ನಿಮಗೆ ಸಬ್ಬಸಿಗೆ ಸೊಪ್ಪು ಇಷ್ಟವಿಲ್ಲದಿದ್ದರೂ ಸೇವಿಸಿ; ಇದರಲ್ಲಿದೆ ಆರೋಗ್ಯ ಪ್ರಯೋಜನಗಳು

ಉಕ್ರೇನ್ ಮತ್ತು ರಷ್ಯಾದಲ್ಲಿ ಇದನ್ನು ಜಾಸ್ತಿ ಬಳಸುತ್ತಾರೆ. ವಾರಕ್ಕೆ ಒಮ್ಮೆಯಾದರೂ ಇದನ್ನ ಸೇವಿಸಬೇಕು. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಹೆಚ್ಚಿದ್ದು, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ನಿಮಗೆ ಸಬ್ಬಸಿಗೆ ಸೊಪ್ಪು ಇಷ್ಟವಿಲ್ಲದಿದ್ದರೂ ಸೇವಿಸಿ; ಇದರಲ್ಲಿದೆ ಆರೋಗ್ಯ ಪ್ರಯೋಜನಗಳು
ಸಬ್ಬಸಿಗೆ ಸೊಪ್ಪು
Follow us
| Updated By: sandhya thejappa

Updated on: Mar 10, 2022 | 11:34 AM

ಸೊಪ್ಪು ಇಷ್ಟಪಡುವವರಿಗೆ ಸಬ್ಬಸಿಗೆ ಸೊಪ್ಪು (Dill Leaves) ಹೆಚ್ಚು ಇಷ್ಟ ಆಗುತ್ತದೆ. ಚಿಕ್ಕ ಸೂಜಿಯಂತೆ ಇದರ ಎಲೆ ಇರುತ್ತದೆ. ಇದು ನಾಲಿಗೆಗೆ ಹೆಚ್ಚು ರುಚಿ ನೀಡುವ ಜೊತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಪರಿಮಳದಿಂದ ಕೂಡಿರುವ ಸಬ್ಬಸಿಗೆಯನ್ನು ಪಲ್ಯ, ಸಾಂಬಾರಿಗೆ ಬಳಸುತ್ತಾರೆ. ಉಕ್ರೇನ್ (Ukraine) ಮತ್ತು ರಷ್ಯಾದಲ್ಲಿ (Russia) ಇದನ್ನು ಜಾಸ್ತಿ ಬಳಸುತ್ತಾರೆ. ವಾರಕ್ಕೆ ಒಮ್ಮೆಯಾದರೂ ಇದನ್ನ ಸೇವಿಸಬೇಕು. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಹೆಚ್ಚಿದ್ದು, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

  1. ತೂಕ ಕಡಿಮೆ: ದೇಹದ ತೂಕ ಇಳಿಸುವವರು ಸಬ್ಬಸಿಗೆ ಸೊಪ್ಪು ಸೇವಿಸಿ. ಇದು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಹೀಗಾಗಿ ತೂಕ ಇಳಿಕೆಯಾಗಲು ಸಹಾಯಕವಾಗುತ್ತದೆ. ಗ್ರೀನ್​ ಟೀ ಜೊತೆ ಸಬ್ಬಸಿಗೆ ಎಲೆಗಳನ್ನು ಸೇರಿಸಿ ಕುಡಿಯಬೇಕು. ಹೀಗೆ ಮಾಡುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್​ನ ಕರಗಿಸುತ್ತದೆ.
  2. ಮೂಳೆಗಳ ಆರೋಗ್ಯ ಕಾಪಾಡುತ್ತದೆ: ದೇಹದ ಮೂಳೆಗಳನ್ನ ಬಲಪಡಿಸಲು ಸಬ್ಬಸಿಗೆ ಸೊಪ್ಪು ಸಹಾಯಕಾರಿ. ಊಟದಲ್ಲಿ ಸಬ್ಬಸಿಗೆ ಸೊಪ್ಪು ಹೆಚ್ಚಾಗಿದ್ದರೆ ಒಳ್ಳೆಯದು. ಸೊಪ್ಪು ಅಥವಾ ಸಾಂಬಾರು ಮಾಡಿ ಸೇವಿಸಿ.
  3. ಎದೆ ಹಾಲು ಹೆಚ್ಚಳ: ಮಗು ಜನಿಸಿದ ನಂತರ ಮಗುವಿಗೆ ಸಾಕಾಗುವಷ್ಟು ಹಾಲು ತಾಯಿ ಎದೆಯಲ್ಲಿ ಇರಲ್ಲ. ಮಗುವಿಗೆ ತಾಯಿ ಹಾಲು ಸಾಕಾಗದೇ ಹಸು ಹಾಲನ್ನು ಕುಡಿಸುವ ಅನಿಮಾರ್ಯ ಬರುತ್ತದೆ. ಹೀಗಾಗಿ ತಾಯಿ ಎದೆ ಹಾಲನ್ನು ಹೆಚ್ಚಿಸಲು ಸಬ್ಬಸಿಗೆ ಸೊಪ್ಪು ಸೇವಿಸಿ.
  4. ಬಿಕ್ಕಳಿಕೆ ಕಡಿಮೆಯಾಗುತ್ತದೆ: ಕೆಲವರಿಗೆ ಪದೇ ಪದೇ ಬಿಕ್ಕಳಿಕೆ ಬರುತ್ತಿರುತ್ತದೆ. ನೀರು ಕುಡಿದಾಗ ಕಡಿಮೆಯಾಗುತ್ತದೆ. ಸ್ವಲ್ಪ ಹೊತ್ತಿನಲ್ಲಿ ಮತ್ತೆ ಬಿಕ್ಕಳಿಕೆ ಶುರುವಾಗುತ್ತದೆ. ಬಿಕ್ಕಳಿಕೆ ಕಡಿಮೆಯಾಗಿಸಲು ಸಬ್ಬಸಿಗೆ ಜಾಸ್ತಿ ಸೇವಿಸಿ.
  5. ನಿದ್ರಾಹೀನತೆ ಸಮಸ್ಯೆ ನಿವಾರಣೆ: ಪ್ರತಿಯೊಬ್ಬರು ದಿನಕ್ಕೆ ಕನಿಷ್ಠ 8 ಗಂಟೆ ನಿದ್ರೆ ಮಾಡಬೇಕು. ಅರೋಗ್ಯವಾಗಿರಲು ನಿದ್ರೆ ಅನಿವಾರ್ಯ. ಆದರೆ ಕೆಲವರು ನಿದ್ರೆ ಇಲ್ಲದೇ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಅಂತವರು ಸಬ್ಬಸಿಗೆ ಸೊಪ್ಪನ್ನು ಜಾಸ್ತಿ ಸೇವಿಸಿ.
  6. ರೋಗ ನಿರೋಧಕ ಶಕ್ತಿ ಹೆಚ್ಚಳ: ಕೊರೊನಾ ಸೋಂಕು ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ಇಲ್ಲದಿದ್ದರೆ ಸೋಂಕು ದೇಹಕ್ಕೆ ಬೇಗ ತಗಲುತ್ತದೆ. ಜೀವಕ್ಕೆ ಅಪಾಯವೂ ಆಗಬಹುದು. ಹೀಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಬ್ಬಸಿಗೆ ಸೊಪ್ಪಿನ ಪಲ್ಯ ಮತ್ತು ಸಾಂಬಾರು ತಿನ್ನಿ.
  7. ಋತುಚಕ್ರ ಸಮಸ್ಯೆ ನಿವಾರಣೆ: ಇತ್ತೀಚೆಗೆ ಮಹಿಳೆಯರು ಋತುಚಕ್ರ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಮಹಿಳೆ ಆರೋಗ್ಯವಾಗಿರಲು ತಿಂಗಳಿಗೊಮ್ಮೆ ಮುಟ್ಟಾಗಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಬಂಜೆತನ ಎದುರಿಸಬೇಕಾಗುವುದು. ಋತುಚಕ್ರ ಸಮಸ್ಯೆ ನಿವಾರಣೆಯಾಗಲು ಸಬ್ಬಸಿಗೆ ಸೊಪ್ಪು ತಿನ್ನಬೇಕು.

    ಇದನ್ನೂ ಓದಿ

    ತಮಿಳಿನ ‘ಹಲಮಿತಿ ಹಬೀಬೋ’ ಹಾಡಿಗೆ ತಾಯಿ ಮಗನ ಸಖತ್​ ಸ್ಟೆಪ್​: ವಿಡಿಯೋ ವೈರಲ್​Stock Market: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1300ಕ್ಕೂ ಹೆಚ್ಚು ಪಾಯಿಂಟ್ಸ್, ನಿಫ್ಟಿ 375 ಪಾಯಿಂಟ್ಸ್ ಹೆಚ್ಚಳ