ನಮ್ಮ ದೈನಂದಿನ ಜೀವನದಲ್ಲಿ ನಾವು ಮಾಡುವ ಪ್ರತೀ ಕೆಲಸದಲ್ಲೂ ಒಬ್ಬರದಾದರೂ ಸಹಾಯ ಇದ್ದೇ ಇರುತ್ತೆ. ಬೆಳಗ್ಗೆ ಬೇಗ ಎದ್ದು ತಿಂಡಿ ರೆಡಿ ಮಾಡಿ ಡಬ್ಬಿ ಕಟ್ಟುವ ಅಮ್ಮನಿಂದ ಹಿಡಿದು ರಾತ್ರಿ ಸೇಫಾಗಿ ಮನೆ ತಲುಪಿಸುವ ಕಾರ್ ಡ್ರೈವರ್ ವರೆಗೂ ಎಲ್ಲರೂ ತಮ್ಮ ಕರ್ತವ್ಯದ ಜೊತೆಗೆ ಚಿಕ್ಕದೊಂದು ಕಾಳಜಿ ಹೊತ್ತು ನಮಗೆ ಸಹಾಯ ಮಾಡುತ್ತಿರುತ್ತಾರೆ. ನಮಗೆ ಕಷ್ಟ ಬಂದಾಗ ಜೊತೆ ನಿಲ್ಲುವ ಸ್ನೇಹಿತರು, ನಮ್ಮ ಜೀವನವನ್ನು ಅರ್ಥಪೂರ್ಣವಾಗಿಸುವ, ಪ್ರಾಮಾಣಿಕವಾಗಿ ನಮ್ಮನ್ನು ಪ್ರೀತಿಸುವ ಜನರಿಗೆ ನಾವು ಎಂದೂ ಒಂದು ಚಿಕ್ಕ ಧನ್ಯವಾದವನ್ನೂ(Thank you Thursday) ಹೇಳಿರುವುದಿಲ್ಲ. ಇವರೆಲ್ಲ ನಮ್ಮ ಜೀವನದ ಬಂಡಿ ಓಡಿಸಲು ಸಹಾಯ ಮಾಡಿದ್ದರೂ ಇವರಿಗೆ ಧನ್ಯವಾದ ಹೇಳುವುದನ್ನು ನಾವು ಮರೆತಿರುತ್ತೇವೆ. ಅವರು ಮುಂದೆ ಸಿಕ್ಕಾಗ ಒಂದು ಚಿಕ್ಕ ನಗು ಬಿಸಾಕಿ, ಹೆಲ್ಲೋ ಎಂದು ಹೇಳಿ ಸುಮ್ಮನಾಗಿರುತ್ತೀವಿ. ಆದ್ರೆ ಚಿಕ್ಕ ಸಹಾಯವು ಕೂಡ ಕೃತಜ್ಞತೆಗೆ ಅರ್ಹವಾಗಿರುತ್ತೆ. ಏಪ್ರಿಲ್ 27ರ ‘ಧನ್ಯವಾದ ಗುರುವಾರ’ ದಿನವಾದ ಇಂದು ನಿಮ್ಮ ಜೀವನದಲ್ಲಿ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿ. ಇದೇ ಈ ದಿನದ ಉದ್ದೇಶ.
ಧನ್ಯವಾದ ಗುರುವಾರ ದಿನದ ಇತಿಹಾಸ
ಧನ್ಯವಾದ.. ಈ ಪದ ಚಿಕ್ಕದಾದರೂ ಬಹಳ ಅರ್ಥಪೂರ್ಣದ್ದಾಗಿದೆ. ನಾವು ಹೇಳುವ ಥ್ಯಾಂಕ್ಯೂ ಪದದಿಂದ ನಮಗೆ ಸಹಾಯ ಮಾಡಿದ ವ್ಯಕ್ತಿಯ ಮುಖದಲ್ಲಿ ನಗು ಮೂಡುತ್ತೆ. ಹಾಗೂ ಆ ವ್ಯಕ್ತಿಯ ಸಹಾಯ ನಮಗೆ ಎಷ್ಟು ಅಮೂಲ್ಯವಾದದ್ದು ಹಾಗೂ ಅದಕ್ಕೆ ನಾವು ಖುಣಿಯಾಗಿದ್ದೇವೆ ಎಂಬ ಸಂದೇಶವನ್ನು ನೀಡುತ್ತೆ. ಇದು ಸಹಾಯ ಮಾಡಿದ ಆ ವ್ಯಕ್ತಿಯ ಸಂತೋಷ ಮತ್ತು ನೈತಿಕತೆಯ ಮೇಲೆ ಪರಿಣಾಮ ಬೀರುತ್ತೆ. ನಿಮಗಾಗಿ ಕೆಲಸ ಮಾಡುವವರಿಗೆ ಅವರ ಪ್ರಯತ್ನಗಳು ಮುಖ್ಯವೆಂದು ತೋರಿಸುವುದರ ಮೂಲಕ, ಅವರು ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳುವ ಮೂಲಕ ಅವರೊಂದಿಗಿನ ಸ್ನೇಹವನ್ನು ಮತ್ತಷ್ಟು ಗಟ್ಟಿಯಾಗಿಸಬಹುದು.
ಕಂಪನಿಗಳಲ್ಲಿ ಕೆಲಸ ಮಾಡುವವರ ನಡುವೆ ಚಿಕ್ಕ ಪುಟ್ಟ ಮನಸ್ತಾಪಗಳು ಇದ್ದೇ ಇರುತ್ತವೆ. ಅವರಿಗೆ ಒಂದು ಮುಗುಳು ನಗೆಯೊಂದಿಗೆ ಥ್ಯಾಂಕ್ಸ್ ಹೇಳಿದರೆ ಸಾಕು ಎಲ್ಲವೂ ಸರಿ ಹೋಗುತ್ತೆ. ಬೇಸರ, ಕೋಪ ಎಲ್ಲವೂ ಶಮನವಾಗಿ ಕೆಲಸದ ಜಾಗದಲ್ಲಿ ಒಂದು ಬಳ್ಳೆಯ ಬಾಂಧವ್ಯ ಬೆಳೆಯುತ್ತೆ. ನಿಮಗಾಗಿ ಕೆಲಸ ಮಾಡುವವರಿಗೆ ಅವರ ಪ್ರಯತ್ನಗಳು ಮುಖ್ಯವೆಂದು ಹೇಳಲು ಹಾಘೂ ಅವರು ಮಾಡಿದ ಎಲ್ಲದಕ್ಕೂ ಸಂಪೂರ್ಣ ಕೃತಜ್ಞತೆಯನ್ನು ತೋರಿಸಲು ಧನ್ಯವಾದ ಹೇಳಲಾಗುತ್ತೆ. ಥ್ಯಾಂಕ್ಸ್ ಹೇಳಲು ಯಾವುದೇ ದಿನ ಬೇಕಿಲ್ಲ. ಆದ್ರೆ ಕೆಲವು ಕಾರಣದಿಂದ ನಾವು ಈ ಪ್ರಯತ್ನ ಮಾಡಿರುವುದಿಲ್ಲ. ಹೀಗಾಗಿ ಈ ದಿನವನ್ನು ಮಾಡಲಾಗಿದೆ. ಈ ದಿನ ನಿಮ್ಮವರಿಗೆ ಧನ್ಯವಾದ ತಿಳಿಸಿ ಮತ್ತಷ್ಟು ಹತ್ತಿರವಾಗಿ.
ಇದನ್ನೂ ಓದಿ: Happy Life: ಜೀವನದಲ್ಲಿ ಸದಾ ಸಂತೋಷದಿಂದ ಇರುವುದು ಹೇಗೆ? ಈ ಸಲಹೆಗಳನ್ನು ಪಾಲಿಸಿ ಖುಷಿ ಖುಷಿಯಾಗಿರಿ
ಜಾನ್ ಗಾರ್ಡನ್ ಅವರ ಸ್ಪೂರ್ತಿದಾಯಕ ಕೆಲಸದಿಂದ ಪ್ರೇರಿತರಾಗಿ, ಧನ್ಯವಾದ ಗುರುವಾರ ಧನಾತ್ಮಕತೆಯ ಶಕ್ತಿಯನ್ನು ಅಳವಡಿಸಿಕೊಳ್ಳಲು ಮತ್ತು ಇನ್ನೊಂದು ವ್ಯಕ್ತಿಗೆ ನೀವು ನೀಡಬಹುದಾದ ಉತ್ತೇಜನವನ್ನು ತೋರಿಸಲು ಮತ್ತು ಅಂತಹ ಸರಳ ಕ್ರಿಯೆಯು ಕೃತಜ್ಞತೆಯನ್ನು ತೋರಿಸುವ ವ್ಯಕ್ತಿಯ ಜೀವನವನ್ನು ಹೇಗೆ ಸುಧಾರಿಸುತ್ತದೆ ಎಂಬುದನ್ನು ತೋರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜಾನ್ ಗಾರ್ಡನ್ ಒಬ್ಬ ಪ್ರೇರಕ ಭಾಷಣಕಾರರಾಗಿದ್ದರು. ಇವರು ಜೀವನದ ಕುರಿತು ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಭಾರತದಲ್ಲಿ ಈ ದಿನ ಅಷ್ಟೋಂದು ಪ್ರಚಲಿತದಲ್ಲಿ ಇಲ್ಲದಿದ್ದರೂ ಕೂಡ ವಿದೇಶಗಳಲ್ಲಿ ಆಚರಿಸಲಾಗುತ್ತದೆ.
ಕೇವಲ ಒಂದು ಸರಳವಾದ ಧನ್ಯವಾದ, ಹೊಗಳಿಕೆಯ ಮಾತಗಳು ಯಾರೊಬ್ಬರ ಮತ್ತು ನಿಮ್ಮ ಮುಖದಲ್ಲೂ ನಗುವನ್ನು ತರುತ್ತದೆ. ಆದ್ದರಿಂದ ನೀವು ಇತರರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಈ ದಿನದ ಅವಕಾಶವನ್ನು ಪಡೆದುಕೊಳ್ಳಿ. ನಿಮ್ಮ ಜೀವನದಲ್ಲಿ ಸಹಾಯ ಮಾಡಿದ ಎಲ್ಲರಿಗೂ ಅವರ ಮುಂದೆ ನಿಂತು ನಗು ಮುಖದಿಂದ ಧನ್ಯವಾದ ಹೇಳಿ. ಅಥವಾ ಅವರು ದೂರ ಇದ್ದರೆ ಫೋನ್ ಮಾಡಿ ಮಾತನಾಡಿ, ಸಂದೇಶ ಕಳಿಸಿ. ಅವರಿಗಾಗಿ ವಿಶೇಷವಾದದನ್ನು ಮಾಡಿ. ಈ ಮೂಲಕ ಈ ದಿನವನ್ನು ಆಚರಿಸಿ. ಒಂದು ಸರಳ ಪದ ಧನ್ಯವಾದದಿಂದ ಬಹಳಷ್ಟು ಬದಲಾಗಬಹುದು.
ಸಿನಿಮಾ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:45 am, Thu, 27 April 23