AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Diabetes: ಬೆಳಗ್ಗೆ ಏಳುತ್ತಲೇ ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮಗೆ ಮಧುಮೇಹವಿರಬಹುದು, ಪರೀಕ್ಷೆ ಮಾಡಿಸಿಕೊಳ್ಳಿ

ಮಧುಮೇಹ(Diabetes) ಹಾಗೂ ಅಧಿಕ ರಕ್ತದೊತ್ತಡ(Blood Pressure)ವು ಜೀವನಶೈಲಿಗೆ ಸಂಬಂಧಿಸಿದ ಅತಿ ಗಂಭೀರ ಕಾಯಿಲೆಯಾಗಿದೆ. ಆತಂಕಕಾರಿ ವಿಷಯವೆಂದರೆ ಈ ರೋಗಲಕ್ಷಣಗಳು ಮೊದಲೇ ತಿಳಿಯುವುದಿಲ್ಲ.

Diabetes: ಬೆಳಗ್ಗೆ ಏಳುತ್ತಲೇ ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮಗೆ ಮಧುಮೇಹವಿರಬಹುದು, ಪರೀಕ್ಷೆ ಮಾಡಿಸಿಕೊಳ್ಳಿ
ಮಧುಮೇಹ
ನಯನಾ ರಾಜೀವ್
|

Updated on: Feb 28, 2023 | 8:00 AM

Share

ಮಧುಮೇಹ(Diabetes) ಹಾಗೂ ಅಧಿಕ ರಕ್ತದೊತ್ತಡ(Blood Pressure)ವು ಜೀವನಶೈಲಿಗೆ ಸಂಬಂಧಿಸಿದ ಅತಿ ಗಂಭೀರ ಕಾಯಿಲೆಯಾಗಿದೆ. ಆತಂಕಕಾರಿ ವಿಷಯವೆಂದರೆ ಈ ರೋಗಲಕ್ಷಣಗಳು ಮೊದಲೇ ತಿಳಿಯುವುದಿಲ್ಲ. ಮಧುಮೇಹ, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳನ್ನು ಸೈಲೆಂಟ್ ಕಿಲ್ಲರ್ಸ್ ಎಂದು ಕರೆಯಲಾಗುತ್ತದೆ. ಬೇರೆ ಕಾಯಿಲೆಗಳಂತೆ ಮಧುಮೇಹವೂ ಕೆಲವು ಲಕ್ಷಣಗಳನ್ನು ತೋರಿಸುತ್ತದೆ ಎನ್ನುತ್ತಾರೆ ವೈದ್ಯರು. ನೋಡಲು ಸಾಮಾನ್ಯವಾಗಿದ್ದರೂ, ಕೆಲವು ಲಕ್ಷಣಗಳು ಗೋಚರಿಸಿದರೆ ಅದನ್ನು ನೆಗ್ಲೆಕ್ಟ್​ ಮಾಡಬೇಡಿ.

ಬಾಯಿ ಒಣಗುವುದು, ವಿಪರೀತ ದಾಹ ಸಾಮಾನ್ಯವಾಗಿ ಎಲ್ಲರೂ ಬೆಳಗ್ಗೆ ಸಂಪೂರ್ಣವಾಗಿ ಫ್ರೆಶ್ ಆಗಿ ಏಳುತ್ತಾರೆ. ಆದರೆ ಯಾವುದೇ ರೀತಿಯ ಅಸಹಜತೆ ಗೋಚರಿಸಿದರೆ ಆಗ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಬೆಳಿಗ್ಗೆ ಬಾಯಿ ಒಣಗಿದ್ದರೆ ಮತ್ತು ಈ ಸಮಸ್ಯೆಯು ನಿಯಮಿತವಾಗಿ ಮುಂದುವರಿದರೆ, ನಂತರ ಅದರ ಬಗ್ಗೆ ಗಮನ ಹರಿಸಬೇಕು. ಆದಾಗ್ಯೂ, ಬಾಯಿ ಒಣಗುವುದು ಕೂಡ ಇರಬಹುದು. ಮಧುಮೇಹವನ್ನು ಖಚಿತಪಡಿಸಿಕೊಳ್ಳಲು ತಪಾಸಣೆಯ ಅಗತ್ಯವಿದೆ.

ಮತ್ತಷ್ಟು ಓದಿ: Diabetes: ಮೊದಲ ಬಾರಿಗೆ ಮಧುಮೇಹ ಪತ್ತೆಯಾಗಿದ್ದು ಯಾವ ದೇಶದಲ್ಲಿ, ಯಾವಾಗ?, ಲಕ್ಷಣಗಳು ಏನಿದ್ದವು?

ವಾಕರಿಕೆ ಭಾವನೆ ಇದು ಮಧುಮೇಹದ ಸಂಭವನೀಯ ಲಕ್ಷಣವಾಗಿದೆ. ಬೆಳಗ್ಗೆ ವಾಂತಿಯಾಗುತ್ತಿದೆ ಎಂದಾದರೆ ಮಧುಮೇಹದ ಸಮಸ್ಯೆಯಾಗಿರಬಹುದು. ಸಾಮಾನ್ಯವಾಗಿ ಗರ್ಭಿಣಿಯರಿಗೆ ವಾಂತಿಯಂತಹ ಸಮಸ್ಯೆಗಳು ಬರಬಹುದು ಎನ್ನುತ್ತಾರೆ ವೈದ್ಯರು. ಆದರೆ ಇದು ಮಧುಮೇಹ ರೋಗಿಗಳಲ್ಲಿ ಡಯಾಬಿಟಿಕ್ ಕೀಟೋಆಸಿಡೋಸಿಸ್ ಸಮಸ್ಯೆಯಾಗಿರಬಹುದು.

ಮಂದ ದೃಷ್ಟಿ ಬೆಳಗ್ಗೆ ಕಣ್ಣು ತೆರೆದಾಗ ನಿಮಗೆ ಸ್ಪಷ್ಟವಾಗಿ ಕಾಣಿಸದಿದ್ದರೆ, ಅದು ಮಧುಮೇಹದ ಲಕ್ಷಣವಾಗಿರಬಹುದು. ರಕ್ತದಲ್ಲಿನ ಸಕ್ಕರೆಯ ಹೆಚ್ಚಳದಿಂದಾಗಿ, ಕಣ್ಣುಗಳ ಮಸೂರದ ಗಾತ್ರವು ಸ್ವಲ್ಪ ದೊಡ್ಡದಾಗಬಹುದು. ಇದು ಅಸ್ಪಷ್ಟತೆ ಕಾಣಿಸಿಕೊಳ್ಳಲು ಕಾರಣವಾಗುತ್ತದೆ.

ಕಣ್ಣುಗಳಲ್ಲಿ ಊತ ಒಂದೊಮ್ಮೆ ರಕ್ತದಲ್ಲಿ ಸಕ್ಕರೆ ಮಟ್ಟವು ಅಧಿಕವಾಗಿದ್ದರೆ ಕಣ್ಣುಗಳಿಂದ ದ್ರವವು ಹೊರಬರುತ್ತದೆ. ಕೆಲವೊಮ್ಮೆ ಹಾಗೆಯೇ ಉಳಿಯುತ್ತದೆ ಅದು ಕಣ್ಣುಗಳಲ್ಲಿ ಊತವನ್ನು ಉಂಟುಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ