Oral Health: ಉಪಹಾರ ಸೇವಿಸಿದ ನಂತರ ಹಲ್ಲುಜ್ಜುವ ಅಭ್ಯಾಸ ಉತ್ತಮ, ಆದರೆ ಈ ಒಂದು ತಪ್ಪು ಮಾಡದಿರಿ
ಹಲ್ಲುಗಳ ಆರೋಗ್ಯವನ್ನು ಕಾಪಾಡಲು ಹಲ್ಲುಜ್ಜುವ ಸಮಯನ್ನು ಇಂದಿನಿಂಲೇ ಬದಲಾಯಿಸಿ. ಇದು ನಿಮ್ಮ ಬಾಯಿಯ ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ.
ಪ್ರತಿದಿನ ಹಲ್ಲುಜ್ಜುವುದು(Brushing), ನಿಮ್ಮ ಬಾಯಿಯ ಆರೋಗ್ಯ(Oral Health) ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಜೊತೆಗೆ ನಿಮ್ಮ ಹಲ್ಲುಗಳು ಬಾಹ್ಯ ಸೌಂದರ್ಯದಲ್ಲೂ ಪ್ರಮುಖವಾಗಿರುತ್ತದೆ. ಪ್ರತಿದಿನ ಹಲ್ಲುಜ್ಜುವ ಅಭ್ಯಾಸ ಎಲ್ಲರಿಗೂ ಇರುತ್ತದೆ. ಆದರೆ ಹಲ್ಲುಜ್ಜುವ ಸರಿಯಾದ ಸಮಯದ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಅಗತ್ಯವಾಗಿದೆ. ನೀವು ಸಾಮಾನ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ಅಥವಾ ತಿಂಡಿ ಸೇವಿಸಿದ ನಂತರ ಹಲ್ಲುಜ್ಜುವ ಅಭ್ಯಾಸವನ್ನು ಇಟ್ಟುಕೊಂಡಿದ್ದರೆ, ಇಂದಿನಿಂಲೇ ಹಲ್ಲುಜ್ಜುವ ಸಮಯನ್ನು ಬದಲಾಯಿಸುವುದು ಅತ್ಯಂತ ಅಗತ್ಯವಾಗಿದೆ.
ನೀವು ಹಲ್ಲುಜ್ಜಲು ಸರಿಯಾದ ಸಮಯ ಯಾವುದು? ಮತ್ತು ಯಾಕೆ ಎಂಬುದರ ಕುರಿತು ಸಂಪೂರ್ಣ ಮಾಹಿತಿಗಳ ಕುರಿತು ಹೆಲ್ತ್ ವಿತ್ ಕೋರಿ(healthwithcory) ಪೇಜ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ.
View this post on Instagram
ಸಾಮಾನ್ಯವಾಗಿ ವೈದರು, ರಾತ್ರಿ ಮಲಗುವ ಮುನ್ನ ಹಾಗೂ ಬೆಳಗ್ಗೆ ಹಲ್ಲುಜ್ಜುವ ಅಭ್ಯಾಸ ಇಟ್ಟುಕೊಳ್ಳಿ ಎಂದು ಸಲಹೆ ನೀಡುತ್ತಾರೆ. ಆದರೆ ನಿಮ್ಮಲ್ಲಿ ಸಾಕಷ್ಟು ಜನರು ಬೆಳಗ್ಗಿನ ಹೊತ್ತು ಬೆಡ್ ಕಾಫಿ ಹಾಗೂ ಉಪಹಾರ ಸೇವಿಸಿದ ಮೇಲೆ ಹಲ್ಲುಜ್ಜುವ ಅಭ್ಯಾಸ ಇಟ್ಟುಕೊಳ್ಳುತ್ತಾರೆ. ಇದು ಒಳ್ಳೆಯ ಅಭ್ಯಾಸ. ಯಾಕೆಂದರೆ ಕಾಫಿ ಮತ್ತು ಟೀಯ ಕೆಫೆನ್ಗಳು ಹಲ್ಲಿನಲ್ಲಿ ಹಾಗೆಯೇ ಉಳಿದುಕೊಳ್ಳುತ್ತದೆ. ಇದು ನಿಮ್ಮ ಹಲ್ಲು ಹಳದಿ ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ, ಜೊತೆಗೆ ನಿಮ್ಮ ಹಲ್ಲು ದುರ್ಬಲವಾಗಲು ಕಾರಣವಾಗುತ್ತದೆ.
ಇದನ್ನೂ ಓದಿ: ಗಾರ್ಡನ್ನಲ್ಲಿ ಇಲಿ, ಹೆಗ್ಗಣಗಳ ಕಾಟ ಇದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
ಉಪಹಾರ ಸೇವಿಸಿದ ನಂತರ ಹಲ್ಲುಜ್ಜುವ ಅಭ್ಯಾಸ ಉತ್ತಮವೇ ಆದರೆ ಈ ಒಂದು ತಪ್ಪು ಮಾಡದಿರಿ ಎಂದು ಈ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಹೌದು ನೀವು ಪ್ರತಿ ಬಾರಿ ಉಪಹಾರ ಸೇವಿಸಿದ ನಂತರ ತಕ್ಷಣ ಹಲ್ಲು ಉಜ್ಜುವ ಅಭ್ಯಾಸ ನಿಮಗಿದ್ದರೆ, ಈ ಕೂಡಲೇ ಬಿಟ್ಟು ಬಿಡಿ ಎಂದು ಇವರು ಹೇಳುತ್ತಾರೆ. ಏಕೆಂದರೆ ನೀವು ತಿಂದ ನಂತರ ನಿಮ್ಮ ಬಾಯಿಯು ಆಮ್ಲೀಯ ಸ್ಥಿತಿಯಲ್ಲಿರುತ್ತದೆ. ಅದು 30 ನಿಮಿಷದಿಂದ ಒಂದು ಗಂಟೆಯವರೆಗೆ ಇರುತ್ತದೆ. ಆ ಸಮಯದಲ್ಲಿ ನೀವು ನಿಮ್ಮ ಹಲ್ಲುಗಳನ್ನು ಹಲ್ಲುಜ್ಜಿದರೆ, ಇದು ನಿಮ್ಮ ಹಲ್ಲಿನ ಮೇಲ್ಪದರವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಇದರಿಂದಾಗಿ ನಿಮ್ಮ ಹಲ್ಲು ದುರ್ಬಲವಾಗುತ್ತದೆ. ಆದ್ದರಿಂದ, ಸರಿಯಾದ ಮಾರ್ಗವೆಂದರೆ ಪ್ರತಿದಿನ ರಾತ್ರಿ ಮಲಗುವ ಮುನ್ನ ಹಲ್ಲು ಉಜ್ಜಿ ಹಾಗೂ ಬೆಳಗ್ಗೆ ಉಪಹಾರ ಸೇವಿಸಿ, ಕಾಫಿ ಕುಡಿಯಿರಿ, ನಂತರ 30 ನಿಮಿಷಗಳ ಕಾಲ ಕಾಯಿರಿ. ನಂತರ ಹಲ್ಲು ಉಜ್ಜಿ ಎಂದು ರೊಡ್ರಿಗಸ್ ಹೇಳುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:51 am, Tue, 17 January 23