ತನಗೆ ಕಿಡ್ನಿ ದಾನ ಮಾಡುತ್ತಿರುವವರನ್ನು ಕಂಡು ಕಣ್ಣೀರಿಟ್ಟ ವ್ಯಕ್ತಿ, ಅಷ್ಟಕ್ಕೂ ಕಿಡ್ನಿ ದಾನ ಮಾಡಿದ್ದು ಯಾರು ಗೊತ್ತಾ?

ಫೆಬ್ರವರಿ 27 ರಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊ ಎರಡು ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು ಇದು ಮನ ಮುಟ್ಟುವ ದೃಶ್ಯ ಎಂದು ಕಾಮೆಂಟ್​ ಮಾಡಿದ್ದಾರೆ.

ತನಗೆ ಕಿಡ್ನಿ ದಾನ ಮಾಡುತ್ತಿರುವವರನ್ನು ಕಂಡು ಕಣ್ಣೀರಿಟ್ಟ ವ್ಯಕ್ತಿ, ಅಷ್ಟಕ್ಕೂ ಕಿಡ್ನಿ ದಾನ ಮಾಡಿದ್ದು ಯಾರು ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Twitter

Updated on: Mar 01, 2023 | 5:11 PM

ತಂದೆ ಮತ್ತು ಮಗಳ ನಡುವಿನ ಬಾಂಧವ್ಯ ಅತ್ಯಂತ ಮಧುರವಾದದ್ದು. ತಂದೆ ಪ್ರತಿಬಾರಿಯೂ ಮಗನಿಗಿಂತ ಮಗಳ ಮೇಲೆಯೇ ಅತಿಯಾದ ಪ್ರೀತಿ. ಇಂತಹದ್ದೇ ತಂದೆ ಮಗಳ ಸಂಬಂಧಕ್ಕೆ ಉತ್ತಮ ಉದಾಹರಣೆಯೊಂದು ಇಲ್ಲಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ತನ್ನ ತಂದೆಗೆ ಮಗಳೇ ಕಿಡ್ನಿ ದಾನ ಮಾಡಿದ್ದಾಳೆ. ಆಸ್ಪತ್ರೆಯಲ್ಲಿ ಮಲಗಿದ್ದ ತಂದೆಗೆ ತನ್ನ ಮಗಳೇ ತನಗೆ ಜೀವ ನೀಡುತ್ತಿದ್ದಾಳೆ ಎಂದು ತಿಳಿದು ತಂದೆ ಅಳುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ಫೆಬ್ರವರಿ 27 ರಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊ ಎರಡು ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು ಇದು ಮನ ಮುಟ್ಟುವ ದೃಶ್ಯ ಎಂದು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಹೆರಿಗೆಯ ನಂತರ ಸೆಪ್ಟಿಕ್ ಶಾಕ್‌ಗೆ ಒಳಗಾಗಿ ಕೈ ಕಾಲುಗಳನ್ನು ಕಳೆದುಕೊಂಡ ಮಹಿಳೆ

ಮಗಳನ್ನು ಕಂಡ ಕೂಡಲೇ ಓ ದೇವರೇ, ನೀನು ನನ್ನನ್ನು ತಮಾಷೆ ಮಾಡುತ್ತಿದ್ದೀಯಾ” ಎಂದು ಆ ವ್ಯಕ್ತಿ ಉದ್ಗರಿಸಿದ್ದಾನೆ. ಮಗಳು ತನ್ನ ತಂದೆಯನ್ನು ಸಮಾಧಾನಿಸಲು ನಗುತ್ತಾ ಉತ್ತರಿಸುವುದನ್ನು ಕಾಣಬಹುದು. ನೀವು ತುಂಬಾ ಅದೃಷ್ಟವಂತರು, ನನಗೆ ಕಿಡ್ನಿಯನ್ನು ದಾನ ಮಾಡಿರುವ ವ್ಯಕ್ತಿ ಯಾರೆಂದು ತಿಳಿಯಲು ಸಾಧ್ಯವಾಗಲಿಲ್ಲ ಎಂದು ಒಬ್ಬರು ಈ ವಿಡಿಯೋಗೆ ಪ್ರತಿಕ್ರಿಸಿದ್ದಾರೆ. ಸಾಕಷ್ಟು ನೆಟ್ಟಿಗರು ಇದು ನಿಜವಾಗಿಯೂ ಕಣ್ಣಲ್ಲಿ ನೀರು ತರಿಸುವ ದೃಶ್ಯ. ಮಗಳು ತನ್ನ ತಂದೆಯ ಮೇಲಿನ ಪ್ರೀತಿಯನ್ನು ಈ ರೀತಿಯಾಗಿ ವ್ಯಕ್ತ ಪಡಿಸುತ್ತಿದ್ದಾಳೆ ಎಂದು ಪ್ರತಿಕ್ರಿಯಿಸಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:11 pm, Wed, 1 March 23

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us