ಬಳ್ಳಾರಿಯಲ್ಲಿ ದರ್ಗಾಗಳಿಗೆ ಭೇಟಿ ನೀಡಿ ಮುಸ್ಲಿಂ ಮತದಾರರ ಓಲೈಕೆಯಲ್ಲಿ ತೊಡಗಿರುವ ಜಿ ಜನಾರ್ಧನರೆಡ್ಡಿ ಪತ್ನಿ ಅರುಣ ಲಕ್ಷ್ಮಿ!
ಬಿಜೆಪಿ ಬಿಟ್ಟು ತನ್ನ ಕೆ ಆರ್ ಪಿಪಿ ಸೇರಲು ಹಿಂದೇಟು ಹಾಕುತ್ತಿರುವ ಸಹೋದರ ಜಿ ಸೋಮಶೇಖರ ರೆಡ್ಡಿಯವರ ವಿರುದ್ಧ ತಮ್ಮ ಪತ್ನಿಯನ್ನು ಕಣಕ್ಕಿಳಿಸಿದರೆ ಆಶ್ಚರ್ಯವಿಲ್ಲ..
ಬಳ್ಳಾರಿ: ಅತ್ತ ಗಂಗಾವತಿಯಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಗಂಗಾವತಿಯಲ್ಲಿ ಮುಸ್ಲಿಂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಇತ್ತ ಬಳ್ಳಾರಿಯಲ್ಲಿ ಅವರ ಪತ್ನಿ ಅರುಣ ಲಕ್ಷ್ಮಿಯವರು (Aruna Lakshmi) ದರ್ಗಾಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಅರುಣ ಲಕ್ಷ್ಮಿಯವರು 2023 ರ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸುವುದು ಹೆಚ್ಚು ಕಡಿಮೆ ಖಚಿತವಾಗಿದೆ. ಬಿಜೆಪಿ ಬಿಟ್ಟು ತನ್ನ ಕೆ ಆರ್ ಪಿಪಿ ಸೇರಲು ಹಿಂದೇಟು ಹಾಕುತ್ತಿರುವ ಸಹೋದರ ಜಿ ಸೋಮಶೇಖರ ರೆಡ್ಡಿಯವರ (G Somashekhar Reddy) ವಿರುದ್ಧ ತಮ್ಮ ಪತ್ನಿಯನ್ನು ಕಣಕ್ಕಿಳಿಸಿದರೆ ಆಶ್ಚರ್ಯವಿಲ್ಲ..
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos