AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hypercholesterolemia: ಅಧಿಕ ಕೊಲೆಸ್ಟ್ರಾಲ್​ ಮಟ್ಟವನ್ನು ಸುಧಾರಿಸಲು ಇಲ್ಲಿವೆ ಸರಳ ಸಲಹೆಗಳು

ರಕ್ತದಲ್ಲಿನ ಅಧಿಕ ಕೊಲೆಸ್ಟ್ರಾಲ್‌ ಮಟ್ಟವನ್ನು ಹೈಪರ್ಕೊಲೆಸ್ಟರಾಲ್ಮಿಯಾ ಎಂದು ಕರೆಯಲಾಗುತ್ತದೆ. ರಕ್ತದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾದರೆ ಹಲವು ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

Hypercholesterolemia: ಅಧಿಕ ಕೊಲೆಸ್ಟ್ರಾಲ್​ ಮಟ್ಟವನ್ನು ಸುಧಾರಿಸಲು ಇಲ್ಲಿವೆ ಸರಳ ಸಲಹೆಗಳು
ಸಾಂಕೇತಿಕ ಚಿತ್ರ
TV9 Web
| Updated By: Pavitra Bhat Jigalemane|

Updated on: Mar 10, 2022 | 12:33 PM

Share

ರಕ್ತದಲ್ಲಿನ ಅಧಿಕ ಕೊಲೆಸ್ಟ್ರಾಲ್‌ (High Cholesterol) ಮಟ್ಟವನ್ನು ಹೈಪರ್ಕೊಲೆಸ್ಟರಾಲ್ಮಿಯಾ (Hypercholesterolemia) ಎಂದು ಕರೆಯಲಾಗುತ್ತದೆ. ರಕ್ತದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾದರೆ ಹಲವು ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ದೇಹದಲ್ಲಿ ಲಿಪಿಡ್​ ಅಂಶಗಳನ್ನು ನಿಯಂತ್ರಿಸುವುದು ಅಗತ್ಯವಾಗಿದೆ. ರಕ್ತದಲ್ಲಿನ ಅಧಿಕ ಕೊಲೆಸ್ಟ್ರಾಲ್​ ಮಟ್ಟದಿಂದ ಹೃದಯರಕ್ತನಾಳದ ಕಾಯಿಲೆಗಳು, ಸೆರೆಬ್ರೊವಾಸ್ಕುಲರ್ ಕಾಯಿಲೆ ಸೇರಿದಂತೆ ಹಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಕೊಲೆಸ್ಟ್ರಾಲ್​ ಮಟ್ಟವನ್ನು ನಿಯಂತ್ರಿಸಲು ಈ ಕ್ರಮಗಳನ್ನು ಕೈಗೊಳ್ಳಿ.

ಹೃದಯದ ಆರೋಗ್ಯ ಕಾಪಾಡಿಕೊಳ್ಳಿ: ಕೊಲೆಸ್ಟ್ರಾಲ್​ ಮಟ್ಟದಿಂದ ಹೃದಯಕ್ಕೆ ಹೆಚ್ಚು ಅಪಾಯ. ಹೀಗಾಗಿ ಹೃದಯದ  ಆರೋಗ್ಯೆದೆಡೆಗೆ ಹೆಚ್ಚುಯ ಗಮನ ನೀಡಿ.  ಹೆಚ್ಚು ನ್ಯೂಟ್ರಿಷಿಯನ್​ ಇರುವ ಆಹಾರಗಳನ್ನು ಸೇವಿಸಿ. ಆದರೆ ನೆನಪಿಡಿ ರೆಡ್​ ಮೀಟ್​ನಂತಹ ಹೆಚ್ಚು ಕೊಬ್ಬಿನ ಆಹಾರಗಳ ಸೇವನೆ ಬೇಡ.

ವ್ಯಾಯಾಮ /ವಾಕಿಂಗ್​: ದೇಹವನ್ನು ಚಟುವಟಿಕೆಯಿಂದಿರುವಂತೆ ಇಟ್ಟುಕೊಳ್ಳಿ. ವ್ಯಾಯಾಮ, ವಾಕಿಂಗ್​ನಂತಹ ಅಭ್ಯಾಸ ರೂಢಿಸಿಕೊಳ್ಳಿ. ಅದಕ್ಕಾಗಿ ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಿ.  ಪ್ರತಿದಿನದ ನಿಮ್ಮ ಅಭ್ಯಾಸ ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಅಭ್ಯಾಸವನ್ನು ರೂಢಿಸಿಕೊಳ್ಳುವ ಮೊದಲು ಸರಿಯಾದ ಕ್ರಮ ಆಯ್ಕೆಮಾಡಿಕೊಳ್ಳಿ.

ಧೂಮಪಾನ ತ್ಯಜಿಸಿ: ಧೂಮಪಾನದಿಂದ ಆರೋಗ್ಯಕ್ಕೆ ಕೆಡುಕು ಎನ್ನುವುದು ತಿಳಿದ ವಿಷಯ. ಚರ್ಮ, ಉಸಿರಾಟ ಎಲ್ಲದಕ್ಕೂ ಧೂಮಪಾನ ತೊಂದರೆ ನೀಡುತ್ತದೆ. ಅದೇ ರೀತಿ ಹೈಪರ್ಕೊಲೆಸ್ಟರಾಲ್ಮಿಯಾ  ಉಂಟಾಗಲು ಕೂಡ ಧೂಮಪಾನ ಕಾರಣವಾಗುತ್ತದೆ. ಹೃದಯ, ಶ್ವಾಸಕೋಶ ಎಲ್ಲದಕ್ಕೂ ಅಪಾಯತಂದೊಡ್ಡುವ ಧೂಮಪಾನ ತ್ಯಜಿಸಿದರೆ ಮಾತ್ರ ಆರೋಗ್ಯವಾಗಿರಲು ಸಾಧ್ಯ.

ದೇಹದ ತೂಕ: ಹೆಚ್ಚಿನ ದೇಹದ ತೂಕ ಕೂಡ ಹೈಪರ್ಕೊಲೆಸ್ಟರಾಲ್ಮಿಯಾಗೆ ಕಾರಣವಾಗುತ್ತದೆ. ಜಂಕ್​ ಫುಡ್​ಗಳ ಸೇವನೆ, ತಡರಾತ್ರಿಯ ಊಟ, ಆಲ್ಕೋಹಾಲ್​ ಸೇವನೆಯಿಂದ ದೇಹದ ತೂಕ ಹೆಚ್ಚುತ್ತದೆ. ಇದರಿಂದ ಅನಾರೋಗ್ಯಕರ ಲಿಪಿಡ್​ಗಳು ಉತ್ಪತ್ತಿಯಾಗುತ್ತವೆ. ಕೊಲೆಸ್ಟ್ರಾಲ್​ ಮಟ್ಟ ಏರಿಕೆಯಾಗುತ್ತದೆ.

ವೈದ್ಯರನ್ನು ಸಂಪರ್ಕಿಸಿ: ಆಗಾಗ ದೇಹವನ್ನು ತಪಾಸಣೆಗೆ ಒಳಪಡಿಸಿಕೊಳ್ಳಿ. ಆಗ ಮಾತ್ರ ನಿಮ್ಮ ಆರೋಗ್ಯದ ಸ್ಥಿತಿ ತಿಳಿಯುತ್ತದೆ. ಒಂದೇ ವೈದ್ಯರನ್ನು ಖಚಿಪಡಿಸಿಕೊಂಡು ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ. ಕೆಲವೊಮ್ಮೆ ಜೀವನಶೈಲಿ ಮತ್ತು ಆಹಾರಶೈಲಿಯನ್ನು ನಿಯಂತ್ರಿಸಿದರೆ  ಕೊಲೆಸ್ಟ್ರಾಲ್​ ಮಟ್ಟವನ್ನು ನಿಯಂತ್ರಿಸಬಹುದು. ಇದಕ್ಕಾಗಿ ವೈದ್ಯರ ಸಲಹೆ ಪಡೆದುಕೊಳ್ಳಿ.

ಇದನ್ನೂ ಓದಿ;

World Kidney Day 2022: ಮೂತ್ರಪಿಂಡ ಜೋಪಾನ