AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲ ರೈಟ್ ಆಫ್ ಆಗಿದೆ ಎಂದು ನಿರಾಳರಾಗಬೇಡಿ; ಬ್ಯಾಂಕ್​ಗಳು ಮತ್ತೆಯೂ ಮನೆ ಬಾಗಿಲಿಗೆ ಬರಬಹುದು!

ಸಾಲ ಮನ್ನಾ ಮತ್ತು ಸಾಲದ ರೈಟ್ ಆಫ್​ ಎಂಬುದು ಸರ್ಕಾರದ ಮಟ್ಟದಲ್ಲಿ ಕೈಗೊಳ್ಳುವ ಮಹತ್ವದ ತೀರ್ಮಾನಗಳಾಗಿವೆ. ಆದರೆ, ಇವೆರಡರ ನಡುವೆ ವ್ಯತ್ಯಾಸವಿದೆ. ಸಾಲ ಮನ್ನಾ ಮತ್ತು ಸಾಲದ ರೈಟ್ ಆಫ್ ನಡುವಣ ಪ್ರಮುಖ ವ್ಯತ್ಯಾಸವನ್ನು ಇಲ್ಲಿ ನೀಡಲಾಗಿದೆ.

TV9 Web
| Updated By: Ganapathi Sharma

Updated on: Jan 09, 2023 | 6:12 PM

Know Loan write off and how it is Different from loan waiver in Kannada

ಸಾಮಾನ್ಯವಾಗಿ ಚುನಾವಣೆ ಸಮೀಪಿಸಿದಾಗ ರಾಜಕಾರಣಿಗಳಿಂದ ಸಾಲ ಮನ್ನಾ ಭರವಸೆಗಳ ಮಹಾಪೂರವೇ ಹರಿದು ಬರುತ್ತದೆ. ಅದೇ ರೀತಿ, ಸಂಸತ್​ ಅಧಿವೇಶನಗಳ ಸಂದರ್ಭದಲ್ಲಿ ನಿರ್ದಿಷ್ಟ ಮೊತ್ತದ ಸಾಲವನ್ನು ರೈಟ್ ಆಫರ್ (ಬರ್ಖಾಸ್ತು) ಮಾಡಲಾಗಿದೆ ಎಂಬ ಮಾಹಿತಿಯನ್ನು ಸರ್ಕಾರ ನೀಡುವುದು ವರದಿಯಾಗುತ್ತಿರುತ್ತದೆ.

1 / 8
Know Loan write off and how it is Different from loan waiver in Kannada

ಕಳೆದ ಐದು ವರ್ಷಗಳಲ್ಲಿ 10,09,511 ಕೋಟಿ ರೂ. ಮೌಲ್ಯದ ಸಾಲವನ್ನು ದೇಶದ ಪ್ರಮುಖ ಬ್ಯಾಂಕ್​ಗಳು ರೈಟ್​ ಆಫ್ ಮಾಡಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಸಂಸತ್​​ ಅಧಿವೇಶನದಲ್ಲಿ ತಿಳಿಸಿದ್ದರು.

2 / 8
Know Loan write off and how it is Different from loan waiver in Kannada

ಆದರೆ, ಸಾಲ ಮನ್ನಾ ಮತ್ತು ಸಾಲದ ರೈಟ್​ ಆಫ್ ಮಾಡುವುದಕ್ಕೆ ವ್ಯತ್ಯಾಸವಿದೆ. ಸಾಲ ಮನ್ನಾ ಎಂದರೆ ಸಾಲ ಪಡೆದ ವ್ಯಕ್ತಿಯೊಬ್ಬ ಅದನ್ನು ಕಟ್ಟಬೇಕಾದ ಅಗತ್ಯವಿಲ್ಲ. ಮನ್ನಾ ಆದ ಸಾಲಕ್ಕೆ ಸಾಲಗಾರ ನಂತರ ಜವಾಬ್ದಾರನಾಗಿರುವುದಿಲ್ಲ. ಬ್ಯಾಂಕ್​ಗಳಿಗೆ ಅದು ಆರ್ಥಿಕ ಹೊರೆಯಾಗಿ ಪರಿಣಮಿಸುತ್ತದೆ.

3 / 8
Know Loan write off and how it is Different from loan waiver in Kannada

ಸಾಮಾನ್ಯವಾಗಿ ಕೃಷಿ ಸಾಲಗಳನ್ನು ಮನ್ನಾ ಮಾಡಿರುವ ಹಲವು ನಿದರ್ಶನಗಳು ನಮ್ಮ ಮುಂದಿವೆ. ಸರ್ಕಾರಗಳು ಈ ವಿಚಾರವಾಗಿ ನಿರ್ಧಾರ ಕೈಗೊಂಡು ನಂತರ ಬ್ಯಾಂಕ್​ಗಳಿಗೆ ಸೂಚನೆ ನೀಡುತ್ತವೆ. ಅದರಂತೆ ಬ್ಯಾಂಕ್​ಗಳು ತೀರ್ಮಾನ ಕೈಗೊಳ್ಳುತ್ತವೆ. ಕೃಷಿ ಸಾಲ ಮನ್ನಾದಂಥ ಸಂದರ್ಭಗಳಲ್ಲಿ ಹಲವು ಷರತ್ತುಗಳನ್ನು ವಿಧಿಸಿರುವುದನ್ನೂ ನೀವು ಗಮನಿಸಿರಬಹುದು.

4 / 8
Know Loan write off and how it is Different from loan waiver in Kannada

ದೇಶದಲ್ಲಿ ಉದ್ಯಮ ಚಟುವಟಿಕೆಗಳನ್ನು ಹೆಚ್ಚಿಸಲು, ಉದ್ಯೋಗಾವಕಾಶ ಸೃಷ್ಟಿ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಗಳು ಕಾರ್ಪೊರೇಟ್ ಸಾಲಗಳ ಮರು ಪಾವತಿಗೆ ವಿನಾಯಿತಿ ನೀಡಿದ ಅನೇಕ ನಿದರ್ಶನಗಳೂ ನಮ್ಮ ಮುಂದಿವೆ. ಆದರೆ ಸಾಲದ ರೈಟ್ ಆಫ್ ಎಂದರೆ ಈ ರೀತಿಯದ್ದಲ್ಲ.

5 / 8
Know Loan write off and how it is Different from loan waiver in Kannada

ಸಾಲದ ರೈಟ್ ಆಫ್​ ಎಂಬುದು ಬ್ಯಾಂಕ್​ಗಳ ಬ್ಯಾಲೆನ್ಸ್​​ಶೀಟ್​ ಅನ್ನು ಸುಸ್ಥಿತಿಯಲ್ಲಿಡುವ ಒಂದು ವಿಧಾನವಷ್ಟೆ. ಮರುಪಾವತಿಯಾಗದ ಸಾಲಗಳ ಹೊರೆಯಿಂದ ಬ್ಯಾಂಕ್​ ಬ್ಯಾಲೆನ್ಸ್​​ಶೀಟ್ ನಿರ್ವಹಣೆ ಕಷ್ಟಕರವಾಗಿ ಪರಿಣಮಿಸಿದಾಗ ಅವುಗಳ ಸುಗಮ ನಿರ್ವಹಣೆಗಾಗಿ ಬ್ಯಾಂಕ್​ಗಳು ಸಾಲವನ್ನು ರೈಟ್ ಆಫ್ ಮಾಡುತ್ತವೆ. ಅಂದರೆ ಬ್ಯಾಲೆನ್ಸ್​ಶೀಟ್​​ ಅನ್ನು ಕ್ಲಿಯರ್ ಮಾಡುತ್ತವೆ.

6 / 8
Know Loan write off and how it is Different from loan waiver in Kannada

ಬ್ಯಾಲೆನ್ಸ್ ಶೀಟ್ ಕ್ಲಿಯರ್ ಆದ ಮಾತ್ರಕ್ಕೆ ಸಾಲ ಪಡೆದ ವ್ಯಕ್ತಿಯಿಂದ ಅದನ್ನು ವಸೂಲಿ ಮಾಡಬಾರದು ಎಂದೇನೂ ಇಲ್ಲ. ಸಾಲದ ಮೊತ್ತ ಮರು ವಸೂಲಿ, ಅದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ಮುಂದುವರಿಸಲು ಬ್ಯಾಂಕ್​ಗಳು ಸದಾ ಮುಕ್ತವಾಗಿರುತ್ತವೆ. ಬ್ಯಾಲೆನ್ಸ್​ ಶೀಟ್ ಕ್ಲಿಯರ್ ಮಾಡಿದ್ದರಿಂದ ಬ್ಯಾಂಕ್​ಗಳ ಅನುತ್ಪಾದಕ ಆಸ್ತಿಯ ಪ್ರಮಾಣದ ತೋರ್ಪಡಿಸುವಿಕೆಯಲ್ಲಿ ಮಾತ್ರ ವ್ಯತ್ಯಾಸವಾಗುತ್ತದೆ. ಇದಕ್ಕಾಗಿ ಬ್ಯಾಂಕ್​ಗಳು ಈ ಕ್ರಮ ಕೈಗೊಳ್ಳುತ್ತವೆ.

7 / 8
Know Loan write off and how it is Different from loan waiver in Kannada

ಸಾಲದ ರೈಟ್​ ಆಫ್​ನಿಂದ ಸಾಲಗಾರನಿಗೆ, ಜನಸಾಮಾನ್ಯರಿಗೆ ಯಾವುದೇ ಪ್ರಯೋಜನ ಇರುವುದಿಲ್ಲ. ಸಾಲ ಪಡೆದವರು ಅದನ್ನು ಮರು ಪಾವತಿಸುವ ಜವಾಬ್ದಾರಿಗೆ ಬದ್ಧರಾಗಿಯೇ ಇರಬೇಕಾಗುತ್ತದೆ. ಆದರೆ, ಸಾಲ ಮನ್ನಾದಲ್ಲಿ ಹೀಗಲ್ಲ. ಒಮ್ಮೆ ಮನ್ನಾ ಆಯ್ತೆಂದರೆ ಮತ್ತೆ ಮರು ಪಾವತಿಯ ಗೊಡವೆ ಇರುವುದಿಲ್ಲ.

8 / 8
Follow us
ಹೀಗೂ ಉಂಟೆ... ಅಳತೆ ಮೀರಿದ ಬ್ಯಾಟ್ ಬಳಸಲು ರವೀಂದ್ರ ಜಡೇಜಾ ಸರ್ಕಸ್
ಹೀಗೂ ಉಂಟೆ... ಅಳತೆ ಮೀರಿದ ಬ್ಯಾಟ್ ಬಳಸಲು ರವೀಂದ್ರ ಜಡೇಜಾ ಸರ್ಕಸ್
Daily Devotional: ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?
Daily Devotional: ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭಫಲ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭಫಲ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್