Mug Cake Recipe: ಕೇವಲ 2 ನಿಮಿಷಗಳಲ್ಲಿ ಚಾಕೊಲೇಟ್ ಮಗ್ ಕೇಕ್ ತಯಾರಿಸಿ

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ತಮ್ಮ ಫೇವರೇಟ್​​ ಚಾಕೊಲೇಟ್ ಮಗ್ ಕೇಕ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೀವು ಕೇವಲ ಎರಡೇ ನಿಮಿಷಗಳಲ್ಲಿ ತಯಾರಿಸಬಹುದಾಗಿದೆ. ನೀವು ನಿಮ್ಮ ಮನೆಯಲ್ಲಿ ಒಮ್ಮೆ ಪ್ರಯತ್ನಿಸಿ.

Mug Cake Recipe: ಕೇವಲ 2 ನಿಮಿಷಗಳಲ್ಲಿ ಚಾಕೊಲೇಟ್ ಮಗ್ ಕೇಕ್ ತಯಾರಿಸಿ
ಚಾಕೊಲೇಟ್ ಮಗ್ ಕೇಕ್
Image Credit source: NDTV

Updated on: Feb 11, 2023 | 6:19 PM

ಸೆಲೆಬ್ರೆಟಿಗಳು ತಮ್ಮ ಸೌಂದರ್ಯ ಹಾಗೂ ಫಿಟ್ನೆಸ್​​​ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ಜೊತೆಗೆ ಯಾವ ರೀತಿಯ ಆಹಾರಗಳನ್ನು ರೂಢಿಸಿಕೊಂಡಿದ್ದಾರೆ ಹಾಗೂ ದೈನಂದಿನ ಜೀವನಕ್ರಮಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಹಾಗೆಯೇ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ತಮ್ಮ ಫೇವರೇಟ್​​ ಚಾಕೊಲೇಟ್ ಮಗ್ ಕೇಕ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೀವು ಕೇವಲ ಎರಡೇ ನಿಮಿಷಗಳಲ್ಲಿ ತಯಾರಿಸಬಹುದಾಗಿದೆ. ನೀವು ನಿಮ್ಮ ಮನೆಯಲ್ಲಿ ಒಮ್ಮೆ ಪ್ರಯತ್ನಿಸಿ.

ಚಾಕೊಲೇಟ್ ಮಗ್ ಕೇಕ್ ರೆಸಿಪಿ:

ಬೇಕಾಗುವ ಸಾಮಾಗ್ರಿಗಳು:

ಹಾಲು, ಬೆಣ್ಣೆ, ಮೈದಾ, ಕೋಕೋ ಪೌಡರ್, ಉಪ್ಪು, ಸಕ್ಕರೆ ಪುಡಿ.
ನೀವು ಮೈದಾದ ಬದಲಾಗಿ ಗೋಧಿ ಹಿಟ್ಟನ್ನು ಬಳಸಬಹುದು. ಹಾಗೆಯೇ ಹಾಲಿನ ಬದಲಾಗಿ ಬಾದಾಮಿ ಹಾಲನ್ನು ಬಳಸಬಹುದಾಗಿದೆ.

ಇದನ್ನೂ ಓದಿ: ಮನೆಯಲ್ಲಿಯೇ ಗರಿ ಗರಿಯಾಗಿ ಅಕ್ಕಿ ಪಕೋಡ ತಯಾರಿಸಿ

ಚಾಕೊಲೇಟ್ ಮಗ್ ಕೇಕ್ ಮಾಡುವ ವಿಧಾನ:

ಮೊದಲಿಗೆ ಮೇಲೆ ನೀಡಿರುವ ಎಲ್ಲಾ ಪದಾರ್ಥಗಳನ್ನು ಒಂದು ಬಟ್ಟಲಿಗೆ ಹಾಕಿ. ನಂತರ ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಒಂದು ಕಪ್​​ನಲ್ಲಿ ಹಾಕಿ , ಪೂರ್ತಿಯಾಗಿ ತುಂಬಿಸಬೇಡಿ. ಅರ್ಧ ತುಂಬಿಸಿದರೆ ಸಾಕು. ಮೈಕ್ರೊವೇವ್ ಓವನ್ ಪೂರ್ವಭಾವಿಯಾಗಿ ಕಾಯಿಸಿ ಮತ್ತು ಈಗ ಕಪ್​​​​ ಇಟ್ಟು 2.5 ನಿಮಿಷಗಳ ಕಾಲ ಬೇಯಿಸಿ. ಈಗ ಚಾಕೊಲೇಟ್ ಮಗ್ ಕೇಕ್ ತಯಾರಾಗಿದೆ. ಇದರ ಮೇಲೆ ಸ್ವಲ್ಪ ಚಾಕೊಲೇಟ್ ಸಾಸ್ ಹಾಕಿ ಅಲಂಕರಿಸಬಹುದಾಗಿದೆ. ಉತ್ತಮ ರುಚಿಯೂ ಕೂಡ ಇರುವುದರಿಂದ ಮಕ್ಕಳು ಖಂಡಿತಾ ಇಷ್ಟ ಪಟ್ಟು ತಿನ್ನುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 6:19 pm, Sat, 11 February 23

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us