Kannada News Lifestyle National Tourism Day 2023: You must Visit These Beautiful Places in Karnataka in Kannada Travel Tips
National Tourism Day 2023: ಕರ್ನಾಟಕದ ಈ ಸುಂದರ ತಾಣಗಳಿಗೆ ನೀವು ಭೇಟಿ ನೀಡಲೇಬೇಕು
TV9 Web | Updated By: ಅಕ್ಷತಾ ವರ್ಕಾಡಿ
Updated on:
Jan 25, 2023 | 1:07 PM
ಪ್ರತಿವರ್ಷ ಜನವರಿ 25 ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರದ ಸುಂದರ ಪ್ರವಾಸಿ ತಾಣಗಳ ಕುರಿತು ಜಾಗೃತಿ, ಹಾಗೂ ಪ್ರವಾಸೋದ್ಯಮ ಮತ್ತು ದೇಶದ ಆರ್ಥಿಕತೆಯ ಮೇಲೆ ಪ್ರವಾಸೋದ್ಯಮ ಯಾವ ರೀತಿ ಸಹಕಾರಿ ಎಂಬ ಉದ್ದೇಶದಿಂದ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.
1 / 8
ಪ್ರತಿವರ್ಷ ಇಂದು(ಜನವರಿ 25) ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರದ ಸುಂದರ ಪ್ರವಾಸಿ ತಾಣಗಳ ಕುರಿತು ಜಾಗೃತಿ, ಹಾಗೂ ಪ್ರವಾಸೋದ್ಯಮ ಮತ್ತು ದೇಶದ ಆರ್ಥಿಕತೆಯ ಮೇಲೆ ಪ್ರವಾಸೋದ್ಯಮ ಯಾವ ರೀತಿ ಸಹಕಾರಿ ಎಂಬ ಉದ್ದೇಶದಿಂದ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.
2 / 8
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಸಂಸ್ಕ್ರತಿ, ಸಂಪ್ರದಾಯ, ಆಚಾರ ವಿಚಾರಗಳಲ್ಲಿ ಸಾಕಷ್ಟು ವಿಭಿನ್ನತೆಯನ್ನು ಕಾಣಬಹುದು.
3 / 8
ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಅಂಗವಾಗಿ ಕರ್ನಾಟಕದ ಕೆಲವೊಂದಿಷ್ಟು ಪ್ರವಾಸಿ ತಾಣಗಳು ಹಾಗೂ ಅಲ್ಲಿನ ಇತಿಹಾಸ , ಶ್ರೀಮಂತ ವಾಸ್ತು ಶೈಲಿಗಳ ಕುರಿತು ಮಾಹಿತಿ ಇಲ್ಲಿದೆ.
4 / 8
ಹಂಪಿ: ಯುನೆಸ್ಕೋ ಘೋಷಿಸಿದಂತೆ ಹಂಪಿ ವಿಶ್ವದ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ವಿಜಯನಗರದ ರಾಜರ ಆಳ್ವಿಕೆಯ ಕಾಲದ ಕಲ್ಲಿನ ಕೆತ್ತನೆಗಳು ನಿಮ್ಮನ್ನು ಅಚ್ಚರಿಗೊಳಿಸುತ್ತದೆ.
5 / 8
ಗೋಕರ್ಣ: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಗೊಂಡಿರುವ ಒಂದು ಸಣ್ಣ ಮತ್ತು ಕಡಿಮೆ ಜನಸಂಖ್ಯೆಯ ಸುಂದರ ತಾಣ. ನೀವು ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಕಡಲ ತೀರದಲ್ಲಿ ಸುಂದರ ಕ್ಷಣವನ್ನು ಕಳೆಯಬಹುದಾಗಿದೆ.
6 / 8
ಕೊಡಗು, ಮಡಿಕೇರಿ: ಕೂರ್ಗ್ ಕಾಫಿ ತೋಟಗಳು, ಜಲಪಾತಗಳು, ಹಸಿರು ಪರ್ವತಗಳಿಂದ ಕಂಗೊಳಿಸುತ್ತದೆ. ಇಲ್ಲಿನ ಮತ್ತೊಂದು ವಿಶಿಷ್ಟ ಆಕರ್ಷಣೆ ಎಂದರೆ ಟಿಬೆಟಿಯನ್ ಮಠ. ಪ್ರವಾಸಿಗರು ಕಾಫಿ ಎಸ್ಟೇಟ್ಗಳಲ್ಲಿ, ನದಿಯ ಪಕ್ಕದಲ್ಲಿ ಮತ್ತು ಪರ್ವತದ ರಮಣೀಯ ಹಾದಿಗಳಲ್ಲಿ ಚಾರಣಕ್ಕೆ ಸಾಕಷ್ಟು ಆಯ್ಕೆಗಳನ್ನು ಹೊಂದಿದ್ದಾರೆ.
7 / 8
ನಂದಿ ಬೆಟ್ಟ: ನೀವು ಬೆಂಗಳೂರಿನ ಟ್ರಾಫಿಕ್ ಹಾಗೂ ಜನದಟ್ಟನೆಯಿಂದ ಸ್ವಲ್ಪ ಸಮಯ ಶಾಂತವಾದ ಅನುಭವವನ್ನು ಪಡೆಯಬೇಕಾದರೆ ಮುಂಜಾನೆ ನಂದಿಬೆಟ್ಟಕ್ಕೆ ಭೇಟಿ ನೀಡಿ. ಇಲ್ಲಿನ ತಂಪಾದ ಮತ್ತು ಮಂಜಿನ ವಾತಾವರಣವು ಅತ್ಯುತ್ತಮ ಆಕರ್ಷಣೆಯಾಗಿದೆ. ನಂದಿ ಬೆಟ್ಟವು ಬೆಂಗಳೂರಿನಿಂದ ಸುಮಾರು 2 ಗಂಟೆಗಳ ದೂರದಲ್ಲಿದೆ.
8 / 8
ಮೈಸೂರು: ಮೈಸೂರಿನಲ್ಲಿ ಸಾಕಷ್ಟು ಅರಮನೆಗಳು, ವಸ್ತು ಸಂಗ್ರಹಾಲಯಗಳು, ದೇವಾಲಯಗಳು ಮತ್ತು ಪಾರಂಪರಿಕ ರಚನೆಗಳು ಇವೆ. ಆಕರ್ಷಣೀಯ ಬೃಂದಾವನ್ ಉದ್ಯಾನವನಗಳು ಮೈಸೂರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಬೆಂಗಳೂರು ವಿಮಾನ ನಿಲ್ದಾಣವು ಮೈಸೂರಿನಿಂದ 184 ಕಿ.ಮೀ ದೂರದಲ್ಲಿದೆ.
Published On - 1:07 pm, Wed, 25 January 23