AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Work From Home: ವರ್ಕ್​ ಫರ್ಮ್​ ಹೋಮ್​​ ಎಂದು ಸಮಯ ವ್ಯರ್ಥ ಮಾಡದಿರಿ, ಸಿಕ್ಕಿ ಬೀಳುವ ಸಾಧ್ಯತೆ ಹೆಚ್ಚಿದೆ

ಬ್ರಿಟಿಷ್ ಕೊಲಂಬಿಯಾ ಮೂಲದ ಸಂಸ್ಥೆಯು ಮನೆಯಿಂದಲೇ ಕೆಲಸ ಮಾಡುವ ಜನರ ಮೇಲೆ ಕಣ್ಣಿಡಲು ಸಾಫ್ಟ್‌ವೇರ್ ಕಂಡು ಹಿಡಿದಿದೆ. ಜೊತೆಗೆ ಈ ಪ್ರಯತ್ನ ಈಗಾಗಲೇ ಯಶಸ್ವಿಯಾಗಿದೆ.

Work From Home: ವರ್ಕ್​ ಫರ್ಮ್​ ಹೋಮ್​​ ಎಂದು ಸಮಯ ವ್ಯರ್ಥ ಮಾಡದಿರಿ, ಸಿಕ್ಕಿ ಬೀಳುವ ಸಾಧ್ಯತೆ ಹೆಚ್ಚಿದೆ
ಸಾಂದರ್ಭಿಕ ಚಿತ್ರImage Credit source: REMOTTO
TV9 Web
| Edited By: |

Updated on:Jan 17, 2023 | 12:56 PM

Share

ಕೋವಿಡ್​​ ನಂತರ ಉದೋಗ್ಯ ಕ್ಷೇತ್ರದಲ್ಲಿ ವರ್ಕ್​ ಫರ್ಮ್​ ಹೋಮ್(Work From Home) ಎಂಬ ಕಾನ್ಸೆಪ್ಟ್ ಹೆಚ್ಚಾಗಿದೆ. ಇದು ಸಾಕಷ್ಟು ಉದ್ಯೋಗಿಗಳಲ್ಲಿ ಖುಷಿಯನ್ನು ತಂದುಕೊಟ್ಟಿದೆ. ಯಾಕೆಂದರೆ ಮನೆಯಲ್ಲಿಯೇ ಕುಳಿತು ಕೆಲಸ ಮಾಡುವುದರಿಂದ, ಯಾವುದೇ ಭಯ ಇಲ್ಲ, ಜೊತೆಗೆ ಕೆಲಸ ಮಾಡದೇ ಒಂದಿಷ್ಟು ಹೊತ್ತು ಸಮಯ ವ್ಯರ್ಥ ಮಾಡಿದರೂ ಯಾರಿಗೂ ತಿಳಿಯುದಿಲ್ಲ ಎಂಬ ಭಾವನೆ. ಆದರೆ ಇನ್ನೂ ಮುಂದೆ ವರ್ಕ್​ ಫರ್ಮ್​ ಹೋಮ್​​ ಎಂದು ಸಮಯ ವ್ಯರ್ಥ ಮಾಡದಿರಿ, ಸಿಕ್ಕಿ ಬೀಳುವ ಸಾಧ್ಯತೆ ಹೆಚ್ಚಿದೆ. ಹೌದು ಬ್ರಿಟಿಷ್ ಕೊಲಂಬಿಯಾ ಮೂಲದ ಸಂಸ್ಥೆಯು ಮನೆಯಿಂದಲೇ ಕೆಲಸ ಮಾಡುವ ಜನರ ಮೇಲೆ ಕಣ್ಣಿಡಲು ಸಾಫ್ಟ್‌ವೇರ್ ಕಂಡು ಹಿಡಿದಿದೆ. ಜೊತೆಗೆ ಈ ಪ್ರಯತ್ನ ಈಗಾಗಲೇ ಯಶಸ್ವಿಯಾಗಿದೆ.

ಬ್ರಿಟಿಷ್ ಕೊಲಂಬಿಯಾ ಮೂಲದ ಸಂಸ್ಥೆಯು ಮನೆಯಿಂದ ಕೆಲಸ ಮಾಡುವ ಜನರ ಮೇಲೆ ಕಣ್ಣಿಡಲು ಟೈಮ್‌ಕ್ಯಾಂಪ್ ಸಾಫ್ಟ್‌ವೇರ್ ಒಂದನ್ನು ಅಭಿವೃದ್ಧಿಪಡಿಸಿದ್ದು, ವರ್ಕ್​ ಫರ್ಮ್​ ಹೋಮ್​​ ಎಂದು ಸಮಯ ವ್ಯರ್ಥ ಮಾಡುತ್ತಿದ್ದ ಮಹಿಳೆ ಸಿಕ್ಕಿಬಿದ್ದಿದ್ದಾಳೆ.  ಕೆನಡಾದ ಮಹಿಳೆಯೊಬ್ಬರು ಮನೆಯಿಂದ ಕೆಲಸದ ಸಮಯದಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಕಾರಣ ಅಕೌಂಟೆಂಟ್ ಆಗಿ ರಿಮೋಟ್ ಆಗಿ ಕೆಲಸ ಮಾಡುತ್ತಿದ್ದ ಕಾರ್ಲೀ ಬೆಸ್ಸೆ ಅವರ ಉದ್ಯೋಗದಾತರಿಗೆ ರೂ 3 ಲಕ್ಷ ಪಾವತಿಸಲು ಆದೇಶಿಸಲಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಇದಲ್ಲದೇ ಆಕೆಯನ್ನು ಕಂಪನಿಯಿಂದ ವಜಾ ಮಾಡಿದೆ.

ಇದನ್ನೂ ಓದಿ: ಪುರುಷರಿಗಿಂತ ಮಹಿಳೆಯರು 20 ನಿಮಿಷ ಹೆಚ್ಚು ನಿದ್ದೆ ಮಾಡಬೇಕಂತೆ, ಕಾರಣ ಇಲ್ಲಿದೆ

ಮಹಿಳೆ ಸಿಕ್ಕಿಬಿದ್ದಿದ್ದು ಹೇಗೆ?

ಟೈಮ್‌ಕ್ಯಾಂಪ್ ಸಾಫ್ಟ್‌ವೇರ್ ಎಂಬುದು ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುತ್ತದೆ. ಕೆಲಸದ ಸಮಯದಲ್ಲಿ ಬೆಸ್ಸೆ ಹೆಚ್ಚಾಗಿ ಕೆಲಸವನ್ನು ನಿರ್ಲಕ್ಷ್ಯಿಸುತ್ತಿದ್ದರೂ ಎಂದು ಈ ಸಾಫ್ಟ್‌ವೇರ್ ಕಂಡುಹಿಡಿದಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಆರೋಪವನ್ನು ತಳ್ಳಿಹಾಕಿದ ಮಹಿಳೆ, ಸಾಫ್ಟ್‌ವೇರ್ ತನ್ನ ಕೆಲಸ ಮತ್ತು ವೈಯಕ್ತಿಕ ಸಮಯದ ನಡುವಿನ ವ್ಯತ್ಯಾಸವನ್ನು ಸರಿಯಾಗಿ ಗುರುತಿಸಲಿಲ್ಲ ಎಂದು ಹೇಳಿದ್ದಾಳೆ. ಜೊತೆಗೆ ಯಾವುದೇ ಪೂರ್ವ ಸೂಚನೆ ನೀಡದೇ ನನ್ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಆಕೆ ಹೇಳಿಕೆ ನೀಡಿದ್ದಾಳೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 12:54 pm, Tue, 17 January 23

ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು