Camel Milk Benefits: ಒಂಟೆ ಹಾಲು ಮಧುಮೇಹಿಗಳಿಗೆ ಎಷ್ಟು ಪ್ರಯೋಜನಕಾರಿ ಎಂದು ತಿಳಿದಿದೆಯೇ?
ಪ್ರತಿ 4 ಕಪ್ ಒಂಟೆ ಹಾಲು 52 ಯೂನಿಟ್ ಇನ್ಸುಲಿನ್‌ಗೆ ಸಮನಾಗಿರುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಆದ್ದರಿಂದ ಮಧುಮೇಹಿಗಳು ದಿನಕ್ಕೆ 2 ಕಪ್ ಅಥವಾ 500 ಮಿಲಿ ಒಂಟೆ ಹಾಲು ಕುಡಿಯಬೇಕೆಂದು ಅನೇಕ ವೈದ್ಯರು ಸಲಹೆ ನೀಡುತ್ತಾರೆ.
ನೀವು ಮಧುಮೇಹದಿಂದ ಸಾಕಷ್ಟು ವರ್ಷಗಳಿಂದ ಬಳಲುತ್ತಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇನ್ಸುಲಿನ್ ಚುಚ್ಚುಮದ್ದು ಮತ್ತು ಔಷಧಿಗಳ ಮೇಲೆ ಅವಲಂಬಿತವಾಗಿದ್ದರೆ ಒಂಟೆ ಹಾಲನ್ನು ಪ್ರಯತ್ನಿಸಿ. ಇದು ಮಧುಮೇಹಿಗಳ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಾಕಷ್ಟು ಪ್ರಯೋಜನಕಾರಿಯಾಗಿದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಆದರೆ ಒಂಟೆ ಹಾಲು ಎಲ್ಲಿ ಸಿಗುತ್ತದೆ ಎಂಬ ಯೋಚನೆ ನಿಮ್ಮಲ್ಲಿದ್ದರೆ ಈ ಕೂಡಲೇ ಬಿಟ್ಟು ಬಿಡಿ. ಮೊಸರನ್ನು ಹೋಲುವ ಈ ಹಾಲು ಆನ್‌ಲೈನ್‌ನಲ್ಲಿ ಮಿಲ್ಕ್ ಪೌಡರ್ ರೂಪದಲ್ಲಿ ಲಭ್ಯವಿದೆ.
ಟೈಪ್ 1 ಮತ್ತು ಟೈಪ್ 2 ಮಧುಮೇಹ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಾಯಕವಾಗಿದೆ. ವಿವಿಧ ಅಧ್ಯಯನಗಳ ಪ್ರಕಾರ, ಒಂಟೆ ಹಾಲು ಇನ್ಸುಲಿನ್ ತರಹದ ಪ್ರೋಟೀನ್‌ಗಳನ್ನು ಹೊಂದಿದ್ದು ಅದು ಅದರ ಆಂಟಿಡಯಾಬಿಟಿಕ್ ಚಟುವಟಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ಒಂಟೆ ಹಾಲು ಪೌಷ್ಟಿಕಾಂಶ ಮತ್ತು ಪೋಷಣೆಯಿಂದ ಸಮೃದ್ಧವಾಗಿರುವುದರಿಂದ, ಈಗ ಇದನ್ನು ಅನೇಕ ದೇಶಗಳಲ್ಲಿ ಉದ್ಯಮವಾಗಿಸಿಕೊಂಡಿದ್ದಾರೆ. ಆದ್ದರಿಂದ ಆನ್ಲೈನ್ ಮೂಲಕವು ಕೂಡ ಒಂಟೆ ಹಾಲಿನ ಪೌಡರ್ನ್ನು ನೀವು ಖರೀದಿಸಬಹುದು.
ಮಧುಮೇಹಿಗಳಿಗೆ ಒಂಟೆ ಹಾಲು ಹೇಗೆ ಸಹಾಯ ಮಾಡುತ್ತದೆ?
ಒಂಟೆಯ ಹಾಲಿನಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿರುವುದರಿಂದ ಇದು ಅಧಿಕ ರಕ್ತದೊತ್ತಡ ಮತ್ತು ಆಂಟಿಮೈಕ್ರೊಬಿಯಲ್ ವಿರುದ್ಧ ಹೋರಾಡುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ನ ಸಂಶೋಧನೆಯ ಪ್ರಕಾರ ಒಂಟೆಯ ಹಾಲು ಪ್ರೋಟೀನ್, ಲ್ಯಾಕ್ಟೋಸ್ ಮತ್ತು ಕ್ಯಾಲ್ಸಿಯಂ ಹೊಂದಿದ್ದು, ಜೊತೆಗೆ ಹೆಚ್ಚಿನ ಮಟ್ಟದ ವಿಟಮಿನ್ ಸಿ, ಅಗತ್ಯ ಖನಿಜಗಳು ಮತ್ತು ಹೆಚ್ಚು ಜೀರ್ಣವಾಗುವ ಗುಣಮಟ್ಟವನ್ನು ಹೊಂದಿದೆ ಎಂದು ತಿಳಿದು ಬಂದಿದೆ. ಒಂಟೆ ಹಾಲು ಪ್ರತಿ 4 ಕಪ್‌ಗಳಿಗೆ 52 ಯೂನಿಟ್ ಇನ್ಸುಲಿನ್‌ಗೆ ಸಮನಾಗಿರುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.
ಇದನ್ನೂ ಓದಿ: ಬೆಳಗ್ಗೆ ಏಳುತ್ತಲೇ ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮಗೆ ಮಧುಮೇಹವಿರಬಹುದು, ಪರೀಕ್ಷೆ ಮಾಡಿಸಿಕೊಳ್ಳಿ
ಟೈಪ್ 2 ಮಧುಮೇಹ ಹೊಂದಿರುವ 20 ವಯಸ್ಕರಲ್ಲಿ ಎರಡು ತಿಂಗಳ ಕಾಲ ನಡೆಸಿದ ಅಧ್ಯಯನವು 2 ಕಪ್ ಒಂಟೆ ಹಾಲನ್ನು ಕುಡಿಯುವವರಲ್ಲಿ ಅವರ ಇನ್ಸುಲಿನ್ ಸಂವೇದನೆ ಸುಧಾರಿಸಿದೆ ಎಂದು ಹೇಳಿದೆ. ಮಧುಮೇಹ ಇರುವವರಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ದಿನಕ್ಕೆ 2 ಕಪ್ ಅಥವಾ 500 ಮಿಲಿ ಒಂಟೆ ಹಾಲು ಶಿಫಾರಸು ಮಾಡಬೇಕೆಂದು ಅನೇಕ ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಅಲ್ಲದೆ, ಒಂಟೆ ಹಾಲಿನಲ್ಲಿ ಆಂಟಿಆಕ್ಸಿಡೆಂಟ್ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ, ಉರಿಯೂತದ ಮತ್ತು ರೋಗನಿರೋಧಕ-ಉತ್ತೇಜಿಸುವ ಗುಣಲಕ್ಷಣಗಳೊಂದಿಗೆ ಮೇದೋಜ್ಜೀರಕ ಗ್ರಂಥಿಯಲ್ಲಿನ ಬೀಟಾ ಕೋಶಗಳ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಹಾಲೊಡಕು ಪ್ರೋಟೀನ್ ಗ್ಲುಟಾಥಿಯೋನ್ ಪ್ರಮಾಣವನ್ನು ಸುಧಾರಿಸುವ ಮೂಲಕ ಆಮ್ಲಜನಕ ರಾಡಿಕಲ್ಗಳ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:29 pm, Tue, 28 February 23