ನೂರು ವರ್ಷ ಆರೋಗ್ಯವಾಗಿರಲು 5 ಪ್ರಾಚೀನ ಸೂತ್ರಗಳು; ನೀರು ಕುಡಿಯುವುದರಿಂದ ಉಪವಾಸದವರೆಗೆ

ಮಹರ್ಷಿ ಕಶ್ಯಪರು ತಿಳಿಸಿದ್ದರು ಎನ್ನಲಾಗುವ ಕೆಲವು ಪ್ರಾಚೀನ ಆರೋಗ್ಯ ಪದ್ಧತಿಗಳು ಈಗ ಮತ್ತೆ ಗಮನ ಸೆಳೆಯುತ್ತಿವೆ. ನೀರನ್ನು ನಿಧಾನವಾಗಿ ಕುಡಿಯುವುದು, ಬೆಳಗ್ಗೆ ನೀರು ಸೇವಿಸುವುದು, ಅತಿಯಾಗಿ ತಣ್ಣನೆಯ ನೀರು ತಪ್ಪಿಸುವುದು ಹಾಗೂ ರಾತ್ರಿ ಬೇಗ ಊಟ ಮುಗಿಸುವಂತಹ ಅಭ್ಯಾಸಗಳ ಬಗ್ಗೆ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಇವುಗಳ ಹಿಂದಿನ ಪರಂಪರಾಗತ ನಂಬಿಕೆಗಳೇನು? ತಿಳಿಯೋಣ.

ನೂರು ವರ್ಷ ಆರೋಗ್ಯವಾಗಿರಲು 5 ಪ್ರಾಚೀನ ಸೂತ್ರಗಳು; ನೀರು ಕುಡಿಯುವುದರಿಂದ ಉಪವಾಸದವರೆಗೆ
Happy Health
Edited By:

Updated on: Sep 16, 2026 | 9:35 AM

ಮುಖ್ಯಾಂಶಗಳು

  • ನೂರು ವರ್ಷ ಆರೋಗ್ಯವಾಗಿರಲು ಈ ಸೂತ್ರಗಳನ್ನು ಪಾಲಿಸಿ
  • ಬೆಳಗ್ಗೆ ನೀರು ಕುಡಿಯುವುದರ ಹಿಂದಿನ ಕಾರಣವೇನು?
  • ರಾತ್ರಿ ಬೇಗ ಊಟ ಮಾಡುವುದರಿಂದ ಏನು ಪ್ರಯೋಜನ?

ಇಂದಿನ ಜೀವನಶೈಲಿಯಲ್ಲಿ (Lifestyle) ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಕಾಡುವುದು ಸಾಮಾನ್ಯವಾಗಿದೆ. ಜೀರ್ಣಕ್ರಿಯೆ ಸರಿಯಾಗದಿರುವುದು, ಗ್ಯಾಸ್ಟ್ರಿಕ್‌, ಮಲಬದ್ಧತೆ, ದೇಹದ ನೋವು ಸೇರಿದಂತೆ ಹಲವು ಸಮಸ್ಯೆಗಳಿಗೆ ನಮ್ಮ ದಿನನಿತ್ಯದ ಆಹಾರ ಪದ್ಧತಿ ಮತ್ತು ಜೀವನಶೈಲಿಯೂ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಪ್ರಾಚೀನ ಕಾಲದಲ್ಲಿ ಅನುಸರಿಸಲಾಗುತ್ತಿತ್ತು ಎನ್ನಲಾದ ಕೆಲವು ಆರೋಗ್ಯ ಪದ್ಧತಿಗಳು ಮತ್ತೆ ಗಮನ ಸೆಳೆಯುತ್ತಿವೆ.

ಮಹರ್ಷಿ ಕಶ್ಯಪರು ತಮ್ಮ ಶಿಷ್ಯರಿಗೆ ನೀರು ಕುಡಿಯುವುದು ಮತ್ತು ಆಹಾರ ಸೇವಿಸುವುದಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ತಿಳಿಸಿದ್ದರು. ಈ ಪದ್ಧತಿಗಳನ್ನು ಅನುಸರಿಸುವುದರಿಂದ ದೀರ್ಘಕಾಲ ಆರೋಗ್ಯವಾಗಿರಬಹುದು ಎಂಬುದು ಪರಂಪರೆಯಲ್ಲಿ ಹೇಳಲಾಗುತ್ತದೆ. ಆದರೆ ಇವುಗಳನ್ನು ಆಧುನಿಕ ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಾಗಿ ಪರಿಗಣಿಸಬಾರದು.

ನೀರನ್ನು ನಿಧಾನವಾಗಿ ಕುಡಿಯುವುದು

ನೀರನ್ನು ಒಂದೇ ಬಾರಿಗೆ ಹೆಚ್ಚು ಪ್ರಮಾಣದಲ್ಲಿ ಕುಡಿಯುವ ಬದಲು ನಿಧಾನವಾಗಿ, ಸಣ್ಣ ಸಣ್ಣ ಗುಟುಕುಗಳಲ್ಲಿ ಕುಡಿಯಬೇಕು ಎಂಬುದು ಮೊದಲ ಸಲಹೆ. ಹೀಗೆ ಮಾಡುವುದರಿಂದ ನೀರು ಸುಲಭವಾಗಿ ಸೇವನೆಯಾಗುತ್ತದೆ ಎಂಬ ನಂಬಿಕೆ ಇದೆ. ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ದಿನವಿಡೀ ಕುಡಿಯುವುದು ಮುಖ್ಯ.

ಅತಿಯಾದ ತಣ್ಣನೆಯ ನೀರನ್ನು ತಪ್ಪಿಸುವುದು

ಫ್ರಿಜ್‌ನಿಂದ ತೆಗೆದ ಅತ್ಯಂತ ತಣ್ಣನೆಯ ನೀರನ್ನು ಕುಡಿಯುವ ಬದಲು ಸಾಮಾನ್ಯ ತಾಪಮಾನದ ಅಥವಾ ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದು ಉತ್ತಮ. ದೇಹದ ಒಳಗಿನ ಉಷ್ಣತೆಗೆ ತಣ್ಣನೆಯ ನೀರು ಪರಿಣಾಮ ಬೀರುತ್ತದೆ ಮತ್ತು ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ ಎಂಬುದು ಇದರ ಹಿಂದಿರುವ ಪರಂಪರೆಯ ನಂಬಿಕೆ.

ಆದರೆ ಆರೋಗ್ಯವಂತ ವ್ಯಕ್ತಿಯೊಬ್ಬರು ತಣ್ಣನೆಯ ನೀರು ಕುಡಿದರೆ ಜೀರ್ಣಕ್ರಿಯೆ ಅಥವಾ ರಕ್ತನಾಳಗಳು ಹಾನಿಯಾಗುತ್ತವೆ ಎಂಬುದನ್ನು ಸಾಮಾನ್ಯ ನಿಯಮವಾಗಿ ಹೇಳಲು ಸಾಧ್ಯವಿಲ್ಲ. ನೀರಿನ ತಾಪಮಾನಕ್ಕಿಂತ ದೇಹಕ್ಕೆ ಸಾಕಷ್ಟು ನೀರು ದೊರೆಯುವುದು ಮುಖ್ಯ.

ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದು

ಬೆಳಗ್ಗೆ ನಿದ್ರೆಯಿಂದ ಎದ್ದ ನಂತರ ನೀರು ಕುಡಿಯುವ ಪದ್ಧತಿಯನ್ನು ಕೆಲವರು ‘ಉಷಃಪಾನ’ ಎಂದು ಕರೆಯುತ್ತಾರೆ. ಬೆಳಗ್ಗೆ ಹಲ್ಲುಜ್ಜುವ ಮೊದಲು ಒಂದು ಅಥವಾ ಎರಡು ಗ್ಲಾಸ್‌ ಉಗುರುಬೆಚ್ಚಗಿನ ನೀರನ್ನು ಕುಡಿಯಬೇಕು. ಇದರಿಂದ ಬೆಳಗಿನ ಮಲವಿಸರ್ಜನೆ ಸುಗಮವಾಗಬಹುದು.

Sleep Deprivation: ನಿದ್ರೆ ಕಡಿಮೆಯಾದರೆ ಕ್ಯಾನ್ಸರ್ ಅಪಾಯ ಹೆಚ್ಚುತ್ತಾ? ತಜ್ಞ ವೈದ್ಯರು ಹೇಳುವುದೇನು?

ರಾತ್ರಿ ಬೇಗ ಊಟ ಮುಗಿಸುವುದು

ಸಂಜೆ ಅಥವಾ ರಾತ್ರಿ ತಡವಾಗಿ ಊಟ ಮಾಡುವ ಬದಲು ಬೇಗನೆ ಊಟ ಮುಗಿಸಿ, ನಂತರ ದೀರ್ಘ ಸಮಯ ಆಹಾರ ಸೇವಿಸದೆ ಇರುವ ಪದ್ಧತಿ ಇತ್ತು. ಸುಮಾರು 12ರಿಂದ 16 ಗಂಟೆಗಳವರೆಗೆ ಆಹಾರ ಸೇವಿಸದೆ ಇರುವುದನ್ನು ಕೆಲವು ರೀತಿಯ ಮಧ್ಯಂತರ ಉಪವಾಸದ ಮಾದರಿಯೊಂದಿಗೆ ಹೋಲಿಸಬಹುದು.

ಈ ಸಮಯದಲ್ಲಿ ದೇಹವು ಹಳೆಯ ಕೋಶಗಳು, ಕೊಬ್ಬು ಮತ್ತು ಕ್ಯಾನ್ಸರ್‌ಕಾರಕ ಅಂಶಗಳನ್ನು ಸ್ವತಃ ನಾಶಪಡಿಸುತ್ತದೆಯಂತೆ. ಆದರೆ ಇಂತಹ ಹೇಳಿಕೆಗಳನ್ನು ನೇರವಾಗಿ ಅನ್ವಯಿಸಿಕೊಂಡು ಉಪವಾಸವೇ ಕ್ಯಾನ್ಸರ್‌ ತಡೆಯುತ್ತದೆ ಅಥವಾ ಚಿಕಿತ್ಸೆ ನೀಡುತ್ತದೆ ಎಂದು ಭಾವಿಸುವುದು ಸರಿಯಲ್ಲ. ಉಪವಾಸ ಎಲ್ಲರಿಗೂ ಸೂಕ್ತವೂ ಅಲ್ಲ.

ಆರೋಗ್ಯಕ್ಕೆ ಮುಖ್ಯವಾದುದು ನಿಯಮಿತ ಜೀವನಶೈಲಿ

ಈ ಪ್ರಾಚೀನ ಪದ್ಧತಿಗಳಲ್ಲಿ ನೀರನ್ನು ಸಮರ್ಪಕವಾಗಿ ಕುಡಿಯುವುದು, ರಾತ್ರಿ ತಡವಾಗಿ ಊಟ ಮಾಡದಿರುವುದು ಮತ್ತು ಆಹಾರದಲ್ಲಿ ನಿಯಮ ಪಾಲಿಸುವಂತಹ ಕೆಲವು ಸಾಮಾನ್ಯ ಆರೋಗ್ಯಕರ ಅಭ್ಯಾಸಗಳಿವೆ. ಇವುಗಳನ್ನು ಅತಿಯಾದ ನಿರೀಕ್ಷೆಗಳಿಲ್ಲದೆ ದಿನನಿತ್ಯದ ಜೀವನಶೈಲಿಯ ಭಾಗವಾಗಿ ನೋಡಬಹುದು.

ಆದರೆ ಯಾವುದೇ ಔಷಧಿ ಅಥವಾ ಆಸ್ಪತ್ರೆಯ ಅಗತ್ಯವಿಲ್ಲದೆ ನೂರು ವರ್ಷ ಬದುಕಬಹುದು ಎಂಬುದನ್ನು ಖಚಿತ ಆರೋಗ್ಯ ನಿಯಮವೆಂದು ಪರಿಗಣಿಸಬಾರದು. ವಯಸ್ಸು, ಆಹಾರ, ದೈಹಿಕ ಚಟುವಟಿಕೆ, ನಿದ್ರೆ, ಆನುವಂಶಿಕ ಅಂಶಗಳು ಮತ್ತು ವೈದ್ಯಕೀಯ ಪರಿಸ್ಥಿತಿಗಳು ಸೇರಿದಂತೆ ಹಲವು ಸಂಗತಿಗಳು ದೀರ್ಘಾಯುಷ್ಯ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯುವುದು ಮುಖ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us