Relationship Tips: ನಿಮ್ಮ ರಿಲೇಷನ್ಶಿಪ್ನಲ್ಲಿ ಇಂತಹ ಅಭ್ಯಾಸಗಳು ಕಂಡುಬಂದರೆ ತಕ್ಷಣ ಸಂಬಂಧಕ್ಕೆ ಬ್ರೇಕ್ ಹಾಕಿ
ನೀವು ಡೇಟಿಂಗ್ ಮಾಡುವ ವ್ಯಕ್ತಿಯಲ್ಲಿ ಈ ಕೆಳಗಿನ ಅಭ್ಯಾಸಗಳು ಕಂಡುಬಂದರೆ ಸಂಬಂಧವನ್ನು ಯಾವುದೇ ಕಾರಣಕ್ಕೂ ಮುಂದುವರಿಸಲು ಹೋಗದಿರಿ. ನಿಮ್ಮ ಸಂಬಂಧವನ್ನು ನೀವು ಜೀವನ ಪೂರ್ತಿ ಮುಂದುವರಿಸಲು ಬಯಸಿದರೆ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡಿ.
ಇತ್ತೀಚೆಗೆ ಡೇಟಿಂಗ್ ಆಪ್ಗಳು ಹೆಚ್ಚಾಗುತ್ತಿದ್ದಂತೆ ಸಂಬಂಧಗಳ ನಿಜವಾದ ಅರ್ಥ ಕಳೆದು ಹೋಗುತ್ತಿದೆ. ಇದರಿಂದಾಗಿ ಸಂಬಂಧಗಳು 6 ತಿಂಗಳಲ್ಲಿಯೇ ಬಿರುಕು ಬಿಡುವುದನ್ನು ಕಾಣಬಹುದು. ಆದ್ದರಿಂದ ನೀವು ನಿಜವಾದ ಪ್ರೀತಿಯನ್ನು ಹುಡುಕುತ್ತಿದ್ದರೆ, ಅದರಲ್ಲಿಯೂ ನಿಮಗೆ ಮೋಸವಾಗಬಹುದು. ಆದ್ದರಿಂದ ನೀವು ಡೇಟಿಂಗ್ ಮಾಡುವ ವ್ಯಕ್ತಿಯಲ್ಲಿ ಈ ಕೆಳಗಿನ ಅಭ್ಯಾಸಗಳು ಕಂಡುಬಂದರೆ ಸಂಬಂಧವನ್ನು ಯಾವುದೇ ಕಾರಣಕ್ಕೂ ಮುಂದುವರಿಸಲು ಹೋಗದಿರಿ. ನಿಮ್ಮ ಸಂಬಂಧವನ್ನು ನೀವು ಜೀವನ ಪೂರ್ತಿ ಮುಂದುವರಿಸಲು ಬಯಸಿದರೆ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡಿ.
ಸಾಕಷ್ಟು ಭಿನ್ನಾಭಿಪ್ರಾಯಗಳು:
ನಿಮ್ಮ ಸಂಬಂಧದಲ್ಲಿ ಪ್ರಾರಂಭದಲ್ಲಿಯೇ ಪ್ರತಿದಿನ ಜಗಳ, ಮನಸ್ತಾಪ, ನಿರಂತರ ದೂರು ಆ ಸಂಬಂಧವನ್ನು ಕಷ್ಟ ಪಟ್ಟು ಮುಂದುವರಿಸಿಕೊಂಡು ಹೋಗಬೇಡಿ. ಯಾಕೆಂದರೆ ಒಬ್ಬರಿಂದ ಸಂಬಂಧವನ್ನು ಉಳಿಸಲು ಸಾಧ್ಯವಿಲ್ಲ. ಅದಕ್ಕಿಂತ ನೀವು ಆ ಸಂಬಂಧದಿಂದ ದೂರವಾಗುವುದು ತುಂಬಾ ಅಗತ್ಯವಾಗಿದೆ.
ನಿಮ್ಮೊಂದಿಗೆ ಮಾಜಿ ಪ್ರೇಮಿಯ ಬಗ್ಗೆ ಮಾತು:
ನಿಮ್ಮ ಮೊದಲ ಡೇಟಿಂಗ್ನಲ್ಲಿಯೇ ಅತಿಯಾಗಿ ಮಾಜಿ ಪ್ರೇಮಿಯ ಬಗ್ಗೆ ಮಾತನಾಡುತ್ತಾ ಇದ್ದರೆ, ಅವರಿನ್ನು ಮಾಜಿ ಪ್ರೇಮಿಯನ್ನು ಮರೆತಿಲ್ಲ ಎಂಬುದನ್ನು ತಿಳಿಸುತ್ತದೆ. ಸಂಬಂಧದಲ್ಲಿ ಇನ್ನೂ ಕೂಡ ಸಾಕಷ್ಟು ಗೊಂದಲ ಇರುವವರನ್ನು ಎಂದಿಗೂ ನಿಮ್ಮ ಸಂಗಾತಿಯಾಗಲು ಸೂಕ್ತವಲ್ಲ.
ಮೆಸ್ಡ್ ಅಪ್ ಕಮ್ಯುನಿಕೇಶನ್:
ನಿಮ್ಮ ಸಂಬಂಧದಲ್ಲಿ ಕಾಳಜಿ, ಜವಾಬ್ದಾರಿಯ ಹೊರತಾಗಿ ಕೆಟ್ಟ ವಿಷಯಗಳೇ ಹೆಚ್ಚಾಗಿ ಬರುತ್ತಿದೆ ಎಂದು ನಿಮಗನಿಸುತ್ತಿದ್ದರೆ, ತಕ್ಷಣ ಆ ಸಂಬಂಧವನ್ನು ತೊರೆಯಲು ಸಿದ್ಧರಾಗಿ. ಯಾಕೆಂದರೆ ಅವರು ನಿಮ್ಮನ್ನು ನಿಜವಾಗಿ ಜೀವನ ಸಂಗಾತಿಯಾಗಲು ಬಯಸಿದರೆ, ನಿಮ್ಮ ಬಗ್ಗೆ ಅತಿಯಾದ ಕಾಳಜಿ ಹಾಗೂ ಜವಾಬ್ದಾರಿಯನ್ನು ಹೊಂದಿರುತ್ತಾರೆ.
ಇದನ್ನೂ ಓದಿ: ಕೆಟ್ಟ ನೆನಪುಗಳು ಮತ್ತೆ ಮತ್ತೆ ನಿಮ್ಮನ್ನು ಕಾಡುತ್ತಿದೆಯಾ? ಹಾಗಿದ್ದರೆ ಕೆಲವು ದಿನಗಳ ವರೆಗೆ ಈ ಟಿಪ್ಸ್ ಫಾಲೋ ಮಾಡಿ ನೋಡಿ
ವೈಯಕ್ತಿಕ ವಿಷಯಗಳಿಗೆ ಅತಿಯಾಗಿ ತಲೆಹಾಕುವುದು:
ನಿಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ನಿಮಗೆ ಅವರೊಂದಿಗೆ ಹೇಳಲು ಇಷ್ಟವಿಲ್ಲದಿದ್ದರೂ, ನಿಮ್ಮ ವಿಷಯವನ್ನು ಮತ್ತೆ ಮತ್ತೆ ಕೆಣಕಿ, ನಿಮಗೆ ಸಾಕಷ್ಟು ಕಿರಿ ಕಿರಿಯನ್ನುಂಟು ಮಾಡುತ್ತಿದ್ದರೆ, ಆ ಸಂಬಂಧದಿಂದ ತಕ್ಷಣ ದೂರ ಸರಿಯಿರಿ. ಮೊದಲು ನಿಮ್ಮ ವೈಯಕ್ತಿಕ ಸಂತೋಷ ಮುಖ್ಯವಾಗಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿಕ್ಲಿಕ್ ಮಾಡಿ:
Published On - 7:10 pm, Tue, 28 February 23