ಭೂಮಿ ಮೇಲಿನ ಸ್ವರ್ಗ ಎಂದೆ ಕರೆಸಿಕೊಳ್ಳುವ ಜಮ್ಮು ಕಾಶ್ಮೀರ(Jammu Kashmir) ನೋಡಬೇಕೆಂಬುವುದು ಅನೇಕ ಜನರ ಆಸೆ. ಸದ್ಯ ಕಾಶ್ಮೀರದಲ್ಲಿ ಬೇಸಿಗೆಯ ರಜೆಯನ್ನು ಕಳೆಯಲು ಇಷ್ಟ ಪಡುವವರಿಗೆ ಐಆರ್ಸಿಟಿಸಿ(IRCTC )ಶುಭ ಸುದ್ದಿ ನೀಡಿದೆ. ಭಾರತೀಯ ರೈಲ್ವೆ ಕಾಶ್ಮೀರ ಟೂರ್ ಪ್ಯಾಕೇಜ್(Jannat-e-Kashmir Tour Package) ಅನ್ನು ಘೋಷಿಸಿದೆ. 6-ದಿನಗಳ ಈ ಕಾಶ್ಮೀರ ಪ್ರವಾಸದ ಪ್ಯಾಕೇಜ್‌ನಲ್ಲಿ ಊಟ, ವಸತಿ ಮತ್ತು ವಿಮಾನ ದರ ಸೇರಿದಂತೆ ಎಲ್ಲಾ ಪ್ರಯಾಣ ವೆಚ್ಚಗಳು ಒಳಗೊಂಡಿವೆ.
ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಭಾರತೀಯ ರೈಲ್ವೆಯ ಒಂದು ವಿಭಾಗವಾಗಿದ್ದು, ಈ ಕಾಶ್ಮೀರ ಪ್ರವಾಸದ ಪ್ಯಾಕೇಜ್ಗೆ ಜನ್ನತ್-ಎ-ಕಾಶ್ಮೀರ್ ಎಂಬ ಹೆಸರು ನೀಡಲಾಗಿದೆ. ಈ ಪ್ಯಾಕೇಜ್ ಏಪ್ರಿಲ್ 9 ರಿಂದ ಪ್ರಾರಂಭವಾಗುತ್ತೆ.
ಈ ಪ್ಯಾಕೇಜ್‌ನಲ್ಲಿ ನಿಮ್ಮ ರೌಂಡ್-ಟ್ರಿಪ್ ಎಕಾನಮಿ ಫ್ಲೈಟ್ ಟಿಕೆಟ್‌ಗಳನ್ನು ಕವರ್ ಮಾಡಲಾಗುವುದು. ಮತ್ತು ಶ್ರೀನಗರದಲ್ಲಿ ಬೋಟ್ ಹೌಸ್ನಲ್ಲಿ ಒಂದು ರಾತ್ರಿ ಕಳೆಯಲು ಜೊತೆಗೆ ಹೋಟೆಲ್‌ನಲ್ಲಿ ನಾಲ್ಕು ರಾತ್ರಿ ತಂಗುವ ವೆಚ್ಚ ಭರಿಸಲಾಗುತ್ತೆ. ಅಲ್ಲದೆ, ಎಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನು ನಾನ್-ಎಸಿ ವಾಹನದಲ್ಲಿ ಕರೆದುಕೊಂಡು ಹೋಗಿ ತೋರಿಸಲಾಗುತ್ತೆ. ಸೋನ್ಮಾರ್ಗ್, ಗುಲ್ಮಾರ್ಗ್, ಪಹಲ್ಗಾಮ್, ದಾಲ್ ಸರೋವರ ಮತ್ತು ಹಲವಾರು ಇತರ ರಮಣೀಯ ಸ್ಥಳಗಳನ್ನು ಈ ಪ್ಯಾಕೇಜ್ ಒಳಗೊಂಡಿದೆ.
ಇದನ್ನೂ ಓದಿ: Bharat Nepal Ashtha Yatra: ಮಾರ್ಚ್ 31 ರಿಂದ ಭಾರತ ನೇಪಾಳ ಆಸ್ತಾ ಯಾತ್ರೆ ಆರಂಭಿಸಲಿದೆ ಭಾರತೀಯ ರೈಲ್ವೆ, ವಿವರಗಳು ಇಲ್ಲಿವೆ
ಕಾಶ್ಮೀರ ಪ್ರವಾಸದ ಪ್ಯಾಕೇಜ್‌ನ ವೆಚ್ಚವು 41,300 ರೂ ರಿಂದ ಪ್ರಾರಂಭವಾಗಿ 61,000 ವರೆಗೆ ಇರುತ್ತದೆ. ಒಬ್ಬ ವ್ಯಕ್ತಿಯ ಟಿಕೆಟ್ ದರ ಸುಮಾರು 60,100ರೂ ವರೆಗೂ ಹೋಗಬಹುದು. ಆದರೆ ಇಬ್ಬರು ಒಟ್ಟಿಗೆ ಪ್ರಯಾಣಿಸಿದರೆ ವೆಚ್ಚವು ಪ್ರತಿ ವ್ಯಕ್ತಿಗೆ 44,900ರೂಗೆ ಇಳಿಯುತ್ತದೆ. ಮೂರು ಜನರು ಒಟ್ಟಿಗೆ ಪ್ರಯಾಣಿಸುತ್ತಿದ್ದರೆ, ಪ್ರತಿ ವ್ಯಕ್ತಿಗೆ 44,000 ಗೆ ಇಳಿಯುತ್ತದೆ. ಹಾಸಿಗೆ ಇಲ್ಲದ ಮಕ್ಕಳ ಟಿಕೆಟ್ ದರ 41,300ರೂ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ