ರಾತ್ರಿ ಕಾಲು ತೊಳೆದು ಮಲಗಬೇಕು ಎನ್ನುವುದು ಕೇವಲ ಶುಚಿತ್ವದ ದೃಷ್ಟಿಯಿಂದಲ್ಲ, ಈ ಆರೋಗ್ಯ ಪ್ರಯೋಜನಗಳು ನಿಮ್ಮದಾಗಲಿದೆ

|

Updated on: Jun 22, 2023 | 9:00 AM

ಇಡೀ ದಿನದ ಕೆಲಸವೆಲ್ಲಾ ಮುಗಿಸಿ ಮಲಗಬೇಕೆಂದು ಹಾಸಿಗೆಯ ಬಳಿ ಬರುವ ಮುನ್ನ ನೀವು ಪಾದಗಳನ್ನು ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

ರಾತ್ರಿ ಕಾಲು ತೊಳೆದು ಮಲಗಬೇಕು ಎನ್ನುವುದು ಕೇವಲ ಶುಚಿತ್ವದ ದೃಷ್ಟಿಯಿಂದಲ್ಲ, ಈ ಆರೋಗ್ಯ ಪ್ರಯೋಜನಗಳು ನಿಮ್ಮದಾಗಲಿದೆ
ಕಾಲು
Image Credit source: Pipa News
Follow us on

ಇಡೀ ದಿನದ ಕೆಲಸವೆಲ್ಲಾ ಮುಗಿಸಿ ಮಲಗಬೇಕೆಂದು ಹಾಸಿಗೆಯ ಬಳಿ ಬರುವ ಮುನ್ನ ನೀವು ಪಾದಗಳನ್ನು ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಆದರೆ ಕೆಲವರು ಕಾಲು ತೊಳೆಯದೆ ಮಲಗುತ್ತಾರೆ. ಈ ರೀತಿ ಮಾಡುವುದರಿಂದ ನೀವು ಬಯಸದೆಯೂ ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೀರಿ. ರಾತ್ರಿಯಲ್ಲಿ ಪಾದಗಳನ್ನು ತೊಳೆದು ಮಲಗುವ ವ್ಯಕ್ತಿಯು ಇದರಿಂದ ಅನೇಕ ಪ್ರಯೋಜನಗಳನ್ನು ಪಡೆಯುತ್ತಾನೆ.

ಆರೋಗ್ಯ ಪ್ರಯೋಜನಗಳೇನು?
ವ್ಯಕ್ತಿಯ ಕಾಲು ಮಾತ್ರ ದೇಹದ ಸಂಪೂರ್ಣ ಭಾರವನ್ನು ತನ್ನ ಮೇಲೆ ಹೊತ್ತುಕೊಳ್ಳುವ ಏಕೈಕ ಭಾಗವಾಗಿದೆ. ಇದರಿಂದಾಗಿ ಕಾಲುಗಳಲ್ಲಿ ಬಿಗಿತ ಮತ್ತು ಸೆಳೆತ ಮತ್ತು ನೋವು ಇರುತ್ತದೆ. ನಿಮಗೂ ಇಂತಹ ಸಮಸ್ಯೆ ಇದ್ದರೆ, ಮಲಗುವ ಮುನ್ನ ನಿಮ್ಮ ಪಾದಗಳನ್ನು ತೊಳೆದು ಮಲಗಬೇಕು. ಹೀಗೆ ಮಾಡುವುದರಿಂದ ನಿಮ್ಮ ಕೀಲು ನೋವು ಮತ್ತು ಸ್ನಾಯುಗಳು ಸಾಕಷ್ಟು ಪರಿಹಾರವನ್ನು ಪಡೆಯುತ್ತವೆ.

ಪಾದ ಅತಿಯಾಗಿ ಬೆವರುವುದು
ಪಾದಗಳು ಅತಿಯಾಗಿ ಬೆವರುತ್ತಿದ್ದರೆ ಅದನ್ನು ಹೈಪರ್ಹೈಡ್ರೋಸಿಸ್ ಎಂದು ಕರೆಯಲಾಗುತ್ತದೆ. ಆ ವ್ಯಕ್ತಿಯು ರಾತ್ರಿಯಲ್ಲಿ ತನ್ನ ಪಾದಗಳನ್ನು ತೊಳೆದ ನಂತರ ಮಲಗಬೇಕು. ಇದರಿಂದ ನಿಮ್ಮ ಪಾದಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುವುದಿಲ್ಲ ಮತ್ತು ಅಥ್ಲೀಟ್ ಫೂಟ್​ ಸಮಸ್ಯೆಯಿಂದ ಪಾರಾಗುತ್ತೀರಿ.

ವಿಶ್ರಾಂತಿ
ಬಿಡುವಿಲ್ಲದ ಜೀವನಶೈಲಿ ದಿನದ ಓಡಾಟದಿಂದಾಗಿ, ಕಾಲುಗಳ ಸ್ನಾಯುಗಳು ಮತ್ತು ಮೂಳೆಗಳಲ್ಲಿ ನೋವು ಇರುತ್ತದೆ. ಪಾದಗಳಲ್ಲಿ ಸಾಕಷ್ಟು ನೋವು ಇದ್ದರೆ, ಅವರು ತಮ್ಮ ಪಾದಗಳನ್ನು ತೊಳೆದು ಮಲಗಬೇಕು. ಇದರಿಂದ ಮನಸ್ಸು ಶಾಂತವಾಗಿರುವುದರ ಜೊತೆಗೆ ದೇಹವು ನಿರಾಳವಾಗಿರುತ್ತದೆ. ಆಯುರ್ವೇದದ ಪ್ರಕಾರ ರಾತ್ರಿ ಮಲಗುವ ಮುನ್ನ ಪಾದಗಳನ್ನು ತೊಳೆಯುವುದು ಒಳ್ಳೆಯದು. ಇದು ಉತ್ತಮ ನಿದ್ರೆಗೆ ಕಾರಣವಾಗುತ್ತದೆ ಮತ್ತು ವ್ಯಕ್ತಿಯು ಒತ್ತಡದಿಂದ ಮುಕ್ತನಾಗಿರುತ್ತಾನೆ.

ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲಾಗುತ್ತದೆ
ಇತರರಿಗಿಂತ ನಿಮ್ಮ ದೇಹ ಹೆಚ್ಚು ಬಿಸಿಯಾಗಿದ್ದರೆ ಕಾಲು ತೊಳೆದ ನಂತರವೇ ಮಲಗಬೇಕು. ರಾತ್ರಿ ಮಲಗುವ ಮುನ್ನ ಪಾದಗಳನ್ನು ತೊಳೆಯುವುದರಿಂದ ದೇಹದ ಉಷ್ಣತೆಯು ಸಮತೋಲನದಲ್ಲಿರುತ್ತದೆ.

ಕಾಲಿನಲ್ಲಿ ವಾಸನೆ
ಕಾಲಿನಿಂದ ವಾಸನೆ ಬರುತ್ತಿದ್ದರೆ ನೀರಿಗೆ ನಿಂಬೆ ಸೇರಿಸಿ ನಿಮ್ಮ ಪಾದಗಳನ್ನು ಚೆನ್ನಾಗಿ ತೊಳೆಯಬೇಕು.

ಪಾದಗಳನ್ನು ತೊಳೆಯಲು ಇದು ಸರಿಯಾದ ಮಾರ್ಗ

ತಣ್ಣನೆಯ, ಸಾಮಾನ್ಯ ಅಥವಾ ಉಗುರುಬೆಚ್ಚನೆಯ ನೀರಿನಿಂದ ನಿಮ್ಮ ಪಾದಗಳನ್ನು ಸಹ ನೀವು ತೊಳೆಯಬಹುದು. ಅದಕ್ಕಾಗಿಯೇ ಬಕೆಟ್‌ನಲ್ಲಿ ನೀರನ್ನು ತೆಗೆದುಕೊಳ್ಳಿ ಮತ್ತು ಅದರಲ್ಲಿ ಸ್ವಲ್ಪ ನಿಂಬೆ ಭಾಗವನ್ನು ಸಹ ಹಾಕಬಹುದು. ಈಗ ಅದರಲ್ಲಿ ಪಾದಗಳನ್ನು ಸ್ವಲ್ಪ ಹೊತ್ತು ಇರಿಸಿ. ಇದನ್ನು 15 ನಿಮಿಷಗಳ ಕಾಲ ಇಟ್ಟುಕೊಂಡ ನಂತರ, ಪಾದಗಳನ್ನು ಹೊರತೆಗೆದು ನಂತರ ಅವುಗಳನ್ನು ಚೆನ್ನಾಗಿ ಒರೆಸಿ ಮತ್ತು ಎಣ್ಣೆಯನ್ನು ಹಚ್ಚಿ ಇದು ನಿಮಗೆ ತ್ವರಿತ ಪರಿಹಾರವನ್ನು ನೀಡುತ್ತದೆ.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ