Alcohol consumption: ಆಲ್ಕೋಹಾಲ್ ಸೇವನೆಯು ಈ ಕಾಯಿಲೆಯನ್ನುಂಟು ಮಾಡುತ್ತದೆ: ಸಂಶೋಧನೆ
ಆಲ್ಕೋಹಾಲ್ ಬಳಕೆಯ ಅಸ್ವಸ್ಥತೆಯು ಅಲ್ಝೆಮರ್ ಕಾಯಿಲೆಗೆ ಅಪಾಯಕಾರಿ ಅಂಶವಾಗಿದೆ ಎಂದು ಪ್ರಸ್ತುತ ಸಂಶೋಧನೆಗಳು ಸೂಚಿಸುತ್ತವೆ, ಆಲ್ಕೋಹಾಲ್ ಸೇವನೆಯ ಅಸ್ವಸ್ಥತೆಯು ಈ ಅನಾರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ಧರಿಸಲು ಹೆಚ್ಚಿನ ಅಧ್ಯಯನದ ಅಗತ್ಯವಿದೆ.
ಆಲ್ಕೋಹಾಲ್ ಬಳಕೆಯ ಅಸ್ವಸ್ಥತೆಯು ಅಲ್ಝೆಮರ್ ಕಾಯಿಲೆಗೆ ಅಪಾಯಕಾರಿ ಅಂಶವಾಗಿದೆ ಎಂದು ಪ್ರಸ್ತುತ ಸಂಶೋಧನೆಗಳು ಸೂಚಿಸುತ್ತವೆ, ಆಲ್ಕೋಹಾಲ್ ಸೇವನೆಯ ಅಸ್ವಸ್ಥತೆಯು ಈ ಅನಾರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ಧರಿಸಲು ಹೆಚ್ಚಿನ ಅಧ್ಯಯನದ ಅಗತ್ಯವಿದೆ. ಅಲ್ಝೆಮರ್ಸ್ ಅಸೋಸಿಯೇಷನ್ ಪ್ರಕಾರ ಅಲ್ಝೆಮರ್ ಕಾಯಿಲೆಯು ಶೇಕಡಾ 60 ರಿಂದ 80% ನಷ್ಟು ಬುದ್ಧಿಮಾಂದ್ಯತೆಯ ಪ್ರಕರಣಗಳಿಗೆ ಕಾರಣವಾಗಿದೆ. ಇದು ಅತ್ಯಂತ ಪ್ರಚಲಿತ ವಿಧವಾಗಿದೆ. ಆಲ್ಕೋಹಾಲ್ ಬಳಕೆಯ ಅಸ್ವಸ್ಥತೆಯು ಅಲ್ಝೆಮರ್ ಕಾಯಿಲೆಗೆ ಅಪಾಯಕಾರಿ ಅಂಶವಾಗಿದೆ ಎಂದು ಪ್ರಸ್ತುತ ಸಂಶೋಧನೆಗಳು ಸೂಚಿಸುತ್ತವೆಯಾದರೂ, ಆಲ್ಕೋಹಾಲ್ ಸೇವನೆಯ ಅಸ್ವಸ್ಥತೆಯು ಈ ಅನಾರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ಧರಿಸಲು ಹೆಚ್ಚಿನ ಅಧ್ಯಯನದ ಅಗತ್ಯವಿದೆ.
ಇತ್ತೀಚಿನ ಪೂರ್ವಭಾವಿ ಅಧ್ಯಯನದಲ್ಲಿ, ವೆಕ್ ಫಾರೆಸ್ಟ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ಕಡಿಮೆ ಪ್ರಮಾಣದ ಆಲ್ಕೋಹಾಲ್ ಸೇವನೆಯು ಮೆದುಳಿನ ಕ್ಷೀಣತೆಯನ್ನು ವೇಗಗೊಳಿಸುತ್ತದೆ, ಮೆದುಳಿನ ಕೋಶಗಳ ನಷ್ಟ ಹಾಗೂ ಅಮಿಲಾಯ್ಡ್ ಪ್ಲೇಕ್‌ಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಈ ಸಂಶೋಧನೆಗಳು ಆಲ್ಕೋಹಾಲ್ ಸೇವನೆಯು ಅಲ್ಝೆಮರ್ ಕಾಯಿಲೆಯ ಕ್ಯಾಸ್ಕೇಡ್‌ನ್ನು ಅದರ ಆರಂಭಿಕ ಹಂತಗಳಲ್ಲಿ ವೇಗಗೊಳಿಸಬಹುದು ಎಂದು ಸೂಚಿಸುತ್ತದೆ. ಎಂದು ವೇಕ್ ಫಾರೆಸ್ಟ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಮೆಡಿಸಿನ್‌ನ ಶರೀರಶಾಸ್ತ ಮತ್ತು ಔಷಧಸಾಸ್ತದ ಸಹಾಯಕ ಪ್ರಾಧ್ಯಾಪಕರಾದ ಶಾನನ್ ಮೆಕಾಲೆ ಹೇಳಿದರು.
ಅಲ್ಝೆಮರ್ ಕಾಯಿಲೆಯ ಅಧ್ಯಯನವನ್ನು ಇಲಿಗಳ ಮೇಲೆ ಪ್ರಯೋಗಿಸುವ ಮೂಲಕ ಮಾಡಲಾಯಿತು. ಇಲ್ಲಿ ಇಳಿಗಳಿಗೆ 10 ವಾರಗಳ ಕಾಲ ನೀರು ಅಥವಾ ಮಧ್ಯವನ್ನು ಕುಡಿಯುವ ಆಯ್ಕೆಯನ್ನು ನೀಡಲಾಯಿತು. ಆಲ್ಕೋಹಾಲ್ ಸೇವನೆಯು ಮಾನವನ ನಡವಳಿಕೆಯನ್ನು ಅನುಸರಿಸುತ್ತದೆ. ನಂತರ ಅವರು ಸ್ವಯಂ ಪ್ರೇರಿತ, ಮಧ್ಯಮ ಪ್ರಮಾಣದ ಸೇವನೆಯು ಆರೋಗ್ಯಕರ ಮೆದುಳಿನ ಕಾರ್ಯ ಮತ್ತು ನಡವಳಿಕೆಯನ್ನು ಹೇಗೆ ಬದಲಾಯಿಸಿತು ಮತ್ತು ಅಲ್ಝೆಮರ್ ಕಾಯಿಲೆಯ ಆರಂಭಿಕ ಹಂತಗಳಿಗೆ ಸಂಬಂಧಿಸಿದ ರೋಗ ಲಕ್ಷಣವನ್ನು ಅದು ಹೇಗೆ ಬದಲಾಯಿಸಿತು ಎಂಬುದನ್ನು ಪರಿಶೋಧಿಸಿದರು.
ಇದನ್ನೂ ಓದಿ: Lifestyle: ನಮಗಾಗಿ ನಾವು ಬದುಕೋದು ಹೇಗೆ? ಉತ್ತಮ ಜೀವನಕ್ಕಾಗಿ ಈ ಸರಳ ಸೂತ್ರಗಳನ್ನು ಪಾಲಿಸಿ
ಆಲ್ಕೋಹಾಲ್ ಸೇವನೆಯು ಮೆದುಳಿನ ಕ್ಷೀಣತೆಯನ್ನು ಹೆಚ್ಚಿಸುವುದರ ಜೊತೆಗೆ ಅದು ಹೆಚ್ಚಿನ ಸಂಖ್ಯೆಯ ಸಣ್ಣ ಪ್ಲೇಕ್‌ಗಳನ್ನು ಒಳಗೊಂಡಂತೆ ಹೆಚ್ಚಿನ ಸಂಖ್ಯೆಯ ಅಮಿಲಾಯ್ಡ್ ಪ್ಲೇಕ್‌ಗಳನ್ನು ಉಂಟು ಮಾಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ದೀರ್ಘಕಾಲದ ಆಲ್ಕೋಹಾಲ್ ಸೇವನೆಯು ಮೆದುಳು ಮತ್ತು ಬಾಹ್ಯ ಚಯಾಪಚಯದ ಮೇಲೆ ಪರಿಣಾಮ ಬೀರುತ್ತದೆ. ಇದು ಅಲ್ಝೆಮರ್ ಕಾಯಿಲೆಯನ್ನು ವೇಗಗೊಳಿಸಲು ಇನ್ನೊಂದು ಮಾರ್ಗವಾಗಿದೆ. ರಕ್ತದಲ್ಲಿ ಸಕ್ಕರೆ ಮಟ್ಟದ ಹೆಚ್ಚಳವು ಅಮಿಲಾಯ್ಡ್ ಬೀಟಾ ಮತ್ತು ಅಮಿಲಾಯ್ಡ್ ಪ್ಲೇಕ್‌ಗಳನ್ನು ಹೆಚ್ಚಿಸುತ್ತದೆ ಎಂದು ಎಂದು ಮೆಕಾಲೆ ಹೇಳಿದರು.
ಪ್ರಸ್ತುತ ಅಧ್ಯಯನದಲ್ಲಿ ಮದ್ಯಸೇವನೆ ರಕ್ತದಲ್ಲಿನ ಸಕ್ಕರೆ ಅಂಶ ಮತ್ತು ಇನ್ಸುಲಿನ್ ಪ್ರತಿರೋಧಕವನ್ನು ಹೆಚ್ಚಿಸುತ್ತದೆ. ಇದು ಅಲ್ಝೆಮರ್ ಕಾಯಿಲೆಗೆ ಮಾತ್ರವಲ್ಲದೆ ಟೈಪ್ 2 ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಯಂತಹ ಇತರ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ, ಹಾಗೂ ಮಧ್ಯಮ ಆಲ್ಕೋಹಾಲ್ ಸೇವನೆಯು ಆತಂಕ ಮತ್ತು ಬುದ್ಧಿಮಾಂದ್ಯತೆಗೆ ಸಂಬಂಧಿಸಿದ ನಡವಳಿಕೆಗೆ ಕಾರಣವಾಗುತ್ತದೆ ಎಂದು ಸಂಶೋಧನೆವು ಕಂಡುಹಿಡಿದಿದೆ.
‘ಈ ಪೂರ್ವಭಾವಿ ಸಂಶೋಧನೆಯು ಆಲ್ಕೋಹಾಲ್‌ನ ಮಧ್ಯಮ ಪ್ರಮಾಣದ ಸೇವನೆಯು ಮಿದುಳಿನ ಗಾಯಕ್ಕೆ ಕಾರಣವಾಗಬಹುದು ಎಂಬುದನ್ನು ಸೂಚಿಸುತ್ತದೆ ಹಾಗೂ ಆಲ್ಕೋಹಾಲ್ ಸೇವನೆಯು ಅಲ್ಝೆಮರ್ ಕಾಯಿಲೆ ಬುದ್ಧಿಮಾಂದ್ಯತೆಗೆ ಮಾರ್ಪಡಾಗಬಗುದಾದ ಅಪಾಯಕಾರಿ ಅಂಶವಾಗಿದೆ’ ಎಂದು ಮೆಕಾಲೆ ಹೆಳಿದರು.