Bone broth for skin: ಚರ್ಮದ ಆರೋಗ್ಯಕ್ಕೆ ಉತ್ತಮ ಮೂಳೆಸಾರು, ಇಲ್ಲಿದೆ ಸಾರು ಮಾಡುವ ವಿಧಾನ

ಮೂಳೆ ಸಾರು ಅನೇಕರಿಂದ ಸೂಪರ್‌ಪುಢ್ ಎಂದು ಪ್ರಶಂಸಿಸಲ್ಪಟ್ಟಿದೆ. ಮತ್ತು ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಮೂಳೆ ಸಾರು ಚರ್ಮಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

Bone broth for skin: ಚರ್ಮದ ಆರೋಗ್ಯಕ್ಕೆ ಉತ್ತಮ ಮೂಳೆಸಾರು, ಇಲ್ಲಿದೆ ಸಾರು ಮಾಡುವ ವಿಧಾನ
ಸಾಂದರ್ಭಿಕ ಚಿತ್ರ Image Credit source: NDTV
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 16, 2023 | 6:48 PM

ಮೂಳೆ ಸಾರು (Bone broth) ಅನೇಕರಿಂದ ಸೂಪರ್‌ಪುಢ್ ಎಂದು ಪ್ರಶಂಸಿಸಲ್ಪಟ್ಟಿದೆ. ಮತ್ತು ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಮೂಳೆ ಸಾರು ಚರ್ಮಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ನಾವು ದೀರ್ಘಕಾಲದವರೆಗೆ ಸೂರ್ಯನ ಕಿರಣಗಳಿಗೆ ಒಡ್ಡಿಕೊಂಡರೆ ಅಥವಾ ಚಳಿಗಾಳಿಯು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನಮ್ಮ ಚರ್ಮವು ಒಣಗುತ್ತದೆ ಮತ್ತು ಬೇಗನೆ ವಯಸ್ಸಾದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇಂತಹ ತ್ವಚೆಯ ಸಮಸ್ಯೆಗಳನ್ನು ದೂರ ಮಾಡಿ ತ್ವಚೆಯ ಹೊಳಪನ್ನು ಮರಳಿ ಪಡೆಯಲು ಸಹಾಯ ಮಾಡುವ ಕೆಲವೊಂದು ಸೂಪರ್‌ಫುಡ್‌ಗಳಿವೆ. ಅವುಗಳಲ್ಲಿ ಒಂದು ಮೂಳೆ ಸಾರು. ಇದು ಕರುಳಿನ ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ಒಳ್ಳೆಯದು.

ಸಮಗ್ರ ಆರೋಗ್ಯ ತರಬೇತುದಾರರಾದ ದಿಗ್ವಿಜಯ ಸಿಂಗ್ ಅವರು ಮೂಳೆ ಸಾರು ಚರ್ಮಕ್ಕೆ ಯಾವ ರೀತಿ ಒಳ್ಳೆಯದು ಮತ್ತು ಅದನ್ನು ಹೇಗೆ ತಯಾರಿಸುವುದು ಎಂಬ ಬಗ್ಗೆ ಹಂಚಿಕೊಂಡಿದ್ದಾರೆ. ಚಳಿಗಾಲದಲ್ಲಿ ಒಂದು ಕಪ್ ಬೆಚ್ಚಗಿನ ಮೂಳೆಸಾರು ದಿನವನ್ನು ಪ್ರಾರಂಭಿಸಲು ಅಥವಾ ದಿನವನ್ನು ಕೊನೆಗೊಳಿಸಲು ಪರಿಪೂರ್ಣ ಮಾರ್ಗವಾಗಿದೆ.

ಇದು ಆರೋಗ್ಯಕರ ಪಾನೀಯವಾಗಿದ್ದು, ಪ್ರಾಣಿಗಳ ಮೂಳೆಗಳು, ಮೂಳೆ ಮಜ್ಜೆ ಮತ್ತು ಸಂಯೋಜಕ ಅಂಶಗಳನ್ನು ಕುದಿಸಿ ತಯಾರಿಸಲಾಗುತ್ತದೆ. ಮೂಳೆ ಸಾರು ತಯಾರಿಸಲು ಕಾಡೆಮ್ಮೆ, ಕೋಳಿ, ಟರ್ಕಿ, ಹಂದಿ ಯಾವುದನ್ನು ಬೇಕಾದರೂ ಉಪಯೋಗಿಸಬಹುದು ಎಂದು ಸಿಂಗ್ ಹೇಳುತ್ತಾರೆ.

ಆರೋಗ್ಯಕರ ಚರ್ಮಕ್ಕಗಿ ಮೂಳೆ ಸಾರು:

ಮೂಳೆ ಸಾರು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಹಾಗೂ ಇದು ಕೊಲಾಜಿನ್‌ನಿಂದ ಸಮೃದ್ಧವಾಗಿದೆ. ಇದು ಚರ್ಮ ಮತ್ತು ಅಂಗಾಂಶಗಳನ್ನು ಸರಿಪಡಿಸಲು ಮತ್ತು ಗುಣಪಡಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇದನ್ನು ಓದಿ: Feeling Hungry: ಬೆಳಗ್ಗೆ ಹಸಿವಾಗ್ತಿದೆ ಎಂದು ಏನೇನೋ ತಿನ್ಬೇಡಿ, ಗ್ಯಾಸ್ಟ್ರಿಕ್ ಸಮಸ್ಯೆಯಾಗಬಹುದು

ಹಾರ್ವರ್ಡ್ ಟಿ.ಹೆಚ್, ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಪ್ರಕಾರ ಕೊಲಾಜಿನ್ ನಮ್ಮ ದೇಹದಲ್ಲಿ ಅತ್ಯಂತ ಹೇರಳವಾಗಿರುವ ಪ್ರೋಟೀನ್ ಆಗಿದೆ. ಇದು ಫೈಬರ್ ತರಹದ ರಚನೆಯನ್ನು ಹೊಂದಿದೆ. ಇದು ಚರ್ಮ, ಮೂಳೆ, ಸ್ನಾಯುಗಳು, ಸ್ನಾಯು ರಜ್ಜು ಮತ್ತು ಕಾರ್ಟಿಲೆಜ್‌ನ ಪ್ರಮುಖ ಅಂಶವಾಗಿದೆ. ಇದು ಅಂಗಾಶಗಳನ್ನು ಬಲವಾಗಿಸಲು ಸಹಾಯ ಮಾಡುತ್ತದೆ. ನಮಗೆ ವಯಸ್ಸಾದಂತೆ ನಮ್ಮ ದೇಹವು ಕೊಲಾಜಿನ್‌ನನ್ನು ಉತ್ಪಾದಿಸುವ ಪ್ರಮಾಣ ಕಡಿಮೆಯಾಗುತ್ತದೆ. ಇದು ಅಂತಿಮವಾಗಿ ಚರ್ಮದ ಸ್ಥಿತಿ ಸ್ಥಾಪಕತ್ವದ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೇಹದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಿದೆ. ಒಂದು ಕಪ್ ಮೂಳೆ ಸಾರು ಸೇವಿಸುವುದರಿಂದ ಕೊಲಾಜಿನ್ ಸಮಸ್ಯೆಗಳನ್ನು ದೂರಮಾಡಬಹುದು.

ಮೂಳೆ ಸಾರು ಪಾಕ ವಿಧಾನ:

ಮೂಳೆಸಾರು ತಯಾರಿಸಲು ಹುಲ್ಲು ತಿನ್ನುವ ಪ್ರಾಣಿಗಳ ದೊಡ್ಡ ಎಲುಬುಗಳನ್ನು ಬಳಸಬೇಕು ಎಂದು ದಿಗ್ವಿಜಯ ಸಿಂಗ್ ಹೇಳುತ್ತಾರೆ. ಏಕೆಂದರೆ ಅವುಗಳು ಅತ್ಯುತ್ತಮ ಪೋಷಕಾಂಶವನ್ನು ಹೊಂದಿರುತ್ತವೆ. ದೊಡ್ಡ ಮೂಳೆಗಳನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸ, ಕಲ್ಮಶಗಳನ್ನು ತೆಗೆದು ಹಾಕಿ ನಂತರ ಗೋಲ್ಡನ್ ಬ್ರೌನ್ ಆಗುವವರೆಗೆ ಅವುಗಳನ್ನು ಹುರಿಯಿರಿ, ನಂತರ ಎಲುಬುಗಳನ್ನು ನೀರಿನೊಂದಿಗೆ ಒಂದು ಪಾತ್ರೆಯಲ್ಲಿ ಸೇರಿಸಿ ಮತ್ತು ಸುಮಾರು 10 ಗಂಟೆಗಳ ಕಾಲ ಕುದಿಸಿ. ಇದನ್ನು ಕುದಿಸುವುದರಿಂದ ಮೂಳೆಗಳಲ್ಲಿರುವ ಪೋಷಕಾಂಶಗಳು ಹೊರಬರುತ್ತವೆ.

ಇದಾದ ಬಳಿಕ ಅವುಗಳನ್ನು ತಣ್ಣಗಾಗಿಸಿ ಮಸಾಲೆಗಳನ್ನು ಸೇರಿಸಿ ಇದರಿಂದ ರುಚಿ ಹೆಚ್ಚಾಗುತ್ತದೆ. ಇದನ್ನು ನೀವು ಸೂಪ್ ರೀತಿಯಲ್ಲಿ ಸೇವಿಸಬಹುದು, ಇದು ರೋಗ ನಿರೋಧಕ ಶಕ್ತಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಇದು ಕರುಳಿನ ಆರೋಗ್ಯಕ್ಕೂ ಒಳ್ಳೆಯದು ಹಾಗೂ ಚರ್ಮದ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ತಾಜಾ ಸುದ್ದಿ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?