Rid of Rats in Garden: ಗಾರ್ಡನ್ನಲ್ಲಿ ಇಲಿ, ಹೆಗ್ಗಣಗಳ ಕಾಟ ಇದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
ನಿಮ್ಮ ಗಾರ್ಡನ್ನಲ್ಲಿ ಇಲಿ ಹೆಗ್ಗಣಗಳು ಹೂವು, ತರಕಾರಿಗಳ ಗಿಡಗಳನ್ನು ಹಾಳು ಮಾಡುತ್ತಿದ್ದೆಯೇ? ಹಾಗಿದ್ದರೆ ಇಲ್ಲಿರುವ ಸಿಂಪಲ್ ಟಿಪ್ಸ್ ಫಾಲೋ ಮಾಡಿ.
ನಿಮ್ಮ ಗಾರ್ಡನ್(Garden) ನಲ್ಲಿ ಇಲಿ(Rats) ಹೆಗ್ಗಣಗಳು ಹೂವು, ತರಕಾರಿಗಳ ಗಿಡಗಳನ್ನು ಹಾಳು ಮಾಡುತ್ತಿದ್ದೆಯೇ? ಹಾಗಿದ್ದರೆ ಇಲ್ಲಿರುವ ಸಿಂಪಲ್ ಟಿಪ್ಸ್ ಫಾಲೋ ಮಾಡಿ. ಸಾಮಾನ್ಯವಾಗಿ ಇಲಿ ಹೆಗ್ಗಣಗಳ ಕಾಟವನ್ನು ತಡೆಯಲು ಮಾರುಕಟ್ಟೆಯಲ್ಲಿ ಸಾಕಷ್ಟು ವಿಷಕಾರಿ ರಾಸಾಯನಿಕಗಳು ಲಭ್ಯವಿರುತ್ತದೆ. ಆದರೆ ಇದು ನಿಮ್ಮ ಮನೆಯ ಸಾಕು ಪ್ರಾಣಿ, ಮಕ್ಕಳು ಎಲ್ಲಿ ತಿಳಿಯದೇ ತಿಂದು ಬಿಡುತ್ತಾರೋ ಎಂಬ ಭಯ ಎಲ್ಲರಲ್ಲೂ ಇರುತ್ತದೆ. ಆದ್ದರಿಂದ ಇನ್ನೂ ಮುಂದೆ ಇಂತಹ ಚಿಂತೆ ಬಿಟ್ಟು ಬಿಡಿ. ಯಾವುದೇ ವಿಷಕಾರಿ ಅಂಶಗಳನ್ನು ಬಳಸದೇ ಇಲಿ ಹೆಗ್ಗಣಗಳ ಕಾಟವನ್ನು ತಡೆಯಲು ಇಲ್ಲಿರುವ ಸಿಂಪಲ್ ಟಿಪ್ಸ್ ಫಾಲೋ ಮಾಡಿ.
ಇಲಿ ಹೆಗ್ಗಣಗಳ ಕಾಟವನ್ನು ತಡೆಯಲು ಸಿಂಪಲ್ ಟಿಪ್ಸ್ ಇಲ್ಲಿದೆ:
ಔಷಧೀಯ ಗಿಡಗಳನ್ನು ಬೆಳೆಸಿ:
ನಿಮ್ಮ ಮನೆಯ ಗಾರ್ಡನ್ನಲ್ಲಿ ಔಷಧೀಯ ಗಿಡಗಳನ್ನು ಬೆಳೆಸುವುದರಿಂದ, ಸಾಕಷ್ಟು ಪ್ರಯೋಜನಗಳನ್ನು ನೀವು ಕಾಣಬಹುದು. ಉದಾಹರಣೆಗೆ ಪುದೀನ, ತುಳಸಿ, ಲ್ಯಾವೆಂಡರ್ ನಂತಹ ಗಿಡಗಳು ನಿಮ್ಮ ಹೂದೋಟದಿಂದ ಇಲಿ, ಹೆಗ್ಗಣಗಳು ದೂರವಿರುವಂತೆ ಮಾಡುತ್ತದೆ. ಇದಲ್ಲದೇ ಸೊಳ್ಳೆ ಕಾಟದಿಂದ ಕೂಡ ಮುಕ್ತಿಯನ್ನು ಪಡೆಯಬಹುದು. ಇದರ ಹೊರತಾಗಿಯೂ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕೂಡ ಈ ಗಿಡಗಳಿಂದ ಪಡೆಯಬಹುದು.
ಅಲಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ:
ಗಿಡಗಳ ಬುಡದಲ್ಲಿ ಹೊರತಾಗಿ, ನಿಮ್ಮ ಗಾರ್ಡನ್ನಲ್ಲಿ ಹೆಚ್ಚಾಗಿ ನೀರು ಸಂಗ್ರಹವಾಗಿದ್ದರೆ, ಅದನ್ನು ತೆಗೆದು ಹಾಕಿ. ನೀರಿನ ಮೂಲಗಳು ಹೆಚ್ಚಾದಂತೆ ಇಲಿ, ಹೆಗ್ಗಣಗಳು ಕೂಡ ಹೆಚ್ಚಾಗಿ ಬರುತ್ತದೆ. ಹೊರಗಿನ ಟ್ಯಾಪ್ ಪರಿಶೀಲಿಸಿ ಮತ್ತು ಯಾವುದೇ ಡ್ರಿಪ್ಸ್ ಅಥವಾ ರಂಧ್ರಗಳಿದ್ದರೆ ಸರಿಪಡಿಸಿ.
ನಿಯಮಿತವಾಗಿ ಹುಲ್ಲು ಬೆಳೆದಿರಲಿ:
ಗಾರ್ಡನ್ನಲ್ಲಿ ಹೆಚ್ಚು ಅಥವಾ ಜಾಸ್ತಿ ಎತ್ತರದಲ್ಲಿ ಹುಲ್ಲು ಬೆಳೆಸುವುದರಿಂದ ಇದು ಇಲಿ ಹೆಗ್ಗಣಗಳಿಗೆ ಅಡಗಿ ಕೊಳ್ಳಲು ಜಾಗಮಾಡಿ ಕೊಟ್ಟಂತೆ. ಆದ್ದರಿಂದ ಹೆಚ್ಚಿನ ಹುಲ್ಲನ್ನು ನಿಯಮಿತವಾಗಿ ಕತ್ತರಿಸುವುದರಿಂದ ಅದು ಅಡಗಿಕೊಳ್ಳುವ ಸ್ಥಳವಾಗುವುದನ್ನು ತಡೆಯುತ್ತದೆ. ಜೊತೆಗೆ ನಿಮ್ಮ ಹೂದೋಟವು ಸುಂದರವಾಗಿ ಕಾಣುತ್ತದೆ.
ಇದನ್ನೂ ಓದಿ: ಬ್ರೆಡ್ ಅನ್ನು ಫ್ರಿಡ್ಜ್ನಲ್ಲಿಡುವ ಅಭ್ಯಾಸ ನಿಮಗೂ ಇದೆಯಾ, ಈ 8 ವಸ್ತುಗಳನ್ನು ಎಂದೂ ಇಡಬೇಡಿ
ಬೆಕ್ಕು ಸಾಕಿ:
ನಿಮ್ಮ ಮನೆಯಲ್ಲಿ ಬೆಕ್ಕು ಸಾಕುವುದರಿಂದ ಇಲಿ ಹೆಗ್ಗಣಗಳು ಬರುವುದನ್ನು ತಡೆಯಬಹುದಾಗಿದೆ. ಆದ್ದರಿಂದ ನಿಮ್ಮ ಹೂದೋಟವನ್ನು ಸುಂದರವಾಗಿ ಇಟ್ಟುಕೊಳ್ಳಲು ಇದೂ ಕೂಡ ಒಂದು ಒಳ್ಳೆಯ ಉಪಾಯವಾಗಿದೆ.
ಮರದ ದಿಂಬಿಗಳನ್ನು ರಾಶಿ ಹಾಕಬೇಡಿ:
ನಿಮ್ಮ ಗಾರ್ಡನ್ನ ಮೂಲೆಮೂಲೆಗಳಲ್ಲಿ ಮರದ ದಿಂಬಿಗಳನ್ನು ರಾಶಿಹಾಕಿದ್ದರೆ, ಈಗಲೇ ಅದನ್ನು ತೆಗೆದು ಹಾಕಿ. ಮೂಲೆ ಮೂಲೆಯಲ್ಲಿ ರಾಶಿ ಹಾಕುವುದರಿಂದ ಅವುಗಳ ಅಡಿಯಲ್ಲಿಯೇ ಇಲಿ ಹೆಗ್ಗಣಗಳು ಬಿಲ ಮಾಡಿಕೊಳ್ಳುತ್ತದೆ. ಜೊತೆಗೆ ಅವುಗಳಿಗೆ ಅಡಗಿಕೊಳ್ಳಲು ಉತ್ತಮ ಜಾಗವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:49 am, Tue, 17 January 23