ಈ ಲಕ್ಷಣಗಳು ನಿಮ್ಮ ದೇಹದಲ್ಲಿ ಕಂಡುಬಂದರೆ ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂದರ್ಥ

ಮೂತ್ರಪಿಂಡದ ವಿಫಲವಾಗುವ ಮುನ್ನ ಯಾವ ರೀತಿ ನಿಮ್ಮ ದೇಹಕ್ಕೆ ಎಚ್ಚರಿಕೆ ನೀಡುತ್ತದೆ ಎಂಬ ಮಾಹಿತಿ ಇಲ್ಲಿದೆ

ಈ ಲಕ್ಷಣಗಳು ನಿಮ್ಮ ದೇಹದಲ್ಲಿ ಕಂಡುಬಂದರೆ ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂದರ್ಥ
ಸಾಂದರ್ಭಿಕ ಚಿತ್ರImage Credit source: Francisco Kidney
Follow us
ಅಕ್ಷತಾ ವರ್ಕಾಡಿ
| Updated By: Digi Tech Desk

Updated on:Apr 04, 2023 | 11:44 AM

ಮೂತ್ರಕೋಶ ಅಥವಾ ಮೂತ್ರಪಿಂಡಗಳು ದೇಹದ ಅವಿಭಾಜ್ಯ ಅಂಗವಾಗಿದೆ. ಇದು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ನೀವು ಆರೋಗ್ಯವಾಗಿರಲು ಸಾಧ್ಯ. ಆದರೆ ಈಗಿನ ಬದಲಾದ ಜೀವನಶೈಲಿ ಅಂದರೆ ಒತ್ತಡ ಹಾಗೂ ಕಳಪೆ ಆಹಾರ ಕ್ರಮದಿಂದಾಗಿ ದೇಹದಲ್ಲಿನ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ. ಪರಿಣಾಮ ಜನರು ವೇಗವಾಗಿ ಕಾಯಿಲೆಗೆ ತುತ್ತಾಗುತ್ತದೆ. ನಿಮ್ಮ ದೈನಂದಿನ ಜೀವನಶೈಲಿಯಲ್ಲಿ ದೇಹದಲ್ಲಿ ಉಂಟಾಗುವ ಕೆಲವು ಬದಲಾವಣೆಗಳು ನಿಮ್ಮ ಮೂತ್ರ ಪಿಂಡವನ್ನು ದುರ್ಬಲವಾಗಿಸಬಹುದು. ಆದ್ದರಿಂದ ಈ ಕೆಳಗಿನ ಲಕ್ಷಣಗಳು ನಿಮ್ಮ ದೇಹದಲ್ಲಿ ಕಂಡುಬಂದರೆ ನಿರ್ಲಕ್ಷಿಸದಿರಿ.

ನಿಮ್ಮ ದೇಹದಲ್ಲಿ ಬೇಡವಾದ ವಸ್ತುವನ್ನು ಮಲ ಮೂತ್ರದ ಮೂಲಕ ಹೊರ ಹಾಕುವ ಕಾರ್ಯವನ್ನು ಈ ಮೂತ್ರಪಿಂಡಗಳು ಮಾಡುತ್ತದೆ. ಆದರೆ ಈ ಕೆಲಸವನ್ನು ಮೂತ್ರ ಪಿಂಡಗಳು ಸ್ಥಗಿತಗೊಳಿಸಿದರೆ ರಕ್ತ ಶುದ್ದಿಯಾಗದು ಮತ್ತು ಶುದ್ಧಿಯಾಗದೇ ಇರುವ ರಕ್ತದಲ್ಲಿರುವ ಟಾಕ್ಸಿನ್​​ಗಳು ಹಾಗೆಯೇ ಉಳಿದು ಹೋಗುತ್ತದೆ. ಕಾಲ ಕ್ರಮೇಣ ರಕ್ತಗಳಲ್ಲಿ ಉಳಿದುಕೊಂಡು ನಿಮ್ಮ ಎರಡೂ ಕಿಡ್ನಿಗಳಿಗೂ ಹಾನಿಯುಂಟು ಮಾಡಬಹುದು.

ಮೂತ್ರಪಿಂಡದ ವಿಫಲವಾಗುವ ಮುನ್ನ ಯಾವ ರೀತಿ ನಿಮ್ಮ ದೇಹಕ್ಕೆ ಎಚ್ಚರಿಕೆ ನೀಡುತ್ತದೆ ಎಂಬ ಮಾಹಿತಿ ಇಲ್ಲಿದೆ:

ಕಿಡ್ನಿಯೂ ವಿಫಲವಾಗುವ ಹಂತದಲ್ಲಿರುವಾಗ ನಿಮಗೆ ಸೂಚನೆಯನ್ನು ನೀಡುತ್ತದೆ. ಅವೆಂದರೆ:

1. ಸದಾ ಆಯಾಸ ಅಥವಾ ಬಳಲಿಕೆಯ ಅನುಭವ:

ರಾತ್ರಿಯಿಡೀ 8 ಗಂಟೆಯ ನಿದ್ದೆಯ ಹೊರತಾಗಿಯೂ ಆಯಾಸದ ಅನುಭವ. ಜೊತೆಗೆ ನಿಮ್ಮ ಕೆಲಸದ ಜಾಗದಲ್ಲಿ ಚಟುವಟಿಕೆಯಿಂದಿರಲು ಆಗದಿರುವುದು. ಇಂತಹ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯಿಸದರಿ.

2. ಅತಿಯಾದ ಚಿಂತೆ ಹಾಗೂ ಕೋಪ:

ನಿಮ್ಮ ದೇಹದಲ್ಲಿ ರಕ್ತವನ್ನು ಶುದ್ಧಿ ಮಾಡುವ ಕಾರ್ಯವನ್ನು ಮೂತ್ರ ಪಿಂಡಗಳು ಮಾಡುತ್ತವೆ. ಆದರೆ ಈ ಕಾರ್ಯಕ್ಕೆ ಅಡ್ಡಿಯಾಗದ ನಿಮ್ಮ ಮೆದುಳು ಸರಿಯಾಗಿ ಕಾರ್ಯ ನಿರ್ವಹಿಸದೇ ಇರಬಹುದು. ಈ ಸಮಯದಲ್ಲಿ ಅತಿಯಾದ ಚಿಂತೆ ಹಾಗೂ ಚಿಕ್ಕ ಚಿಕ್ಕ ವಿಷಯಕ್ಕೆ ಕೋಪ ಬರುವುದು ಮುಂತಾದ ಲಕ್ಷಣಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಅಬ್ಬಾಬ್ಬ.. 24 ವರ್ಷಗಳಿಂದ ಎಳನೀರು ಕುಡಿದು ಜೀವಿಸುತ್ತಿರುವ ವ್ಯಕ್ತಿ, ಇದರಿಂದ ದೂರವಾಯಿತು ಈ ಕಾಯಿಲೆ

3. ವಿಪರೀತ ಸೊಂಟ ನೋವು:

ಸೊಂಟ ನೋವು ವಿವಿಧ ಕಾರಣಗಳಿಗೆ ಉಂಟಾಗಬಹುದು. ಆದರೆ ವಿಪರೀತ ಸೊಂಟ ನೋವು ಉಂಟಾದರೆ ನಿಮ್ಮ ಹತ್ತಿರದ ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯವಾಗಿದೆ.

4. ವಾಕರಿಕೆ:

ವಾಕರಿಕೆ, ಕಡಿಮೆ ಹಸಿವು, ಹೊಟ್ಟೆ ನೋವುಗಳು ಮತ್ತು ಅಜೀರ್ಣ ನಿಮ್ಮ ಮೂತ್ರಪಿಂಡವು ಅಪಾಯದಲ್ಲಿದೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ಇಂತಹ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯಿಸದಿರಿ.

5. ಆಗಾಗ ಮೂತ್ರ ವಿಸರ್ಜನೆ:

ಮೂತ್ರ ನಿಯಂತ್ರಿಸಲು ಸಾಧ್ಯವಾಗದೇ ಇರುವುದು ಕೂಡ ಮೂತ್ರಪಿಂಡದ ಕಾಯಿಲೆಗೆ ಕಾರಣವಾಗಬಹುದು. ಶುಗರ್​​​ ಅತಿಯಾಗಿದ್ದಲೂ ಕೂಡ ಸಮಸ್ಯೆ ಕಂಡುಬರುತ್ತದೆ. ಕಿಡ್ನಿಯ ಫಿಲ್ಟರ್​​ ತನ್ನ ಕೆಲಸ ನಿಲ್ಲಿಸಿದಾಗ ಸೇವಿಸುವ ಯಾವುದೇ ಆಹಾರಗಳು ರಕ್ತದೊಂದಿಗೆ ಸೇರಿ ಅದು ಶುದ್ಧಿಯಾಗದೇ ಇದ್ದಾಗ ಲಾಡರ್​​ ಸೇರುತ್ತದೆ. ಇದು ಆಗಾಗ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:06 pm, Sat, 18 February 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ