Oral Health: ಮಾನಸಿಕ ಒತ್ತಡವು ಹಲ್ಲಿನ ನೈರ್ಮಲ್ಯಕ್ಕೆ ಕಾರಣವಾಗಬಹುದು, ತಜ್ಞರ ಅಧ್ಯಾಯ ಹೇಳಿದ್ದೇನು?

ಮಾನಸಿಕ ಒತ್ತಡವು ದೀರ್ಘಕಾಲದ ದೈಹಿಕ ಕಾಯಿಲೆಯೊಂದಿಗೆ ಕಳಪೆ ಮಟ್ಟದ ಬಾಯಿಯ ಹಾಗೂ ಹಲ್ಲುಗಳ ಆರೋಗ್ಯಕ್ಕೂ ಕಾರಣವಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಒತ್ತಡವು ನಮ್ಮ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ ನಮ್ಮ ಹಲ್ಲಿನ ನೈರ್ಮಲ್ಯದ ಮೇಲೂ ಭಾರಿ ಪರಣಾಮವನ್ನು ಬೀರಬಹುದು.

Oral Health: ಮಾನಸಿಕ ಒತ್ತಡವು ಹಲ್ಲಿನ ನೈರ್ಮಲ್ಯಕ್ಕೆ ಕಾರಣವಾಗಬಹುದು, ತಜ್ಞರ ಅಧ್ಯಾಯ ಹೇಳಿದ್ದೇನು?
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Feb 20, 2023 | 12:16 PM

ಮಾನಸಿಕ ಒತ್ತಡವು ದೀರ್ಘಕಾಲದ ದೈಹಿಕ ಕಾಯಿಲೆಯೊಂದಿಗೆ ಕಳಪೆ ಮಟ್ಟದ ಬಾಯಿಯ ಹಾಗೂ ಹಲ್ಲುಗಳ ಆರೋಗ್ಯಕ್ಕೂ ಕಾರಣವಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಒತ್ತಡವು ನಮ್ಮ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ ನಮ್ಮ ಹಲ್ಲಿನ ನೈರ್ಮಲ್ಯದ ಮೇಲೂ ಭಾರಿ ಪರಣಾಮವನ್ನು ಬೀರಬಹುದು. ಮಾನಸಿಕ ಒತ್ತಡವು ಇತರ ದೀರ್ಘಕಾಲದ ಕಾಯಿಲೆಯೊಂದಿಗೆ ವ್ಯವಸ್ಥಿತವಾಗಿ ಕಳಪೆ ಮಟ್ಟದ ಬಾಯಿಯ ಆರೋಗ್ಯಕ್ಕೂ ಕಾರಣವಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತದೆ. ಒಬ್ಬ ವ್ಯಕ್ತಿ ಒತ್ತಡದಲ್ಲಿದ್ದಾಗ, ದೇಹವು ಕಾರ್ಟಿಸೋಲ್ ಎಂಬ ಹಾರ್ಮೋನ್‌ನ್ನು ಬಿಡುಗಡೆ ಮಾಡುತ್ತದೆ. ಅದು ಅದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಈ ಹಾರ್ಮೋನ್ ಉದ್ವೇಗದ ಭಾವನೆಯನ್ನು ಉಂಟುಮಾಡುತ್ತದೆ. ಮತ್ತು ಸಣ್ಣ ಸಣ್ಣ ವಿಚಾರಕ್ಕೂ ಕೋಪಗೊಳ್ಳುವಂತೆ ಮಾಡುತ್ತದೆ.

ಒತ್ತಡವು ನಾವೆಲ್ಲರೂ ವಿಭಿನ್ನವಾಗಿ ಪ್ರತಿಕ್ರಿಯಿಸುವ ವಿಷಯವಾಗಿದೆ. ಕಾರ್ಟಿಸೋಲ್ ಹಾರ್ಮೋನ್ ನಮ್ಮನ್ನು ಕೆಟ್ಟ ಅಭ್ಯಾಸಗಳಲ್ಲಿ ತೊಡಗುವಂತೆ ಮಾಡುತ್ತದೆ. ಈ ಅಭ್ಯಾಸಗಳು ನಮ್ಮ ಹಲ್ಲುಗಳ ಮೇಲೂ ಹಾನಿಕಾರಕ ಪರಿಣಾಮವನ್ನು ಬೀರಬಹುದು. ಎಂದು ಬೆಂಗಳೂರಿನ ಐವರಿ ಸ್ಮೆಲ್ ಡೆಂಟಲ್ ಕ್ಲಿನಿಕ್‌ನ ಕಾಸ್ಮೆಟಿಕ್ ದಂತವೈದ್ಯೆ, ಪೆರಿಯೊಡೆಂಟಿಸ್ಟ್ ಆಗಿರುವ ಡಾ. ಅಮೃತ ದಾಶ್ ಹೇಳಿದ್ದಾರೆ.

ಒತ್ತಡವು ಯಾವ ರೀತಿ ನಮ್ಮ ಹಲ್ಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ?

ಸ್ವಯಂ ಕಾಳಜಿಯ ಕೊರತೆ: ಒತ್ತಡದ ಸಮಯದಲ್ಲಿ ಸ್ವಯಂ-ಆರೈಕೆಯು ಒಂದು ಸವಾಲಾಗಿರುತ್ತದೆ. ಈ ಸಮಯದಲ್ಲಿ ಜನರು ಕಾರ್ಬೋಹೈಡ್ರೇಟ್‌ಗಳು ಮತ್ರು ಹೆಚ್ಚನ ಪ್ರಮಾಣ ಸಕ್ಕರೆಯ ಆಹಾರಗಳನ್ನು ಸೇವಿಸುತ್ತಾರೆ. ಇವೆಲ್ಲವೂ ಪ್ಲೇಕ್ ನಿಮಾರ್ಣಕ್ಕೆ ಹಾಗೂ ಬಾಯಿಯ ಕೊಳೆಯುವಿಕೆಗೆ ಕಾರಣವಾಗಬಹುದು. ಇದು ಇದು ಪಿರಿಯಾಂಟೈಟಿಸ್‌ನಂತಹ ಒಸಡು ಸಮಸ್ಯೆಗಳಿಗೆ ಕಾರಣವಾಗಬಹುದು. ಮತ್ತು ಇದು ಒಸಡುಗಳನ್ನು ಸಡಿಲಗೊಳಿಸುತ್ತವೆ ಎಂದು ಡಾ. ಅಮೃತ ಹೇಳಿದ್ದಾರೆ.

ಒಣ ಬಾಯಿ ಅಥವಾ ಜೆರೋಸ್ಟೊಮಿಯಾ: ಒತ್ತಡದಿಂದಾಗಿ ಬಾಯಿಯಲ್ಲಿ ಲಾಲಾರಸದ ಉತ್ಪಾದನೆ ಕಡಿಮೆಯಾಗಬಹುದು. ಇದು ಒಣ ಬಾಯಿ ಅಥವಾ ಜೆರೋಸ್ಟೊಮಿಯಾಗೆ ಕಾರಣವಾಗಬಹುದು. ಈ ಲಾಲಾರಸವು ಬಾಯಿಗೆ ತುಂಬಾ ಮುಖ್ಯವಾಗಿರುತ್ತದೆ. ಇವುಗಳು ಹಲ್ಲುಗಳ ಮರುಖನಿಜೀಕರಣಕ್ಕೆ ಸಹಾಯ ಮಾಡುವ ಕ್ವಿಣಗಳನ್ನು ಉತ್ಪಾದಿಸುತ್ತದೆ. ಆಲ್ಕೋಹಾಲ್ ಮತ್ತು ತಂಬಾಕಿನ ಅತಿಯಾದ ಸೇವನೆಯು ಒಣ ಬಾಯಿಗೆ ಕಾರಣವಾಗಬಹುದು. ಮತ್ತು ಇದು ಒಸಡುಗಳ ಕಾಯಿಲೆ, ಬಾಯಿಯಲ್ಲಿನ ಕೊಳೆಯುವುಕೆಗೆ ಕಾರಣವಾಗುತ್ತದೆ.

ದವಡೆಗಳನ್ನು ಬಿಗಿಗೊಳಿಸುತ್ತದೆ: ಹೆಚ್ಚಿನ ಒತ್ತಡದ ಕೆಲಸಗಳನ್ನು ನಿರ್ವಹಿಸುವವರು ಬಿಗಿಯಾದ ದವಡೆಗಳನ್ನು ಹೊಂದಿರುತ್ತಾರೆ. ಒತ್ತಡದಲ್ಲಿರುವ ಜನರ ದವಡೆಗಳು ಬಿಗಿಯಾಗಿರುತ್ತದೆ. ಇದು ದವಡೆ ಮತ್ತು ಕಿವಿಗಳ ಸುತ್ತ ಒತ್ತಡದ ನೋವಿಗೆ ಕಾರಣವಾಗಬಹುದು ಎಮದು ಡಾ. ಅಮೃತ ಹೇಳಿದ್ದಾರೆ.

ಇದನ್ನೂ ಓದಿ:Oral Health: 30ರ ನಂತರ ನಿಮ್ಮ ಹಲ್ಲುಗಳ ಆರೈಕೆ ಹೇಗಿರಬೇಕು, ಇಲ್ಲಿವೆ ಸಲಹೆಗಳು

ಹಲ್ಲುಗಳನ್ನು ಕಡಿಯುವುದು: ಒತ್ತಡದ ಪರಿಸ್ಥಿತಿಯ ಕಾರಣದಿಂದ ಮನಸ್ಸನ್ನು ವಿಚಲನಗೊಳಿಸಲು ಅನೇಕ ಜನರು ತಮ್ಮ ಹಲ್ಲುಗಳನ್ನು ಕಡಿಯುತ್ತಾರೆ. ಇದು ಹಲ್ಲಿನಲ್ಲಿ ಜುಮ್ಮೆನಿಸುವಿಕೆಯನ್ನು ಉಂಟುಮಾಡುತ್ತದೆ. ಹಾಗೂ ಕಾರ್ಟಿಸೋಲ್ ಮಟ್ಟದಲ್ಲಿನ ಹೆಚ್ಚಳವು ಪ್ರೋಟೀನ್‌ನ್ನು ಪ್ರಚೋದಿಸುತ್ತದೆ. ಇದು ಹಲ್ಲುಗಳ ಉರಿಯೂತಕ್ಕೆ ಕಾರಣವಾಗಬಹದು ಎಂದು ಡಾ. ಅಮೃತ ಸಲಗೆ ನೀಡಿದರು.

ಹುಣ್ಣುಗಳು: ಒತ್ತಡವು ಬಾಯಿಯಲ್ಲಿನ ಹುಣ್ಣುಗಳಿಗೆ ಕಾರಣವಾಗಬಹುದು. ಸಾಮಾನ್ಯವಾಗಿ ಮನೆಮದ್ದುಗಳು ಈ ಬಾಯಿಹುಣ್ಣುಗಳನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ನೀವು ಒತ್ತಡದಲ್ಲಿರುವಾಗ ಹಲ್ಲಿನ ನೈರ್ಮಲ್ಯವನ್ನು ಹೇಗೆ ಕಾಪಾಡಿಕೊಳ್ಳುವುದು?

ಯೋಗ ಮತ್ತು ಧ್ಯಾನ ಇತ್ಯಾದಿಗಳನ್ನು ಮಾಡುವ ಮೂಲಕ ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಹಲ್ಲುಗಳನ್ನು ಆಳವಾಗಿ ಸ್ವಚ್ಛಗೊಳಿಸಲು ದಂತವ್ಯದ್ಯರನ್ನು ಪ್ರತಿ ಆರು ತಿಂಗಳಿಗೊಮ್ಮೆ ಭೇಟಿಯಾಗಿ. ಹಾಗೂ ನಿಯಮಿತವಾಗಿ ಹಲ್ಲುಜ್ಜುವುದು, ಮೌತ್ ವಾಶ್ ಮಾಡುವ ಮೂಲಕ ಹಲ್ಲುಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಎಂದು ಡಾ. ಅಮೃತ ಸಲಹೆ ನೀಡಿದರು.

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!