AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Penny Stock: 1 ಲಕ್ಷ ರೂ. ಹೂಡಿಕೆಗೆ 67 ಲಕ್ಷ ರೂ. ಗಳಿಸಿಕೊಟ್ಟಿದೆ ಈ ಪೆನ್ನಿ ಸ್ಟಾಕ್!

Multibagger penny stock; ದೀರ್ಘಾವಧಿಯ ಹೂಡಿಕೆದಾರರಿಗೆ ಈ ಕಂಪನಿಯ ಷೇರುಗಳು ಉತ್ತಮ ಗಳಿಕೆ ತಂದುಕೊಟ್ಟಿವೆ. ಈ ವರ್ಷ ಮೇ ತಿಂಗಳಲ್ಲಿ ಕಂಪನಿಯ ನಿರ್ದೇಶಕರ ಮಂಡಳಿ 2:1ರ ಅನುಪಾತದಲ್ಲಿ ಬೋನಸ್ ನೀಡುವುದಾಗಿ ಘೋಷಿಸಿತ್ತು. ಪರಿಣಾಮವಾಗಿ ಷೇರು ಖರೀದಿಸಿದ್ದವರ ಗಳಿಕೆ ದಿಢೀರ್ ಹೆಚ್ಚಾಗಿತ್ತು.

Penny Stock: 1 ಲಕ್ಷ ರೂ. ಹೂಡಿಕೆಗೆ 67 ಲಕ್ಷ ರೂ. ಗಳಿಸಿಕೊಟ್ಟಿದೆ ಈ ಪೆನ್ನಿ ಸ್ಟಾಕ್!
ಬಿಎಸ್​ಇImage Credit source: Reuters
TV9 Web
| Updated By: Ganapathi Sharma|

Updated on:Nov 17, 2022 | 12:36 PM

Share

2022ರಲ್ಲಿ ಬೋನಸ್ ನೀಡುತ್ತಿರುವ ಷೇರುಗಳಲ್ಲಿ ಸಿಂಧು ಟ್ರೇಡ್ ಲಿಂಕ್ಸ್ ಲಿಮಿಟೆಡ್ (Sindhu Trade Links Ltd) ಕಂಪನಿಯ ಮಲ್ಟಿ ಬ್ಲಾಗರ್ ಷೇರು (Multibagger penny stock) ಕೂಡ ಒಂದಾಗಿದೆ. 2022ರ ಮೇ ತಿಂಗಳಲ್ಲಿ ಈ ಕಂಪನಿಯು 2:1 ರ ಅನುಪಾತದಲ್ಲಿ ಬೋನಸ್​ ಷೇರುಗಳನ್ನು ವಿತರಿಸಿದೆ. ದೀರ್ಘಾವಧಿಯ ಹೂಡಿಕೆದಾರರಿಗೆ ಈ ಬೋನಸ್​ ಹೆಚ್ಚುವರಿ ಬಹುಮಾನವಾಗಿದ್ದು, ಷೇರಿನ ಮುಖಬೆಲೆ ಆರು ವರ್ಷಗಳಲ್ಲಿ ₹0.56 ರಿಂದ 19 ರೂ.ವರೆಗೆ ವೃದ್ಧಿಯಾಗಿದೆ. ಅಂದರೆ, ಆರು ವರ್ಷಗಳ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿದ್ದವರಿಗೆ ಈಗ ಬೋನಸ್ ಸೇರಿ 67 ಲಕ್ಷ ರೂ. ದೊರೆತಂತಾಗಿದೆ.

ಸಿಂಧು ಟ್ರೇಡ್ ಲಿಂಕ್ಸ್ ಷೇರು ಮೌಲ್ಯದ ಹಿನ್ನೆಲೆ

ಈ ವರ್ಷ ಫೆಬ್ರುವರಿಯಲ್ಲಿ ಕಂಪನಿಯ ಷೇರುಗಳು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 55.40 ರೂ.ಗೆ ತಲುಪಿದ್ದವು. ಬಳಿಕ ಈ ವರ್ಷದ ಲೆಕ್ಕಾಚಾರದ ಪ್ರಕಾರ ಶೇಕಡಾ 20ರಷ್ಟು ಕುಸಿತ ಕಂಡಿದ್ದವು. ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದ್ದರಿಂದ ಕಳೆದ ಒಂದು ವರ್ಷದಲ್ಲಿ ಈ ಪೆನ್ನಿ ಷೇರು ಶೂನ್ಯ ಗಳಿಕೆ ದಾಖಲಿಸಿದೆ. ಆದರೆ, ಕಳೆದ 5 ವರ್ಷಗಳ ಅವಧಿಯಲ್ಲಿ ಈ ಷೇರಿನ ಮೌಲ್ಯ 1.20 ರೂ.ನಿಂದ 19 ರೂ.ವರೆಗೆ ತಲುಪಿದೆ. ಇದರೊಂದಿಗೆ ಹೂಡಿಕೆದಾರರಿಗೆ ಶೇಕಡಾ 1,500ರಷ್ಟು ರಿಟರ್ನ್ಸ್ ತಂದುಕೊಟ್ಟಿದೆ. 2017ರ ಫೆಬ್ರುವರಿಯಲ್ಲಿ ಈ ಪೆನ್ನಿ ಷೇರು 0.56 ರೂ.ನಲ್ಲಿ ವಹಿವಾಟು ಮುಗಿಸಿತ್ತು. ಅಲ್ಲಿಂದ ಬಳಿಕ 19 ರೂ.ವರೆಗೆ ವೃದ್ಧಿ ದಾಖಲಿಸಿದೆ.

ಇದನ್ನೂ ಓದಿ: Paytm shares: ಪೇಟಿಎಂ ಷೇರು ಮೌಲ್ಯ ಭಾರಿ ಕುಸಿತ; ಈಗ ಷೇರು ಖರೀದಿ ಸೂಕ್ತವೇ?

ಸಿಂಧು ಟ್ರೇಡ್ ಲಿಂಕ್ಸ್ ಬೋನಸ್ ಷೇರಿನ ಇತಿಹಾಸ

ದೀರ್ಘಾವಧಿಯ ಹೂಡಿಕೆದಾರರಿಗೆ ಈ ಕಂಪನಿಯ ಷೇರುಗಳು ಉತ್ತಮ ಗಳಿಕೆ ತಂದುಕೊಟ್ಟಿವೆ. ಕಳೆದ ಆರು ವರ್ಷಗಳಲ್ಲಿ ಈ ಪೆನ್ನಿ ಷೇರು ಬೋನಸ್​ಗಳನ್ನು ಕೊಡುತ್ತಾ ಬಂದಿದೆ. ಈ ವರ್ಷ ಮೇ ತಿಂಗಳಲ್ಲಿ ಕಂಪನಿಯ ನಿರ್ದೇಶಕರ ಮಂಡಳಿ 2:1ರ ಅನುಪಾತದಲ್ಲಿ ಬೋನಸ್ ನೀಡುವುದಾಗಿ ಘೋಷಿಸಿತ್ತು.

ಹೂಡಿಕೆದಾರರ ಮೇಲಿನ ಪರಿಣಾಮ

ಸಿಂಧು ಟ್ರೇಡ್ ಲಿಂಕ್ಸ್​ನಲ್ಲಿ ಆರು ವರ್ಷಗಳ ಹಿಂದೆ 0.56 ರೂ.ನಂತೆ 1 ಲಕ್ಷ ರೂ. ಹೂಡಿಕೆ ಮಾಡಿದ್ದವರಿಗೆ ಆಗ 1,78,571 ಷೇರುಗಳು ದೊರೆತಿರುತ್ತವೆ. ಈಗ ಕಂಪನಿಯು 2:1ರ ಅನುಪಾತದಲ್ಲಿ ಬೋನಸ್ ಘೋಷಿಸಿರುವುದರಿಂದ ಹೆಚ್ಚುವರಿ ಹೂಡಿಕೆ ಮಾಡದೆಯೇ ಅವರ ಬಳಿ ಇರುವ ಷೇರುಗಳ ಸಂಖ್ಯೆ 3,57,142 ತಲುಪಿರುತ್ತವೆ.

ಬೋನಸ್ ಷೇರುಗಳ ಪ್ರಯೋಜನ

ಆರು ವರ್ಷಗಳ ಹಿಂದೆ 0.56 ರೂ.ನಂತೆ 1 ಲಕ್ಷ ರೂ. ಹೂಡಿಕೆ ಮಾಡಿದ್ದವರಿಗೆ ಆಗ 1,78,571 ಷೇರುಗಳು ದೊರೆತಿದ್ದವಷ್ಟೇ. ಈಗ ಬೋನಸ್ ಸಹ ಸೇರಿ ಅವರ ಕೈಯಲ್ಲಿ 3,57,142 ಷೇರುಗಳಿರುತ್ತವೆ. ಈಗ ಸಿಂಧು ಟ್ರೇಡ್ ಲಿಂಕ್ಸ್ ಮಲ್ಟಿಬ್ಲಾಗರ್ ಪೆನ್ನಿ ಷೇರಿನ ಮುಖಬೆಲೆ 19 ರೂ. ಇದೆ. ಪರಿಣಾಮವಾಗಿ ಆಗ 1 ಲಕ್ಷ ರೂ. ಹೂಡಿಕೆ ಮಾಡಿದ್ದವರಿಗೆ ಈಗ 67 ಲಕ್ಷ ರೂ. ದೊರೆತಂತಾಯಿತು.

ಸಿಂಧು ಟ್ರೇಡ್ ಲಿಂಕ್ಸ್ ಲಿಮಿಟೆಡ್ ಬಿಎಸ್​ಇಯಲ್ಲಿ ಲಿಸ್ಟ್ ಆಗಿರುವ ಷೇರು ಆಗಿದ್ದು, ಪ್ರಸ್ತುತ 2,952 ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿದೆ ಎಂದು ‘ಲೈವ್ ಮಿಂಟ್’ ವರದಿ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:36 pm, Thu, 17 November 22

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!