AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Air Purifying Plants: ಮನೆಯನ್ನು ಸುಂದರಗೊಳಿಸುವುದರ ಜೊತೆಗೆ ಗಾಳಿಯನ್ನು ಶುದ್ಧೀಕರಿಸುತ್ತವೆ ಈ ಸಸ್ಯಗಳು

ನಗರೀಕರಣ, ಆಧುನೀಕರಣ ಈ ಎಲ್ಲದರ ಕಾರಣದಿಂದಾಗಿ ದಿನದಿಂದ ದಿನಕ್ಕೆ ಮಾಲಿನ್ಯ ಹೆಚ್ಚುತ್ತಿದೆ. ಹೆಚ್ಚುತ್ತಿರು ವಾಯುಮಾಲಿನ್ಯದ ಕಾರಣದಿಂದ ಜನರು ಉಸಿರಾಟ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಆಸ್ತಮಾ ಮತ್ತು ಅಲರ್ಜಿಗಳಂತಹ ಸಮಸ್ಯೆಗಳು ವಾಯುಮಾಲಿನ್ಯದಿಂದ ಹೆಚ್ಚಾಗುತ್ತಿವೆ. ಅದರಲ್ಲೂ ನಗರ ಪ್ರದೇಶದಲ್ಲಿ ವಾಯುಮಾಲಿನ್ಯದ ಸಮಸ್ಯೆ ತೀರಾ ಹೆಚ್ಚಿದೆ. ಅಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿ ಈ ಕೆಲವೊಂದು ಗಿಡಗಳನ್ನು ನೆಡುವ ಮೂಲಕ ಶುದ್ಧ ಗಾಳಿಯನ್ನು ಪಡೆಯಬಹುದು.

Air Purifying Plants: ಮನೆಯನ್ನು ಸುಂದರಗೊಳಿಸುವುದರ ಜೊತೆಗೆ ಗಾಳಿಯನ್ನು ಶುದ್ಧೀಕರಿಸುತ್ತವೆ ಈ ಸಸ್ಯಗಳು
ಸಾಂದರ್ಭಿಕ ಚಿತ್ರ Image Credit source: vecteezy
ಮಾಲಾಶ್ರೀ ಅಂಚನ್​
|

Updated on: Nov 14, 2026 | 5:54 PM

Share

ಅಂಗಳದಲ್ಲಿ ಮತ್ತು ಮನೆಯ ಒಳಾಂಗಣದಲ್ಲಿ ನಡೆಸುವಂತಹ ಗಿಡಗಳು (plants) ಮನೆಯ ಅಂದವನ್ನು ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಅಷ್ಟೇ ಅಲ್ಲದೆ ಮನೆ ಸುತ್ತ ಗಿಡಗಳನ್ನು ನೆಡುವ ಮೂಲಕ ಶುದ್ಧ ಗಾಳಿಯನ್ನು ಸಹ ಪಡೆಯಬಹುದು. ಇಂದಿನ ಈ ಕಾಲ ಘಟ್ಟದಲ್ಲಿ ಮಾಲಿನ್ಯದ ಮಟ್ಟ ತೀರಾ ಹೆಚ್ಚಾಗಿದ್ದು, ಇದರಿಂದ ಗಾಳಿಯ ಗುಣಮಟ್ಟ ಕೂಡ ಕಡಿಮೆಯಾಗುತ್ತಿವೆ.  ಕಳಪೆ ಗಾಳಿಯ ಗುಣಮಟ್ಟವು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಅಸ್ವಸ್ಥತೆ, ಶ್ವಾಸನಾಳದ ಆಸ್ತಮಾ, ಇಂಟರ್ಸ್ಟಿಷಿಯಲ್ ಶ್ವಾಸಕೋಶದ ಕಾಯಿಲೆಗೆ ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಶುದ್ಧ ಗಾಳಿಯನ್ನು ಪಡೆಯಲು ಮನೆಯಲ್ಲಿ ಈ ಕೆಲವೊಂದು ಒಳಾಂಗಣ ಸಸ್ಯಗಳನ್ನು ನೀವು ನೆಡಬಹುದು. ಈ ಗಿಡಗಳು ಗಾಳಿಯನ್ನು ಶುದ್ಧೀಕರಿಸುವುದರ ಜೊತೆಗೆ ತಾಜಾ ಗಾಳಿಯನ್ನು ಒದಗಿಸುತ್ತವೆ.

ಅರೇಕಾ ಪಾಮ್ ಗಿಡ:

ಇದು ಅತ್ಯುತ್ತಮ ಗಾಳಿ ಶುದ್ಧೀಕರಣ ಸಸ್ಯಗಳಲ್ಲಿ ಒಂದಾಗಿದೆ. ಇದು ಒಳಾಂಗಣ ಗಾಳಿಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಅರೆಕಾ ಪಾಮ್ ಗಿಡ  ಮನೆಯ ವಾತಾವರಣವನ್ನು ಸುಂದರವನ್ನಾಗಿ ಕಾಣಿಸುವುದರ ಜೊತೆಗೆ  ಈ ಸಸ್ಯವು ಗಾಳಿಯನ್ನು ಸಹ ಶುದ್ಧೀಕರಿಸುತ್ತದೆ. ಮುಖ್ಯವಾಗಿ ಈ ಗಿಡ  ಗಾಳಿಯಲ್ಲಿರುವ  ಇಂಗಾಲದ ಡೈ ಫಾರ್ಮಾಲ್ಡಿಹೈಡ್ನಂತಹ ಹಾನಿಕಾರಕ ಅನಿಲಗಳನ್ನು ಹೀರಿಕೊಂಡು ಗಾಳಿಯನ್ನು ಶುದ್ಧೀಕರಿಸುತ್ತದೆ.

ಮನಿ ಪ್ಲಾಂಟ್:

ಮನೆಯ ಒಳಗೆ ಮತ್ತು ಹೊರಗೆ ಸುಲಭವಾಗಿ ಬೆಳೆಯಬಹುದಾದ  ಮನಿ ಪ್ಲಾಂಟ್ ಏರ್ ಪ್ಯೂರಿಫೈಯರ್ ಆಗಿಯೂ ಕೆಲಸ ಮಾಡುತ್ತದೆ. ಈ ಸಸ್ಯವು ನಿಮಗೆ ಶುದ್ಧ ಗಾಳಿಯನ್ನು ಒದಗಿಸಿಕೊಡುತ್ತದೆ. ಇದು ಗಾಳಿಯಲ್ಲಿರುವ ವಿಷಕಾರಿ ಅನಿಲಗಳನ್ನು ಹೀರಿಕೊಳ್ಳುತ್ತದೆ ಮತ್ತು ತಾಜಾ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಈ ರೀತಿ ಗಾಳಿಯನ್ನು ಶುದ್ಧೀಕರಿಸುತ್ತವೆ.

ಪೀಸ್ ಲಿಲಿ: 

ಒಳಾಂಗಣ ಸಸ್ಯಗಳಲ್ಲಿ ಒಂದಾದ ಪೀಸ್ ಲಿಲಿ ಸುಂದರವಾದ ಗಿಡವಾಗಿದೆ. ಹಸಿರು ಎಲೆಗಳು  ಮತ್ತು ಬಿಳಿ ಹೂವುಗಳನ್ನು ಹೊಂದಿರುವ ಲಿಲಿ ಮನೆಯ ಅಂದವನ್ನು ಹೆಚ್ಚಿಸುವುದಲ್ಲದೆ ಗಾಳಿಯನ್ನು ಸಹ ಶುದ್ಧೀಕರಿಸುತ್ತದೆ. ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಈ ಗಿಡ ಸಹಾಯ ಮಾಡುತ್ತದೆ. ಈ ಸಸ್ಯ ಗಾಳಿಯಲ್ಲಿನ ಕಾರ್ಬನ್ ಮಾನಾಕ್ಸೈಡ್ ಮತ್ತು ಇತರ ವಿಷಕಾರಿ ಅನಿಲಗಳನ್ನು ಹೀರಿಕೊಳ್ಳುವ ಮೂಲಕ ಗಾಳಿಯನ್ನು ಶುದ್ಧೀಕರಿಸುತ್ತದೆ.

ಜೇಡ್ ಸಸ್ಯ:

ಜೇಡ್ ಸಸ್ಯಗಳು ಅತ್ಯುತ್ತಮ ಗಾಳಿ ಶುದ್ಧೀಕರಣಕಾರಕಗಳಾಗಿಯೂ ಕಾರ್ಯನಿರ್ವಹಿಸುತ್ತವೆ, ಈ ಸಸ್ಯ ಒಳಾಂಗಣ ಗಾಳಿಯನ್ನು ಸ್ವಚ್ಛವಾಗಿಡುತ್ತವೆ. ಅವು ರಾತ್ರಿಯಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ, ಆದ್ದರಿಂದ ನೀವು ಅವುಗಳನ್ನು ಹಾಲ್‌ ಮತ್ತು ಮಲಗುವ ಕೋಣೆಯನ್ನು ಇಡಬಹುದು. ಅಲ್ಲದೆ ಈ ಗಿಡ  ಧೂಳು ಮತ್ತು ಅಲರ್ಜಿನ್‌ಗಳಿಂದ ನಮ್ಮನ್ನು ರಕ್ಷಿಸುತ್ತವೆ.

ಇದನ್ನೂ ಓದಿ: ತುಳಸಿ ಹೂವುಗಳಿಂದ ತಯಾರಿಸಿ ರಾಸಯನಿಕಮುಕ್ತ ಪರಿಮಳಯುಕ್ತ ಧೂಪ

ಸ್ನೇಕ್ ಪ್ಲಾಂಟ್:

ಈ ಸಸ್ಯವು ಗಾಳಿಯಲ್ಲಿರುವ ಹಾನಿಕಾರಕ ಮಾಲಿನ್ಯಕಾರಕಗಳನ್ನು ಫಿಲ್ಟರ್ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಇದು ಗಾಳಿಯಿಂದ ಇಂಗಾಲದ ಮಾನಾಕ್ಸೈಡ್, ಮೀಥೇನ್ ಮತ್ತು ಗಂಧಕವನ್ನು ಹೀರಿಕೊಳ್ಳುತ್ತದೆ. ಈ ಮೂಲಕ ಗಾಳಿಯನ್ನು ಶುದ್ಧೀಕರಿಸುತ್ತದೆ.

ಸ್ಪೈಡರ್ ಪ್ಲಾಂಟ್:

ಈ ಗಿಡ ಗಾಳಿಯಿಂದ ಹಾನಿಕಾರಕ ಮತ್ತು ಮಾಲಿನ್ಯಕಾರಕ ವಸ್ತುಗಳನ್ನು ತೆಗೆದುಹಾಕುತ್ತದೆ. ಮಾತ್ರವಲ್ಲದೆ ಇದು  ಶುದ್ಧ ಗಾಳಿಯನ್ನು ಸಹ ನೀಡುತ್ತದೆ.  ಈ ಸಸ್ಯವು ಗಾಳಿಯಲ್ಲಿರುವ ಕ್ಸಿಲೀನ್, ಬೆಂಬೀನ್, ಫಾರ್ಮಾಲ್ಡಿಹೈಡ್ ಮತ್ತು ಕಾರ್ಬನ್ ಮಾನಾಕ್ಸೈಡ್ನಂತಹ ವಿಷಕಾರಿ ಅನಿಲವನ್ನು ಹೀರಿಕೊಳ್ಳುವ ಮೂಲಕ ಗಾಳಿಯನ್ನು ಶುದ್ಧೀಕರಿಸುತ್ತದೆ.

ರಬ್ಬರ್ ಪ್ಲಾಂಟ್:

ಈ ಗಿಡ ಗಾಳಿಯನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ ಮರದ ಪೀಠೋಪಕರಣಗಳಿಂದ ಬಿಡುಗಡೆಯಾಗುವ ಹಾನಿಕಾರಕ ಸಾವಯವ ಸಂಯುಕ್ತವಾಗಿರುವ  ಫಾರ್ಮಾಲ್ಡಿಹೈಡ್ನಿಂದ   ಪರಿಸರವನ್ನು ಮುಕ್ತವಾಗಿಡುವ ಸಾಮಾರ್ಥ್ಯವನ್ನು ಹೊಂದಿದೆ.  ಅದ್ದರಿಂದ ಮರದ ಟೇಬಲ್, ಸೋಫಾ ಅಥವಾ ಹಾಸಿಗೆಯ ಬಳಿ ಈ ರಬ್ಬರ್ ಗಿಡವನ್ನು ಇರಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More