ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯಬೇಡಿ, ಅದರಿಂದ ಗಿಡಗಳಿಗಾಗಿ ತಯಾರಿಸಿ ಸಾವಯವ ಗೊಬ್ಬರ

ಬಾಳೆಹಣ್ಣು ತಿಂದ ಬಳಿಗೆ ಅವುಗಳ ಸಿಪ್ಪೆಯನ್ನು ಎಸೆಯುತ್ತೇವೆ. ಹೀಗೆ ಅವುಗಳನ್ನು ಎಸೆಯುವ ಬದಲು, ಅದನ್ನು ಗೊಬ್ಬರ ತಯಾರಿಸಲು ಬಳಸಬಹುದು. ಗಿಡಗಳಿಗೆ ದುಬಾರಿ ರಾಸಾಯನಿಕಯುಕ್ತ ಗೊಬ್ಬರದ ಬದಲು ಈ ಸಾವಯವ ಗೊಬ್ಬರವನ್ನು ಹಾಕಬಹುದು. ಬಾಳೆಹಣ್ಣಿನ ಸಿಪ್ಪೆಯಿಂದ ಗೊಬ್ಬರವನ್ನು ತಯಾರಿಸುವುದು ಬಲು ಸುಲಭ. ಇದಕ್ಕಾಗಿ ಬಾಳೆಹಣ್ಣಿನ ಸಿಪ್ಪೆಗಳು, ಸ್ವಲ್ಪ ಮಣ್ಣು ಮತ್ತು ಒಣಗಿದ ಎಲೆಗಳು ಇದ್ದರೆ ಸಾಕು. ಈ ಗೊಬ್ಬರವನ್ನು ತಯಾರಿಸುವುದು ಹೇಗೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯಬೇಡಿ, ಅದರಿಂದ ಗಿಡಗಳಿಗಾಗಿ ತಯಾರಿಸಿ ಸಾವಯವ ಗೊಬ್ಬರ
ಸಾಂದರ್ಭಿಕ ಚಿತ್ರ
Image Credit source: vecteezy

Updated on: Nov 15, 2026 | 5:57 PM

ಬಾಳೆಹಣ್ಣನ್ನು (banana) ತಿಂದ ನಂತರ,  ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆದು ಬಿಡುತ್ತೇವೆ. ಹೀಗೆ ಎಸೆಯುವ ಬದಲು ಇದನ್ನು ಗಿಡಗಳಿಗೆ ಗೊಬ್ಬರವಾಗಿ ಬಳಸಬಹುದು. ಬಾಳೆಹಣ್ಣಿನ ಸಿಪ್ಪೆಗಳು ಪೊಟ್ಯಾಸಿಯಮ್ ಮತ್ತು ಇತರ ಕೆಲವು ಖನಿಜಗಳನ್ನು ಹೊಂದಿದ್ದು, ಇದು ಸಸ್ಯಗಳ ಬೆಳವಣಿಗೆಗೆ ಉಪಯುಕ್ತವಾಗಿದೆ. ಹಾಗಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ಗೊಬ್ಬರವಾಗಿ ಬಳಸಬಹುದು. ಹೌದು ಗಿಡಗಳಿಗೆ ಅಂಗಡಿಯಲ್ಲಿ ಸಿಗುವಂತಹ ರಾಸಾಯನಿಕಯುಕ್ತ ಗೊಬ್ಬರಗಳನ್ನು ಬಳಸುವ ಬದಲು, ಸಸ್ಯಗಳು ಸೊಂಪಾಗಿ ಬೆಳೆಯಲು ಸಹಾಯ ಮಾಡುವಂತಹ ಬಾಳೆ ಸಿಪ್ಪೆಯ ಗೊಬ್ಬರವನ್ನು ಬಳಸಹುದು. ಈ ಸಾವಯವ ಗೊಬ್ಬರವನ್ನು ತಯಾರಿಸುವುದು ಹೇಗೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಬಾಳೆಹಣ್ಣಿನ ಸಿಪ್ಪೆಯಿಂದ ಸಾವಯವ ಗೊಬ್ಬರ ತಯಾರಿಸಲು ಬೇಕಾಗಿರುವ ವಸ್ತುಗಳು:

ಬಾಳೆಹಣ್ಣಿನ ಸಿಪ್ಪೆಗಳು, ಒಣ ಎಲೆಗಳು ಅಥವಾ ಒಣ ಹುಲ್ಲು, ಸ್ವಲ್ಪ ತೋಟದ ಮಣ್ಣು, ಬಕೆಟ್ ಅಥವಾ ಕಾಂಪೋಸ್ಟ್ ಕಂಟೇನರ್, ಸ್ವಲ್ಪ ನೀರು

Loading...

ಬಾಳೆಹಣ್ಣಿನ ಸಿಪ್ಪೆಯಿಂದ ಗೊಬ್ಬರ ತಯಾರಿಸುವುದು ಹೇಗೆ?

  • ಮೊದಲು, ಬಾಳೆಹಣ್ಣಿನ ಸಿಪ್ಪೆಗಳನ್ನು ನೀರಿನಿಂದ ಸ್ವಚ್ಛಗೊಳಿಸಿ. ನಂತರ, ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಇದು ಅವು ವೇಗವಾಗಿ ಕೊಳೆಯಲು ಸಹಾಯ ಮಾಡುತ್ತದೆ.
  • ಈಗ ಒಂದು ಬಕೆಟ್ ಅಥವಾ ಕಾಂಪೋಸ್ಟ್ ಪಾತ್ರೆಯನ್ನು ತೆಗೆದುಕೊಳ್ಳಿ. ಮೊದಲು, ಅದರೊಳಗೆ ಒಣ ಎಲೆಗಳನ್ನು ಪದರಗಳಾಗಿ ಹಾಕಿ. ಅದರ ಮೇಲೆ ಬಾಳೆಹಣ್ಣಿನ ಸಿಪ್ಪೆಗಳನ್ನು ಹಾಕಿ. ಈಗ ಸಿಪ್ಪೆಗಳ ಮೇಲೆ ಸ್ವಲ್ಪ ಮಣ್ಣು ಮತ್ತು ಒಣ ಎಲೆಗಳನ್ನು ಹಾಕಿ ಮುಚ್ಚಿ. ನೀವು ಇದಕ್ಕೆ ಅಡುಗೆ ಮನೆಯಲ್ಲಿರುವ ಇತರೆ ಹಸಿ ಕಸಗಳನ್ನು ಕೂಡ ಸೇರಿಸಬಹುದು.
  • ಗೊಬ್ಬರವನ್ನು ಸ್ವಲ್ಪ ತೇವವಾಗಿಡಿ, ಆದರೆ ನೀರು ನಿಲ್ಲದಂತೆ ನೋಡಿಕೊಳ್ಳಿ. ಪಾತ್ರೆಯು ಚೆನ್ನಾಗಿ ಗಾಳಿ ಬೀಸಬೇಕು.
  • ಬಾಳೆಹಣ್ಣಿನ ಸಿಪ್ಪೆಗಳು ಮತ್ತು ಇತರ ಸಾವಯವ ವಸ್ತುಗಳು ಸಂಪೂರ್ಣವಾಗಿ ಕೊಳೆತು, ಮಿಶ್ರಣವು ಗಾಢ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗಿ, ಪುಡಿಪುಡಿಯಾಗಿ, ಮಣ್ಣಿನ ವಾಸನೆಯನ್ನು ಹೊಂದಿರುವಾಗ, ಗೊಬ್ಬರ ಗಿಡಗಳಿಗೆ ಹಾಕಲು ಸಿದ್ಧವಾಗುತ್ತದೆ.

ಇದನ್ನೂ ಓದಿ: ಮನೆಯನ್ನು ಸುಂದರಗೊಳಿಸುವುದರ ಜೊತೆಗೆ ಗಾಳಿಯನ್ನು ಶುದ್ಧೀಕರಿಸುತ್ತವೆ ಈ ಸಸ್ಯಗಳು

ಬಾಳೆಹಣ್ಣಿನ ಸಿಪ್ಪೆಯಿಂದ ಲಿಕ್ವಿಡ್ ಗೊಬ್ಬರ ತಯಾರಿಸುವುದು ಹೇಗೆ?

ಸಸ್ಯಗಳಿಗೆ ತ್ವರಿತ ಪೋಷಣೆ ನೀಡಲು ದ್ರವ ಗೊಬ್ಬರವನ್ನು ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಇದನ್ನು ತಯಾರಿಸಲು, ಬಾಳೆಹಣ್ಣಿನ ಸಿಪ್ಪೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಜಾರ್ ಅಥವಾ ಬಕೆಟ್‌ನಲ್ಲಿ ನೀರಿನಿಂದ ತುಂಬಿಸಿ. ಅವುಗಳನ್ನು 2 ರಿಂದ 3 ದಿನಗಳವರೆಗೆ ಬಿಡಿ. ಈ ಸಮಯದಲ್ಲಿ, ನೀರು ಬಣ್ಣವನ್ನು ಬದಲಾಯಿಸುತ್ತದೆ ಮತ್ತು ಸಿಪ್ಪೆಗಳಲ್ಲಿರುವ ಎಲ್ಲಾ ಪೋಷಕಾಂಶಗಳು‌ ನೀರಿನಲ್ಲಿ ಕರಗುತ್ತವೆ.  ಮೂರು ದಿನಗಳ ನಂತರ, ಸಿಪ್ಪೆಗಳನ್ನು ಸೋಸಿ, ಅದರಿಂದ ಬರುವ ದ್ರವವನ್ನು ಸಮಾನ ಪ್ರಮಾಣದ ಸರಳ ನೀರಿನೊಂದಿಗೆ ಬೆರೆಸಿ ಸಸ್ಯಗಳ ಬೇರುಗಳಿಗೆ ಹಾಕಿ.  ಇದು ವಿಶೇಷವಾಗಿ ಗುಲಾಬಿಗಳು ಮತ್ತು ದಾಸವಾಳದಂತಹ ಹೂಬಿಡುವ ಸಸ್ಯಗಳಿಗೆ ಪ್ರಯೋಜನಕಾರಿಯಾಗಿದೆ. ಅಲ್ಲದೆ ಈ ಲಿಕ್ವಿಡ್‌ ಗೊಬ್ಬರ ಮಣ್ಣಿನ pH ಮಟ್ಟವನ್ನು ಸಮತೋಲನಗೊಳಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us