ಸೋನ್ ಪಾಪ್ಡಿಯನ್ನು ಫ್ರಿಜ್‌ನಲ್ಲಿ ಇಡುವುದು ಒಳ್ಳೆಯದೇ? ಸಂಗ್ರಹಿಸುವ ಮುನ್ನ ಈ ವಿಷಯ ತಿಳಿಯಿರಿ

ದೀಪಾವಳಿಗೆ ಉಡುಗೊರೆಯಾಗಿ ಬಂದ ಸೋನ್ ಪಾಪ್ಡಿಯನ್ನು ಫ್ರಿಜ್‌ನಲ್ಲಿಡಬೇಕೇ ಅಥವಾ ಹೊರಗಿಡಬಹುದೇ ಎಂಬ ಪ್ರಶ್ನೆ ಹಲವರಲ್ಲಿದೆ. ಸಾಮಾನ್ಯವಾಗಿ ಇದನ್ನು ಕೋಣೆಯ ಉಷ್ಣಾಂಶದಲ್ಲಿ ಸಂಗ್ರಹಿಸಬಹುದು. ಆದರೆ ಬಿಸಿ ಮತ್ತು ತೇವಾಂಶ ಹೆಚ್ಚಿದ್ದರೆ ಫ್ರಿಜ್‌ನಲ್ಲಿ ಇಡುವುದು ಉತ್ತಮ. ಸೋನ್ ಪಾಪ್ಡಿಯ ತಾಜಾತನ, ರುಚಿ ಮತ್ತು ಗುಣಮಟ್ಟ ಕಾಪಾಡಲು ಸರಿಯಾದ ಸಂಗ್ರಹಣಾ ವಿಧಾನ ತಿಳಿದುಕೊಳ್ಳುವುದು ಮುಖ್ಯ.

ಸೋನ್ ಪಾಪ್ಡಿಯನ್ನು ಫ್ರಿಜ್‌ನಲ್ಲಿ ಇಡುವುದು ಒಳ್ಳೆಯದೇ? ಸಂಗ್ರಹಿಸುವ ಮುನ್ನ ಈ ವಿಷಯ ತಿಳಿಯಿರಿ
Soan Papdi Shelf Life
Image Credit source: Unsplash

Updated on: Nov 07, 2026 | 4:38 PM

ದೀಪಾವಳಿ ಹಬ್ಬದಲ್ಲಿ ಸಿಹಿತಿಂಡಿಗಳಿಗೆ ವಿಶೇಷ ಸ್ಥಾನವಿದೆ. ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ವಿವಿಧ ಸಿಹಿತಿಂಡಿಗಳನ್ನು ತಯಾರಿಸುವುದರ ಜೊತೆಗೆ ಸಂಬಂಧಿಕರು, ಸ್ನೇಹಿತರು ಮತ್ತು ಕಚೇರಿಗಳಿಂದಲೂ ಸಿಹಿ ಉಡುಗೊರೆಗಳು ಬರುತ್ತವೆ. ಇವುಗಳಲ್ಲಿ ಸೋನ್ ಪಾಪ್ಡಿ (Soan Papdi) ಪ್ರಮುಖವಾಗಿದೆ. ಆದರೆ ಉಡುಗೊರೆಯಾಗಿ ಬಂದ ಸೋನ್ ಪಾಪ್ಡಿಯನ್ನು ಫ್ರಿಜ್‌ನಲ್ಲಿಡಬೇಕೇ ಅಥವಾ ಹೊರಗಿಡಬಹುದೇ ಎಂಬ ಗೊಂದಲ ಹಲವರಲ್ಲಿದೆ. ಇದನ್ನು ಸರಿಯಾಗಿ ಸಂಗ್ರಹಿಸುವ ವಿಧಾನ ತಿಳಿದುಕೊಳ್ಳುವುದು ಬಹಳ ಮುಖ್ಯ.

ಸೋನ್ ಪಾಪ್ಡಿಯನ್ನು ಫ್ರಿಜ್‌ನಲ್ಲಿಡಬೇಕೇ?

ಸಾಮಾನ್ಯವಾಗಿ ಸೋನ್ ಪಾಪ್ಡಿಯನ್ನು ಫ್ರಿಜ್‌ನಲ್ಲಿ ಇಡುವ ಅಗತ್ಯವಿಲ್ಲ. ಕೋಣೆಯ ಉಷ್ಣಾಂಶದಲ್ಲಿ ತಂಪಾದ ಮತ್ತು ಒಣ ಸ್ಥಳದಲ್ಲಿ ಸಂಗ್ರಹಿಸಬಹುದು. ಇದರಲ್ಲಿ ತುಪ್ಪ, ಸಕ್ಕರೆ ಮತ್ತು ಕಡಲೆಹಿಟ್ಟಿನಂತಹ ಪದಾರ್ಥಗಳನ್ನು ಬಳಸುವುದರಿಂದ ಸರಿಯಾಗಿ ಇಟ್ಟರೆ ಅದರ ರುಚಿ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದು. ಆದರೆ ಮನೆಯಲ್ಲಿ ಅತಿಯಾದ ಬಿಸಿ ಅಥವಾ ತೇವಾಂಶವಿದ್ದರೆ ಫ್ರಿಜ್‌ನಲ್ಲಿ ಇಡುವುದು ಉತ್ತಮ ಆಯ್ಕೆಯಾಗಬಹುದು.

Loading...

ಸೋನ್ ಪಾಪ್ಡಿಯನ್ನು ಹೇಗೆ ಸಂಗ್ರಹಿಸಬೇಕು?

ಸಾಮಾನ್ಯವಾಗಿ ಸೋನ್ ಪಾಪ್ಡಿಯನ್ನು ನೇರ ಸೂರ್ಯನ ಬೆಳಕಿಗೆ ಬೀಳುವ ಸ್ಥಳದಲ್ಲಿ ಇಡಬಾರದು. ಗ್ಯಾಸ್ ಸ್ಟೌವ್, ಓವನ್ ಅಥವಾ ಇತರ ಬಿಸಿಯಾದ ವಸ್ತುಗಳ ಪಕ್ಕದಲ್ಲಿಯೂ ಇಡಬಾರದು. ಅತಿಯಾದ ಉಷ್ಣತೆಯಿಂದ ತುಪ್ಪದ ಗುಣಮಟ್ಟ ಮತ್ತು ಸಿಹಿತಿಂಡಿಯ ವಿನ್ಯಾಸ ಬದಲಾಗಬಹುದು. ಆದ್ದರಿಂದ ತಂಪಾದ, ಒಣ ಮತ್ತು ಗಾಳಿಯಾಡುವ ಸ್ಥಳದಲ್ಲಿ ಇಡುವುದು ಉತ್ತಮ. ಪ್ಯಾಕೆಟ್ ತೆರೆದ ನಂತರ ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸುವುದರಿಂದ ತೇವಾಂಶ ಮತ್ತು ಹೊರಗಿನ ವಾಸನೆಗಳಿಂದ ರಕ್ಷಿಸಬಹುದು.

ಫ್ರಿಜ್‌ನಲ್ಲಿ ಇಡುವಾಗ ಗಮನಿಸಬೇಕಾದ ವಿಷಯಗಳು:

ಹವಾಮಾನ ಹೆಚ್ಚು ಬಿಸಿಯಾಗಿದ್ದರೆ ಅಥವಾ ತೇವಾಂಶ ಹೆಚ್ಚಿದ್ದರೆ ಸೋನ್ ಪಾಪ್ಡಿಯನ್ನು ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ಫ್ರಿಜ್‌ನಲ್ಲಿ ಇಡಬಹುದು. ತಿನ್ನುವ ಸ್ವಲ್ಪ ಸಮಯ ಮೊದಲು ಹೊರತೆಗೆದರೆ ಅದರ ರುಚಿ ಮತ್ತು ವಿನ್ಯಾಸವನ್ನು ಉತ್ತಮವಾಗಿರುತ್ತದೆ.

ಸೋನ್ ಪಾಪ್ಡಿಯ ಶೆಲ್ಫ್ ಲೈಫ್ ಎಷ್ಟು?

ಸೋನ್ ಪಾಪ್ಡಿಯ ಸಂಗ್ರಹ ಅವಧಿಯು ಅದರ ತಯಾರಿಕಾ ವಿಧಾನ, ಪ್ಯಾಕೇಜಿಂಗ್ ಮತ್ತು ಸಂಗ್ರಹಣೆಯ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಸಿಎಫ್‌ಟಿಆರ್‌ಐ ಸಂಶೋಧನೆಯಲ್ಲಿ ಸುಮಾರು 12 ದಿನಗಳ ಶೆಲ್ಫ್ ಲೈಫ್ ಉಲ್ಲೇಖಿಸಲಾಗಿದ್ದು, ಆದರೆ ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲ ಸೋನ್ ಪಾಪ್ಡಿಗಳಿಗೂ ಇದೇ ಅವಧಿ ಅನ್ವಯಿಸುವುದಿಲ್ಲ. ಖರೀದಿಸಿದ ಪ್ಯಾಕೆಟ್‌ನ ತಯಾರಿಕಾ ದಿನಾಂಕ, ಮುಕ್ತಾಯ ದಿನಾಂಕ ಮತ್ತು ಸಂಗ್ರಹಣೆಯ ಸೂಚನೆಗಳನ್ನು ಪರಿಶೀಲಿಸಬೇಕು. ಅಚ್ಚು, ಅಸಹಜ ವಾಸನೆ ಅಥವಾ ರುಚಿಯಲ್ಲಿ ಬದಲಾವಣೆ ಕಂಡುಬಂದರೆ ಸೇವಿಸಬಾರದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us