ಕೆಟ್ಟ ನೆನಪುಗಳು ಮತ್ತೆ ಮತ್ತೆ ನಿಮ್ಮನ್ನು ಕಾಡುತ್ತಿದೆಯಾ? ಹಾಗಿದ್ದರೆ ಕೆಲವು ದಿನಗಳ ವರೆಗೆ ಈ ಟಿಪ್ಸ್​​ ಫಾಲೋ ಮಾಡಿ ನೋಡಿ

ಕೆಟ್ಟ ನೆನಪುಗಳು ನಿಮ್ಮನ್ನು ಮತ್ತೆ ಮತ್ತೆ ಕಾಡಬಹುದು. ಕೆಲವೊಂದು ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಈ ಅನಗತ್ಯ ಯೋಚನೆಗಳನ್ನು ನಿಮ್ಮ ಜೀವನದಿಂದ ದೂರಮಾಡಬಹುದು.

ಕೆಟ್ಟ ನೆನಪುಗಳು ಮತ್ತೆ ಮತ್ತೆ ನಿಮ್ಮನ್ನು ಕಾಡುತ್ತಿದೆಯಾ? ಹಾಗಿದ್ದರೆ ಕೆಲವು ದಿನಗಳ ವರೆಗೆ ಈ ಟಿಪ್ಸ್​​ ಫಾಲೋ ಮಾಡಿ ನೋಡಿ
ಸಾಂದರ್ಭಿಕ ಚಿತ್ರImage Credit source: Scientific American
Follow us
ಅಕ್ಷತಾ ವರ್ಕಾಡಿ
|

Updated on: Feb 28, 2023 | 1:32 PM

ಕೆಟ್ಟ ಘಟನೆಗಳು ವ್ಯಕ್ತಿಗಳಿಂದ ಅಥವಾ ಕೆಲವೊಂದು ಸಂದರ್ಭದಲ್ಲಿ ನಡೆದಿರಬಹುದು. ಆದರೆ ಘಟನೆ ಕಳೆದು ವರ್ಷಗಳೇ ಉರುಳಿದರೂ ಕೂಡ ಆ ನೆನಪುಗಳು ಹಾಗೆಯೇ ಉಳಿದುಕೊಳ್ಳುತ್ತದೆ. ಇದು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತಾ ಹೋಗುತ್ತದೆ. ಜೊತೆಗೆ ಆರೋಗ್ಯ ಮೇಲೆ ಕೆಟ್ಟ ಪರಿಣಾಮಬೀರಬಹುದು. ಆದ್ದರಿಂದ ಇಂತಹ ಕೆಟ್ಟ ನೆನಪುಗಳನ್ನು ನಿಮ್ಮ ಜೀವನದಿಂದಲೇ ಮರೆ ಮಾಚಲು ಈ ಕೆಳಗಿನ ಸಲಹೆಗಳನ್ನು ಪ್ರಯತ್ನಿಸಿ ನೋಡಿ. ಕೆಲವೇ ದಿನಗಳಲ್ಲಿ ನೀವು ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಬಹುದು.

ಹಿರಿಯ ಮನೋವೈದ್ಯೆ ಡಾ.ಜ್ಯೋತಿ ಕಪೂರ್ ಅಹಿತಕರ ನೆನಪುಗಳನ್ನು ಮರೆಯಲು 5 ಮಾರ್ಗಗಳನ್ನು ಸೂಚಿಸಿದ್ದಾರೆ:

1. ಕೆಟ್ಟ ಘಟನೆಗಳನ್ನು ನೆನಪಿಸುವ ವಸ್ತುಗಳಿದ್ದರೆ ಈ ಕೂಡಲೇ ಅದನ್ನು ನಿಮ್ಮಿಂದ ದೂರವಿಡಿ:

ನಿಮಗೆ ಪ್ರತೀ ಬಾರಿ ಕೆಟ್ಟ ನೆನಪುಗಳನ್ನು ನೀಡುವ ವಸ್ತು ನಿಮ್ಮ ಮುಂದಿದ್ದರೆ, ಆ ವಸ್ತುವನ್ನು ತಕ್ಷಣ ಬಿಸಾಡಿ ಅಥವಾ ನಿಮ್ಮ ಕಣ್ಣಿಗೆ ಕಾಣದಂತೆ ಮರೆಮಾಚಿಡಿ. ಇದು ಕಾಲ ಕ್ರಮೇಣ ನಿಮ್ಮನ್ನು ಕೆಟ್ಟ ನೆನಪುಗಳಿಂದ ದೂರ ಮಾಡಲು ಸಹಾಯ ಮಾಡುತ್ತದೆ.

2. ನಿಮ್ಮ ಸಂತೋಷಕ್ಕೆ ಹೆಚ್ಚಿನ ಆದ್ಯತೆ ನೀಡಿ:

ಕೆಟ್ಟ ನೆನಪುಗಳಿಂದ ನಿಮ್ಮನ್ನು ದೂರವಿಡಲು, ನಿಮಗೆ ಖುಷಿಕೊಡುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ವಾರಾಂತ್ಯದಲ್ಲಿ ನಿಮ್ಮ ಪ್ರೀತಿ ಪಾತ್ರರು ಅಥವಾ ಸ್ನೇಹಿತರೊಂದಿಗೆ ಸಮಯ ಕಳೆಯಿರಿ.

3. ಪ್ರಸ್ತುತ ಕ್ಷಣಗಳಲ್ಲಿ ನಿಮ್ಮನ್ನು ನೀವು ಕೇಂದ್ರೀಕರಿಸಿ:

ಹಳೆಯ ಕೆಟ್ಟ ಘಟನೆಗಳನ್ನು ಯೋಚಿಸುವ ಬದಲಾಗಿ, ಈಗ ಇರುವ ನಿಮ್ಮ ಪ್ರತಿದಿನದ ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಿ. ಪ್ರಸುತ್ತ ಇರುವ ದಿನಗಳಲ್ಲಿ ನೀವು ಖುಷಿಯಿಂದಿರಲು ಏನು ಮಾಡಬೇಕು ಎಂದು ಯೋಚಿಸಿ.

ಇದನ್ನೂ ಓದಿ: ಒಂಟೆ ಹಾಲು ಮಧುಮೇಹಿಗಳಿಗೆ ಎಷ್ಟು ಪ್ರಯೋಜನಕಾರಿ ಎಂದು ತಿಳಿದಿದೆಯೇ?

4. ಯಾವಾಗಲೂ ಬ್ಯೂಸಿಯಾಗಿರಿ:

ನೀವು ನಿಮ್ಮ ಕೆಲಸ ಕಾರ್ಯಗಳಲ್ಲಿ ಅಥವಾ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಹೆಚ್ಚು ಕಾಲ ಕಳೆದಷ್ಟು ನಿಮ್ಮ ಚಿತ್ತ ಬೇರೆ ಕಡೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮನ್ನು ನೀವು ಹೆಚ್ಚು ಬ್ಯೂಸಿಯಾಗಿ ಇಟ್ಟುಕೊಂಡಷ್ಟು ನೀವು ಸಂತೋಷದಿಂದಿರುತ್ತೀರಿ. ಯಾವಾತ್ತೂ ಒಂಟಿಯಾಗಿ ಕಾಲ ಕಳೆಯಬೇಡಿ.

5. ಕೆಟ್ಟ ಚಟಗಳಿಂದ ದೂರವಿರಿ:

ಸಾಕಷ್ಟು ಜನರು ಮಾನಸಿಕವಾಗಿ ಕುಗ್ಗಿ ಹೋದಾಗ ಅದನ್ನು ಮರೆಯಲು ಕೆಟ್ಟ ಚಟಗಳತ್ತ ವಾಲುತ್ತಾರೆ. ಧೂಮಪಾನ , ಮಧ್ಯಪಾನಗಳು ನಿಮಗೆ ಕೆಲ ಹೊತ್ತಿನ ವರೆಗೆ ನಿಮ್ಮ ನೋವನ್ನು ಮರೆಸಿದ್ದರೂ ಕೂಡ ಅದೇ ಶಾಶ್ವತ ಪರಿಹಾರವಲ್ಲ. ಆದ್ದರಿಂದ ಆದಷ್ಟು ಕೆಟ್ಟ ಚಟಗಳಿಂದ ದೂರವಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್