳನ್ನು ಮೌನವಾಗಿ ಮೆಲುಕು ಹಾಕಿ. ತಪ್ಪುಗಳನ್ನು ಒಪ್ಪಿಕೊಳ್ಳಿ ಆಗ ನಿಮಗೇ ತಿಳಿಯದಂತೆ ನೆಮ್ಮದಿ ನಿಮ್ಮೊಂದಿಗೆ ಇರುತ್ತದೆ.

ಯಾಕೆಂದರೆ ಮಾನವ ಜನ್ಮ ಎಂಬುದು ಭಗವಂತ ನೀಡಿದ ಅದ್ಭುತ ಸುಂದರ ಕೊಡುಗೆ. ಈ ಉಡುಗೊರೆ ಪಡೆಯಲು ತಾಯಿ ತನ್ನ ಜೀವನವನ್ನೇ ಪಣಕ್ಕಿಟ್ಟಿದ್ದಾಳೆ. ಈ ಭಗವಂತ ನೀಡಿದ ಅದ್ಭುತ ಉಡುಗೊರೆಗಾಗಿ ತಂದೆ ತನ್ನ ಅದೆಷ್ಟೋ ಸುಂದರ ಕ್ಷಣಗಳನ್ನು ಧಾರೆ ಎರೆದಿದ್ದಾನೆ. ಆದ ಕಾರಣ ನೆಮ್ಮದಿಯಿಂದ ಬದುಕೋಣ ನೆಮ್ಮದಿಯನ್ನು ಹಂಚೋಣ ಅಲ್ಲವೇ?

ಡಾ. ಗೌರಿ ಕೇಶವಕಿರಣ ಬಿ,

ಧಾರ್ಮಿಕಚಿಂತಕರು

ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್