Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm shares: ಪೇಟಿಎಂ ಷೇರು ಮೌಲ್ಯ ಭಾರಿ ಕುಸಿತ; ಈಗ ಷೇರು ಖರೀದಿ ಸೂಕ್ತವೇ?

Paytm shares; ಮೊದಲಿನಿಂದಲೂ ಪೇಟಿಎಂ ಷೇರುಗಳು ಕುಸಿತದ ಹಾದಿಯಲ್ಲೇ ಇದ್ದರೂ ಐಸಿಐಸಿಐ ಸೆಕ್ಯುರಿಟೀಸ್ ಅಭಿಪ್ರಾಯದ ಪ್ರಕಾರ, 24ನೇ ಹಣಕಾಸು ವರ್ಷದ ಆರಂಭದ ವೇಳೆ ಷೇರುಗಳ ಮೌಲ್ಯದಲ್ಲಿ ಚೇತರಿಕೆಯಾಗುವ ಸಾಧ್ಯತೆ ಇದೆ

Paytm shares: ಪೇಟಿಎಂ ಷೇರು ಮೌಲ್ಯ ಭಾರಿ ಕುಸಿತ; ಈಗ ಷೇರು ಖರೀದಿ ಸೂಕ್ತವೇ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Nov 17, 2022 | 10:28 AM

ಮುಂಬೈ: ಬಿಎಸ್​​ಇ ಷೇರುಪೇಟೆಯಲ್ಲಿ ಪೇಟಿಎಂ ಷೇರು (Paytm shares) ಮೌಲ್ಯ ಗುರುವಾರ ಶೇಕಡಾ 9ರಷ್ಟು ಕುಸಿದಿದೆ. ಸುಮಾರು 21.5 ಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ‘ಒನ್ 97 ಕಮ್ಯೂನಿಕೇಷನ್ಸ್​ಗೆ (One97 Communications)’ ಮಾರಾಟ ಮಾಡುವುದಾಗಿ ಸಾಫ್ಟ್​ಬ್ಯಾಂಕ್ (Softbank) ಘೋಷಿಸಿದ್ದೇ ಷೇರು ಮೌಲ್ಯದಲ್ಲಿ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಇದರ ಬೆನ್ನಲ್ಲೇ ಹೂಡಿಕೆದಾರರು ಪೇಟಿಎಂ ಷೇರುಗಳ ಮಾರಾಟಕ್ಕೆ ಮುಗಿಬಿದ್ದಿದ್ದಾರೆ. ಸದ್ಯ ಪೇಟಿಎಂ ಷೇರು 560 ರೂ. ಮುಖಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ. ಒಟ್ಟು 2.9 ಕೋಟಿ ಷೇರುಗಳು ಇಂದಿನ (ಗುರುವಾರ) ವಹಿವಾಟಿನಲ್ಲಿ ಮಾರಾಟವಾಗುವ ನಿರೀಕ್ಷೆ ಇದೆ. ತನ್ನ ಘಟಕ ವಿಷನ್ ಫಂಡ್ (Vision Fund) ಕಳೆದ ಆರು ತಿಂಗಳುಗಳಲ್ಲಿ ಸುಮಾರು 50 ಶತಕೋಟಿ ಡಾಲರ್ ನಷ್ಟ ಅನುಭವಿಸಿದ್ದರಿಂದ ಸಾಫ್ಟ್​ಬ್ಯಾಂಕ್ ಷೇರುಗಳ ಮಾರಾಟ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಪೇಟಿಎಂನ ಐಪಿಒ (ಇನಿಷಿಯಲ್ ಪಬ್ಲಿಕ್ ಆಫರಿಂಗ್) ಲಾಕ್ ಇನ್ ಪಿರಿಯಡ್ ಮುಗಿದ ಬೆನ್ನಲ್ಲೇ ಷೇರುಗಳ ಮಾರಾಟದ ಮಾಹಿತಿ ಬಹಿರಂಗವಾಗಿದೆ. ‘ಒನ್ 97 ಕಮ್ಯೂನಿಕೇಷನ್ಸ್’ ಷೇರುಗಳು ಬುಧವಾರ ಶೇಕಡಾ 4ರಷ್ಟು ಕುಸಿತವಾಗಿ 601 ರೂ.ನಲ್ಲಿ ವಹಿವಾಟು ಕೊನೆಗೊಳಿಸಿತ್ತು. ಇಂಟ್ರಾಡೇ ಸೆಷನ್​ನಲ್ಲಿ ಇದು 5 ತಿಂಗಳ ಕನಿಷ್ಠಕ್ಕೆ ಕುಸಿದಿದೆ. ಪೇಟಿಎಂ ಷೇರಿನ ಆರಂಭಿಕ ದರ 2,150 ರೂ. ಆಗಿತ್ತು. ಆದರೆ, ಅದೀಗ ಶೇಕಡಾ 72ರಷ್ಟು ಇಳಿಕೆಯೊಂದಿಗೆ ವಹಿವಾಟು ನಡೆಸುತ್ತಿದೆ.

ಮುಂದಿನ ಹಣಕಾಸು ವರ್ಷದಲ್ಲಿ ಚೇತರಿಸಲಿದೆ ಪೇಟಿಎಂ

ಮೊದಲಿನಿಂದಲೂ ಪೇಟಿಎಂ ಷೇರುಗಳು ಕುಸಿತದ ಹಾದಿಯಲ್ಲೇ ಇದ್ದರೂ ಐಸಿಐಸಿಐ ಸೆಕ್ಯುರಿಟೀಸ್ ಅಭಿಪ್ರಾಯದ ಪ್ರಕಾರ, 24ನೇ ಹಣಕಾಸು ವರ್ಷದ ಆರಂಭದ ವೇಳೆ ಷೇರುಗಳ ಮೌಲ್ಯದಲ್ಲಿ ಚೇತರಿಕೆಯಾಗುವ ಸಾಧ್ಯತೆ ಇದೆ.

ಉತ್ತಮ ಗಳಿಕೆಯೊಂದಿಗೆ ಮಾರ್ಜಿನ್ ಪ್ರೊಫೈಲ್​ನಲ್ಲಿ ಸ್ಥಿರವಾದ ಸುಧಾರಣೆಯು ಮುಂದಿನ ವರ್ಷ ಲಾಭದಾಯಕ ವಹಿವಾಟು ನಡೆಸಬಹುದು ಎಂಬ ಸುಳಿವು ನೀಡಿದೆ ಎಂದು ಐಸಿಐಸಿಐ ಸೆಕ್ಯುರಿಟೀಸ್ ವರದಿ ಹೇಳಿದೆ. 1,285ರ ಟಾರ್ಗೆಟ್ ದರದೊಂದಿಗೆ ಷೇರುಗಳನ್ನು ಖರೀದಿಸಬಹುದು. ಇದು ಬುಧವಾರದ ಕ್ಲೋಸಿಂಗ್ ಅವಧಿಯ ಮುಖಬೆಲೆ 601.45 ರೂ.ಗಿಂತ ಶೇಕಡಾ 113.65ರಷ್ಟು ಹೆಚ್ಚಿರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಷೇರುಪೇಟೆಯಲ್ಲಿ ಅನಿಶ್ಚಿತತೆ

ಷೇರುಪೇಟೆಯಲ್ಲಿ ಕಳೆದ ಕೆಲವು ದಿನಗಳಿಂದ ಅನಿಶ್ಚಿತತೆ ಮುಖಮಾಡಿದೆ. ಬುಧವಾರದ ವಹಿವಾಟಿನಲ್ಲಿ ಬಿಎಸ್​ಇ ಸೆನ್ಸೆಕ್ಸ್ 62 ಸಾವಿರ ಗಡಿ ದಾಟಿತ್ತು. ಆದರೆ ಮತ್ತೆ ಇಳಿಕೆಯೊಂದಿಗೆ ವಹಿವಾಟು ಮುಗಿಸಿತ್ತು. ನಿಫ್ಟಿಯೂ ಕುಸಿತ ಕಂಡಿತ್ತು. ವಿದೇಶಿ ಹೂಡಿಕೆದಾರರು ಒಮ್ಮೆ ದೇಶೀಯ ಷೇರುಪೇಟೆಯಲ್ಲಿ ಹೂಡಿಕೆ ಮಾಡಿದರೆ ಮತ್ತೆ ಹೂಡಿಕೆ ವಾಪಸ್ ಪಡೆಯುತ್ತಿದ್ದಾರೆ. ಹೀಗಾಗಿ ಸದ್ಯದ ಮಟ್ಟಿಗೆ ಈ ಏರಿಳಿತದ ಟ್ರೆಂಡ್ ಕೆಲವು ದಿನಗಳ ಮಟ್ಟಿಗೆ ಮುಂದುವರಿಯುವ ಸಾಧ್ಯತೆ ಇದೆ ಎಂದಿದ್ದಾರೆ ಮಾರುಕಟ್ಟೆ ತಜ್ಞರು. ಕೆಲವು ದಿನಗಳ ಹಿಂದಷ್ಟೇ ಎಲ್​ಐಸಿ ಷೇರು ಮೌಲ್ಯದಲ್ಲಿ ಜಿಗಿತವಾಗಿದ್ದನ್ನು ಗಮನಿಸಬಹುದು. ಐಪಿಒ ಆದಾಗಿನಿಂದಲೂ ಕಂಪನಿಯ ಷೇರುಗಳ ಮೌಲ್ಯದಲ್ಲಿ ಏರಿಕೆಯೇ ಕಂಡುಬಂದಿರಲಿಲ್ಲ. ತಿಂಗಳುಗಳ ಬಳಿಕ ಮೊದಲ ಬಾರಿಗೆ ಷೇರು ಮೌಲ್ಯದಲ್ಲಿ ಹೆಚ್ಚಳ ಕಂಡುಬಂದಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ ಪ್ರತಿಭಟನೆಕಾರರು
ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ ಪ್ರತಿಭಟನೆಕಾರರು
ನ್ಯಾಯಾಧೀಶರ ಹನಿಟ್ರ್ಯಾಪ್​ಗೆ​ ಯತ್ನ? ರಾಜಣ್ಣ ಸ್ಪಷ್ಟನೆ
ನ್ಯಾಯಾಧೀಶರ ಹನಿಟ್ರ್ಯಾಪ್​ಗೆ​ ಯತ್ನ? ರಾಜಣ್ಣ ಸ್ಪಷ್ಟನೆ
ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ಳು: ರಾಜಣ್ಣ
ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ಳು: ರಾಜಣ್ಣ
ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್
ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ಬ್ರೇಕ್​ ಫೇಲ್​ ಆಗಿ ಮರಕ್ಕೆ ಡಿಕ್ಕಿ
ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ಬ್ರೇಕ್​ ಫೇಲ್​ ಆಗಿ ಮರಕ್ಕೆ ಡಿಕ್ಕಿ
ಫೆಲೈನ್ ಪ್ಯಾನ್​ಲ್ಯೂಕೊಪೇನಿಯಾ ವೈರಸ್ ಸೋಂಕು ಬೆಕ್ಕುಗಳಲ್ಲಿ ಸಾಂಕ್ರಾಮಿಕ!
ಫೆಲೈನ್ ಪ್ಯಾನ್​ಲ್ಯೂಕೊಪೇನಿಯಾ ವೈರಸ್ ಸೋಂಕು ಬೆಕ್ಕುಗಳಲ್ಲಿ ಸಾಂಕ್ರಾಮಿಕ!
ಸೀರೆಯುಟ್ಟು, ಚಪ್ಪಲಿ ಧರಿಸಿ ಲಂಡನ್​ನ ಪಾರ್ಕ್​ನಲ್ಲಿ ಮಮತಾ ಜಾಗಿಂಗ್
ಸೀರೆಯುಟ್ಟು, ಚಪ್ಪಲಿ ಧರಿಸಿ ಲಂಡನ್​ನ ಪಾರ್ಕ್​ನಲ್ಲಿ ಮಮತಾ ಜಾಗಿಂಗ್
ದಾವಣಗೆರೆ: ನೋಡ ನೋಡ್ತಿದ್ದಂತೆಯೇ ಸುಟ್ಟು ಕರಕಲಾದ ಕಾರುಗಳು
ದಾವಣಗೆರೆ: ನೋಡ ನೋಡ್ತಿದ್ದಂತೆಯೇ ಸುಟ್ಟು ಕರಕಲಾದ ಕಾರುಗಳು