Mental Health: ಒತ್ತಡದಲ್ಲಿರುವಾಗ ಸೇವಿಸಬೇಕಾದ ಆಹಾರಗಳು ಇಲ್ಲಿವೆ

|

Updated on: Jun 25, 2023 | 4:09 PM

ಸಂಸ್ಕರಿಸಿದ ಆಹಾರಗಳು ಮತ್ತು ಸಕ್ಕರೆಯ ಅಂಶ ಅಧಿಕವಾಗಿರುವ ಆಹಾರಗಳು ರಕ್ತದಲ್ಲಿನ ಸಕ್ಕರೆಯ ಮಟ್ಟಗಳ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತವೆ. ಇದು ನೇರವಾಗಿ ಒತ್ತಡವನ್ನು ಹೆಚ್ಚಿಸುತ್ತದೆ. ಆಹಾರದಲ್ಲಿ ಕೆಲವು ಪೋಷಕಾಂಶಗಳನ್ನು ಸೇವಿಸುವ ಮೂಲಕ ಒತ್ತಡವನ್ನು ಕಡಿಮೆ ಮಾಡಬಹುದು.

Mental Health: ಒತ್ತಡದಲ್ಲಿರುವಾಗ ಸೇವಿಸಬೇಕಾದ ಆಹಾರಗಳು ಇಲ್ಲಿವೆ
Mood-Boosting Foods
Image Credit source: Daily Mail
Follow us on

ಬದಲಾದ ಜೀವನಶೈಲಿಯು ನಿಮ್ಮನ್ನು ಸಾಕಷ್ಟು ಒತ್ತಡವನ್ನುಂಟು ಮಾಡುತ್ತದೆ. ಇದು ನಿಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಜೊತೆಗೆ ನಿಮ್ಮ ಆಹಾರಕ್ರಮಗಳು ಕೂಡ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡಬಹುದು. ಸಂಸ್ಕರಿಸಿದ ಆಹಾರಗಳು ಮತ್ತು ಸಕ್ಕರೆಯ ಅಂಶ ಅಧಿಕವಾಗಿರುವ ಆಹಾರಗಳು ರಕ್ತದಲ್ಲಿನ ಸಕ್ಕರೆಯ ಮಟ್ಟಗಳ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತವೆ. ಇದು ನೇರವಾಗಿ ಒತ್ತಡವನ್ನು ಹೆಚ್ಚಿಸುತ್ತದೆ. ಆಹಾರದಲ್ಲಿ ಕೆಲವು ಪೋಷಕಾಂಶಗಳನ್ನು ಸೇವಿಸುವ ಮೂಲಕ ಒತ್ತಡವನ್ನು ಕಡಿಮೆ ಮಾಡಬಹುದು. ಒತ್ತಡವನ್ನು ನಿರ್ವಹಿಸುವ ಅತ್ಯುತ್ತಮ ವಿಧಾನವೆಂದರೆ ಆಹಾರದಿಂದ ನಿರ್ದಿಷ್ಟ ಪೋಷಕಾಂಶಗಳನ್ನು ಸೇವಿಸುವುದು. ಅಧ್ಯಯನಗಳ ಪ್ರಕಾರ, ನೀವು ಒತ್ತಡದಲ್ಲಿರುವಾಗ ನಿಮ್ಮ ದೇಹಕ್ಕೆ ಹೆಚ್ಚಿನ ವಿಟಮಿನ್ ಬಿ ಮತ್ತು ಸಿ, ಸೆಲೆನಿಯಮ್, ಮೆಗ್ನೀಸಿಯಮ್ ಮತ್ತು ಇತರ ಪೋಷಕಾಂಶಗಳ ಅಗತ್ಯವಿರುತ್ತದೆ. ಕೆಲವು ಆತಂಕ-ವಿರೋಧಿ ಆಹಾರಗಳು ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿಮ್ಮ ದೇಹ ಮತ್ತು ಮನಸ್ಸನ್ನು ಶಾಂತಗೊಳಿಸಲು ಬಹಳ ಪರಿಣಾಮಕಾರಿ.

ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗುವ ಆಹಾರಗಳು:

ಬಾದಾಮಿ:

ಈ ಒತ್ತಡ-ನಿವಾರಕ ಆಹಾರಗಳಲ್ಲಿ ಮೆಗ್ನೀಸಿಯಮ್, ಸತು, ವಿಟಮಿನ್ ಇ, ವಿಟಮಿನ್ ಬಿ 2 ಮತ್ತು ವಿಟಮಿನ್ ಬಿ 2 ಸಮೃದ್ಧವಾಗಿದೆ. ಇವುಗಳ ಸಹಾಯದಿಂದ ಸಿರೊಟೋನಿನ್ ಎಂಬ ಸಂತೋಷದ ಹಾರ್ಮೋನ್ ಉತ್ಪತ್ತಿಯಾಗುತ್ತದೆ.

ಕ್ಯಾಮೊಮೈಲ್ ಚಹಾ:

ಕ್ಯಾಮೊಮೈಲ್ ಹೂವಿನಿಂದ ತಯಾರಿಸಿದ ಚಹಾ, ಶಾಂತಿ ಮತ್ತು ನೆಮ್ಮದಿಯ ಸಂಕೇತವಾಗಿದೆ, ಇದು ದೇಹದಲ್ಲಿ ಸಿರೊಟೋನಿನ್ ಮತ್ತು ಮೆಲಟೋನಿನ್‌ನ ನೈಸರ್ಗಿಕ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ನಿಮಗೆ ಶಾಂತಿಯುತ ಮತ್ತು ವಿಶ್ರಾಂತಿಯನ್ನು ನೀಡುತ್ತದೆ.

ಇದನ್ನೂ ಓದಿ: ಕಾಳು ಮೆಣಸು ನಿಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯಾಗಿದೆ ಗೊತ್ತಾ?

ಅಶ್ವಗಂಧ:

ಇದು ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯಕ್ಕೆ ಹೆಚ್ಚು ಹೆಸರುವಾಸಿಯಾಗಿದೆ. ಒತ್ತಡವನ್ನು ನಿವಾರಿಸಲು ಮತ್ತು ಶಾಂತ ನಿದ್ರೆಗೆ ಸಿದ್ಧರಾಗಲು ಮಲಗುವ ಮೊದಲು ಅಶ್ವಗಂಧ ಚಹಾವನ್ನು ಕುಡಿಯುವುದು ಒಳ್ಳೆಯದು. ಒತ್ತಡದ ಹಾರ್ಮೋನ್ ಎಂದೂ ಕರೆಯಲ್ಪಡುವ ಕಾರ್ಟಿಸೋಲ್ ಅನ್ನು ಈ ಔಷಧೀಯ ಗಿಡಮೂಲಿಕೆಯ ಸಹಾಯದಿಂದ ಕಡಿಮೆ ಮಾಡಬಹುದು.

ಬಾಳೆಹಣ್ಣು:

ಬಾಳೆಹಣ್ಣಿನಲ್ಲಿ ಕಂಡುಬರುವ ಫೋಲೇಟ್ ಮತ್ತು ವಿಟಮಿನ್ ಬಿ 6 ಸೇರಿದಂತೆ ಬಿ ವಿಟಮಿನ್‌ಗಳು ಸಿರೊಟೋನಿನ್ ಸಂಶ್ಲೇಷಣೆಗೆ ಅವಶ್ಯಕವಾಗಿದೆ, ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಆತಂಕವನ್ನು ನಿವಾರಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: