Evergreen Marine Corp: 4 ವರ್ಷಗಳ ಸಂಬಳವನ್ನು ಬೋನಸ್ ಆಗಿ ನೀಡಿದ ಕಂಪನಿ: ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್
ತೈವಾನ್ನ ಎವರ್‌ಗ್ರೀನ್ ಮರೈನ್ ಕಾರ್ಪೊರೇಷನ್ ಹೊಸ ವರ್ಷಕ್ಕೆ ತನ್ನ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ.
ತೈವಾನ್ನ ಎವರ್‌ಗ್ರೀನ್ ಮರೈನ್ ಕಾರ್ಪೊರೇಷನ್ ಹೊಸ ವರ್ಷಕ್ಕೆ ತನ್ನ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ತೈಪೆ ಮೂಲದ ಶಿಪ್ಪಿಂಗ್ ಕಂಪನಿಯು ವರ್ಷಾಂತ್ಯದ ಬೋನಸ್ ಘೋಷಿಸಿದ್ದು, ಇದು ಬರೋಬ್ಬರಿ 50 ತಿಂಗಳ ಸಂಬಳಕ್ಕೆ ಸಮನಾಗಿರುತ್ತದೆ ಅಥವಾ ಸರಾಸರಿ ನಾಲ್ಕು ವರ್ಷಗಳ ವೇತನ ಇದಾಗಿರುತ್ತದೆ. ವಿಂಡ್‌ಫಾಲ್‌ನ ಗಾತ್ರವು ನೌಕರನ ಕೆಲಸದ ದರ್ಜೆ ಮತ್ತು ಕಾರ್ಯವನ್ನು ಅವಲಂಬಿಸಿ ಬದಲಾಗುತ್ತದೆ. ತೈವಾನ್-ಆಧಾರಿತ ಒಪ್ಪಂದಗಳನ್ನು ಹೊಂದಿರುವ ಸಿಬ್ಬಂದಿಗೆ ಮಾತ್ರ ಬೋನಸ್‌ಗಳು ಅನ್ವಯಿಸುತ್ತವೆ.
ವರ್ಷಾಂತ್ಯದ ಬೋನಸ್‌ಗಳು ಯಾವಾಗಲೂ ಕಂಪನಿಯ ವರ್ಷದ ಕಾರ್ಯಕ್ಷಮತೆ ಮತ್ತು ಉದ್ಯೋಗಿಗಳ ವೈಯಕ್ತಿಕ ಕಾರ್ಯಕ್ಷಮತೆಯನ್ನು ಆಧರಿಸಿವೆ ಎಂದು ಎವರ್‌ಗ್ರೀನ್ ಮರೈನ್ ಹೇಳಿಕೆಯಲ್ಲಿ ತಿಳಿಸಿದೆ. ಕೆಲವು ಉದ್ಯೋಗಿಗಳು ಡಿಸೆಂಬರ್ 30 ರಂದು 65,000 ಡಾಲರ್‌ಗಿಂತ ಹೆಚ್ಚಿನ ಬೋನಸ್ ಸ್ವೀಕರಿಸಿದ್ದಾರೆ ಎಂದಿದೆ.
ಮತ್ತಷ್ಟು ಓದಿ: ಸಾಲ ರೈಟ್ ಆಫ್ ಆಗಿದೆ ಎಂದು ನಿರಾಳರಾಗಬೇಡಿ; ಬ್ಯಾಂಕ್ಗಳು ಮತ್ತೆಯೂ ಮನೆ ಬಾಗಿಲಿಗೆ ಬರಬಹುದು!
ಹಾಗೇಯೇ ಎಲ್ಲಾ ಸಿಬ್ಬಂದಿಗೂ ಈ ಬೋನಸ್ ಅನ್ವಯವಾಗಿಲ್ಲ. ಶಾಂಘೈ ಮೂಲದ ಉದ್ಯೋಗಿಗಳು ತಮ್ಮ ಮಾಸಿಕ ಸಂಬಳದ ಐದರಿಂದ ಎಂಟು ಪಟ್ಟು ಬೋನಸ್‌ಗಳನ್ನು ಪಡೆದು, ಈ ಅನ್ಯಾಯದ ವರ್ತನೆಯ ಬಗ್ಗೆ ದೂರು ನೀಡಿದ್ದಾರೆ ಎಂದು ಸ್ಥಳೀಯ ಕಾರ್ಮಿಕರನ್ನು ಉಲ್ಲೇಖಿಸಿ ಕೈಕ್ಸಿನ್ ವರದಿ ಮಾಡಿದೆ.
ಎವರ್‌ಗ್ರೀನ್ ಸಂಸ್ಥೆ ಮಾಲೀಕತ್ವದ ಹಡಗು 2021 ರ ಆರಂಭದಲ್ಲಿ ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿತು. 6,813.07 ಕೋಟಿ ರೂಪಾತಿ ಪರಿಹಾರ ನೀಡುವಂತೆ ಸೂಯೆಜ್ ಕಾಲುವೆ ಪ್ರಾಧಿಕಾರ ಒತ್ತಾಯಿಸಿತ್ತು. ಬಳಿಕ ಈ ಮೊತ್ತವನ್ನು 4,127.89 ರೋಪಾಯಿಗೆ ಇಳಿಕೆ ಮಾಡಲಾಗಿತ್ತು.
ಕಂಪನಿಯ 2022 ರ ಆದಾಯವು ದಾಖಲೆಯ 20.7 ಶತಕೋಟಿಗೆ ಏರುವ ನಿರೀಕ್ಷೆಯಿದೆ, ಇದು 2020 ರ ಮಾರಾಟಕ್ಕಿಂತ ಮೂರು ಪಟ್ಟು ಹೆಚ್ಚು. 2021 ರಲ್ಲಿ ಅದ್ಭುತವಾದ ಶೇ.250 ಲಾಭದ ನಂತರ ಎವರ್‌ಗ್ರೀನ್ ಮರೈನ್‌ನ ಸ್ಟಾಕ್ ಕಳೆದ ವರ್ಷ ಷೇರು ಮೌಲ್ಯ ಶೇ.54 ರಷ್ಟು ಕುಸಿದಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ