World Kidney Day 2022: ಮೂತ್ರಪಿಂಡ ಜೋಪಾನ

ಕಿಡ್ನಿಯ ಬಗೆಗಿನ ಕಾಯಿಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 2006ರಲ್ಲಿ ವಿಶ್ವ ಕಿಡ್ನಿ ದಿನವನ್ನು ಜಾರಿಗೆ ತರಲಾಯಿತು. 

World Kidney Day 2022: ಮೂತ್ರಪಿಂಡ ಜೋಪಾನ
ಪ್ರಾತಿನಿಧಿಕ ಚಿತ್ರImage Credit source: Tv9 Hindi
Follow us
TV9 Web
| Updated By: Pavitra Bhat Jigalemane

Updated on:Mar 10, 2022 | 10:47 AM

ಮಾನವನ ದೇಹದಲ್ಲಿ ಹೃದಯದಷ್ಟೇ ಸೂಕ್ಷ್ಮ ಮತ್ತು ಪ್ರಮುಖ ಅಂಗ ಕಿಡ್ನಿ (Kidney). ದೇಹದಲ್ಲಿ ಪಿಲ್ಟರ್​ನಂತೆ ಕೆಲಸ ಮಾಡುವ ಕಿಡ್ನಿಗಳು ನಿರುಪಯುಕ್ತ ವಸ್ತುಗಳನ್ನು ದೇಹದಿಂದ ಹೊರಹಾಕುವ ಕೆಲಸ ಮಾಡುತ್ತದೆ. ಇಂದಿನ ಬದಲಾದ ಜೀವನಶೈಲಿಯಲ್ಲಿ ಆಹಾರ ಪದ್ಧತಿಗಳು ಕಿಡ್ನಿಯ ಮೇಲೆ ಪರಿಣಾಮ ಬೀರುತ್ತಿವೆ. ಅನೇಕರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅತಿಯಾದ ಆಲ್ಕೂಹಾಲ್​ ಸೇವನೆ, ಜಂಕ್​ ಫುಡ್​ಗಳ ಸೇವನೆ ಕಿಡ್ನಿಗಳಿಗೆ ಹಾನಿಯುಂಟು ಮಾಡುತ್ತದೆ. ಹೀಗಾಗಿ ಕಿಡ್ನಿಗಳ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅಗತ್ಯವಾಗಿದೆ.

ಕಿಡ್ನಿಯ ಕಾರ್ಯವೈಖರಿ, ಅದರ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತೀವರ್ಷ ಮಾರ್ಚ್​ 10ರಂದು ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತದೆ.  ಕಿಡ್ನಿಯ ಬಗೆಗಿನ ಕಾಯಿಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 2006ರಲ್ಲಿ ವಿಶ್ವ ಕಿಡ್ನಿ ದಿನವನ್ನು ಜಾರಿಗೆ ತರಲಾಯಿತು.  ದೇಹದಲ್ಲಿನ ಉಷ್ಣತೆ ಜಾಸ್ತಿಯಾದಾಗ ಅಥವಾ ಲವಣಗಳ ಅಂಶ ಅತಿಯಾದಾಗ ಕಿಡ್ನಿ ಸ್ಟೋನ್​ಗಳಂತಹ ಸಮಸ್ಯೆ ಕಾಡುತ್ತದೆ. ಆದ್ದರಿಂದ ಕೆಲವು ಆಹಾರಗಳು ನಿಮ್ಮನ್ನು ಕಿಡ್ನಿ ಸಮಸ್ಯೆಯಿಂದ ದೂರವಿಡಬಹುದು.

ಕ್ಯಾಬೀಜ್​: ಕಡಿಮೆ ಸೋಡಿಯಂ ಅಂಶವಿರುವ ಎಲೆಕೋಸು ಅಥವಾ ಕ್ಯಾಬೀಜ್​ ವಿಟಮಿನ್ ಕೆ, ಸಿ, ಬಿ 6 ಅನ್ನು ಹೊಂದಿದೆ. ಇದು ಫೈಬರ್ ಮತ್ತು ಫೋಲಿಕ್ ಆಮ್ಲವನ್ನು ಸಹ ಹೊಂದಿದೆ. ಕ್ಯಾಬೀಜ್​ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು ಮತ್ತು ಹೃದಯರಕ್ತನಾಳದ ಆರೋಗ್ಯವನ್ನು ವೃದ್ಧಿಸಲು ಸಹಾಯ ಮಾಡಲು ಬೇಕಾದ  ಫೈಟೊಕೆಮಿಕಲ್‌ಗಳನ್ನು ಹೊಂದಿದೆ. ಕ್ಯಾಬೀಜ್​ ಅನ್ನು ನೀವು ಸೂಪ್​, ಸಲಾಡ್​ಗಳನ್ನು ತಯಾರಿಸಿ ಸೇವಿಸಬಹುದು.

ಕೊತ್ತಂಬರಿ ಬೀಜಗಳು: ಕಿಡ್ನಿ ಸಮಸ್ಯೆಗೆ ಕೊತ್ತಂಬರಿ ಬೀಜಗಳು ಉತ್ತಮ ಆಹಾರವಾಗಿದೆ. ನೀರನೊಂದಿಗೆ ಕೊತ್ತಂಬರಿ ಬೀಜಗಳನ್ನು ಹಾಕಿ ಕುದಿಸಿ ಪ್ತಿದಿನ ಸೇವಿಸಿದರೆ ಕಿಡ್ನಿ ಸಮಸ್ಯೆ ಎದುರಾಗುವುದಿಲ್ಲ. ಮೂತ್ರಕೋಶದ ಸಮಸ್ಯೆಗಳನ್ನೂ ಕೂಡ ಕೊತ್ತಂಬರಿ ಬೀಜಗಳು ಸರಿಪಡಿಸುತ್ತದೆ. ಮೂತ್ರಪಿಂಡಗಳ ಸಮಸ್ಯೆಯನ್ನು ಸರಿಪಡಿಸಿ, ಪಿಲ್ಟರ್​ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.

ಕ್ಯಾನ್ಬೆರಿ ಹಣ್ಣುಗಳು:

ಕ್ರ್ಯಾನ್‌ಬೆರಿ ಹಣ್ಣುಗಳಲ್ಲಿ ಫ್ಲೇವನಾಯ್ಡ್‌ಗಳು ಮತ್ತು ಇತರ ಪಾಲಿಫಿನಾಲ್‌ಗಳಲ್ಲಿ ಉತ್ಕರ್ಷಣ ನಿರೋಧಕವನ್ನು  ಶಕ್ತಿ ಹೊಂದಿದೆ.  ಉರಿಯೂತದ ಗುಣಲಕ್ಷಣಗಳು ಯುಟಿಐಗಳನ್ನು ನಿರ್ವಹಿಸಲು ಉತ್ತಮ ಆಹಾರವಾಗಿದೆ.  ದೀರ್ಘಕಾಲದ ಮೂತ್ರಪಿಂಡದ ಸಮಸ್ಯೆಗಳನ್ನು ಪರಿಹರಿಸಲು ಸಹಾಯಕವಾಗಿದೆ.

ಹೂಕೋಸು:

ಕಿಡ್ನಿ ಆರೋಗ್ಯವನ್ನು ಉತ್ತಮಪಡಿಸಲು ಹೂಕೋಸು ಉತ್ತಮ ತರಕಾರಿಯಾಗಿದೆ.  ಹೇರಳವಾದ ವಿಟಮಿನ್​, ಸಿ, ಕೆ ಮತ್ತು ಬಿಯನ್ನು ಹೊಂದಿರುವ ಹೂಕೋಸು ಕಿಡ್ನಿಯ ಕಾರ್ಯವನ್ನು ಸುಗಮಗೊಳಿಸುತ್ತದೆ. ಹೀಗಾಗಿ ನಿಮ್ಮ ಅಡುಗೆಯಲ್ಲಿ ಹೂಕೋಸನ್ನು ಹೆಚ್ಚು  ಬಳಸಿ.

ಬೆರಿ ಹಣ್ಣಗಳು: ಸ್ಟ್ರಾಬೆರಿ, ಬ್ಲ್ಯೂ ಬೆರಿಯಂತಹ ಹಣ್ಣುಗಳು ಕಿಡ್ನಿಯ ಆರೋಗ್ಯವನ್ನು ಉತ್ತಮಗೊಳಿಸುತ್ತವೆ.  ಯಥೇಚ್ಚವಾದ ಆ್ಯಂಟಿಆಕ್ಸಿಡೆಂಟ್​ಗಳನ್ನು ಹೊಂದಿರುವ ಬೆರಿ ಹಣ್ಣುಗಳು ಕಿಡ್ನಿಯ ಅಪಾಯವನ್ನು ತಡೆಗಟ್ಟುತ್ತದೆ.

 ಇದನ್ನೂ ಓದಿ:

Joint Pain: ಕೀಲು ನೋವಿನ ಸಮಸ್ಯೆಗೆ ಆಯುರ್ವೇದದಲ್ಲಿದೆ ಪರಿಹಾರ: ಇಲ್ಲಿದೆ ಮಾಹಿತಿ

Published On - 10:41 am, Thu, 10 March 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್