AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯ ಬೇಗೆ ನೀಗುವ ಕಬ್ಬಿನ ಹಾಲಿನಲ್ಲಿದೆ ಆರೋಗ್ಯ ಗುಣ

ಹಲವು ಆರೋಗ್ಯ ಗುಣಗಳನ್ನು ಹೊಂದಿರುವ ಕಬ್ಬಿನ ಹಾಲು ಕಡಿಮೆ ಕೊಬ್ಬಿನ ಅಂಶಗಳನ್ನು ಹೊಂದಿದೆ. ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶ, ಮ್ಯಾಗ್ನಿಶಿಯಂ, ಕ್ಯಾಲ್ಸಿಯಂ ಹಾಗೂ ಪೊಟ್ಯಾಶಿಯಂ ಅಂಶಗಳನ್ನು ಒಳಗೊಂಡಿದೆ.

ಬೇಸಿಗೆಯ ಬೇಗೆ ನೀಗುವ ಕಬ್ಬಿನ ಹಾಲಿನಲ್ಲಿದೆ ಆರೋಗ್ಯ ಗುಣ
ಕಬ್ಬಿನ ಹಾಲು
TV9 Web
| Updated By: Pavitra Bhat Jigalemane|

Updated on: Mar 11, 2022 | 7:35 AM

Share

ಇನ್ನೇನು ಬಿರು ಬೇಸಿಗೆ (Summer) ಆರಂಭವಾಗುತ್ತಿದೆ. ತಂಪು ಪಾನೀಯಗಳು ಕೈಬೀಸಿ ಕರೆಯುತ್ತವೆ. ಆದರೆ ತಂಪು ಪಾನೀಯವನ್ನು (Cold Drinks) ಸೇವಿಸುವ ಮುನ್ನ ಆರೋಗ್ಯಕ್ಕೆ ಯಾವುದು ಒಳ್ಳೆಯದು ಎನ್ನುವುದನ್ನು ತಿಳಿದುಕೊಳ್ಳಿ. ಸಕ್ಕರೆ ಮಿಶ್ರಿತ ಜ್ಯೂಸ್​ಗಳ ನಡುವೆ ಶುದ್ಧ ಹಾಗೂ ಆರೋಗ್ಯವನ್ನೂ ಹೆಚ್ಚಿಸುವ ಪಾನೀಯಗಳ ಸೇವನೆಯ ಬಗ್ಗೆ ಗಮನನೀಡಿ.  ಅದರಲ್ಲಿ ಮೊದಲು ಸಿಗುವುದೇ ಕಬ್ಬಿನ ಹಾಲು (Sugarcane Juice). ಹಲವು ಆರೋಗ್ಯ ಗುಣಗಳನ್ನು ಹೊಂದಿರುವ ಕಬ್ಬಿನ ಹಾಲು ಕಡಿಮೆ ಕೊಬ್ಬಿನ ಅಂಶಗಳನ್ನು ಹೊಂದಿದೆ. ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶ, ಮ್ಯಾಗ್ನಿಶಿಯಂ, ಕ್ಯಾಲ್ಸಿಯಂ ಹಾಗೂ ಪೊಟ್ಯಾಶಿಯಂ ಅಂಶಗಳನ್ನು ಒಳಗೊಂಡಿದೆ. ಯಾವೆಲ್ಲ ರೀತಿಯ ಆರೋಗ್ಯ ವೃದ್ಧಿಸುವ ಗುಣಗಳನ್ನು ಹೊಂದಿದೆ ಎನ್ನುವ ಮಾಹಿತಿ ಇಲ್ಲಿದೆ.

ಶಕ್ತಿ ಹೆಚ್ಚಿಸುತ್ತದೆ: ಕಬ್ಬಿನ ಹಾಲಿನ ಸೇವನೆಯಿಂದ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ. ಬೇಸಿಗೆಯಲ್ಲಿ ಬಸವಳಿದ ದೇಹಕ್ಕೆ ಹೊಸ ಚೈತನ್ಯ ನೀಡುವಂತೆ ಕಬ್ಬಿನ ಹಾಲು ಮಾಡುತ್ತದೆ.  ಸುಸ್ತಾದ ದೇಹಕ್ಕೆ ನೈಸರ್ಗಿಕ ಸಕ್ಕರೆ ಅಂಶವನ್ನು ಒದಗಿಸಿ ಸುಸ್ತನ್ನು ನಿವಾರಿಸುತ್ತದೆ.

ಯಕೃತ್ತಿನ ಕಾರ್ಯ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ: ಕಬ್ಬಿನ ಹಾಲಿನ ಸೇವನೆಯಿಂದ ಲಿವರ್​ ಉತ್ತಮವಾಗಿ ಕೆಲಸಮಾಡುವಂತೆ ಮಾಡುತ್ತದೆ. ಜಾಂಡೀಸ್​ನಂತಹ ರೋಗಗಳನ್ನು ತಡೆಗಟ್ಟುವಲ್ಲಿ ಕಬ್ಬಿನಹಾಲು ಸಹಕಾರಿಯಾಗಿದೆ. ಜೀರ್ಣಶಕ್ತಿಯನ್ನೂ ಹೆಚ್ಚಿಸುವ ಗುಣವನ್ನು ಕಬ್ಬಿನ ಹಾಲು ಹೊಂದಿದೆ. ಹೊಟ್ಟೆಯಲ್ಲಿನ ಇನ್ಫೆಕ್ಷನ್​ಗಳನ್ನು ತಡೆಗಟ್ಟಲು ಇದು ನೆರವಾಗುತ್ತದೆ.

ಕ್ಯಾನ್ಸರ್​ ಜೀವಕೋಶಗಳನ್ನು ತಡೆಯುತ್ತದೆ: ಕ್ಯಾಲ್ಸಿಯಂ, ಮ್ಯಾಗ್ನೀಶಿಯಂ, ಕಬ್ಬಿಣಾಂಶಗಳನ್ನು ಹೇರಳವಾಗಿ ಹೊಂದಿರುವುದರಿಂದ ಕ್ಯಾನ್ಸರ್​ ಜೀವಕೋಶಗಳು ದೇಹದಲ್ಲಿ ಉತ್ಪತ್ತಿಯಾಗದಂತೆ ತಡೆಯುತ್ತದೆ. ಅದರಲ್ಲೂ ಸ್ತನ ಕ್ಯಾನ್ಸರ್​​ಗೆ ಕಬ್ಬಿನ ಹಾಲು ಅತ್ಯುತ್ತಮ ಆಹಾರವಾಗಿದೆ.

ಕಿಡ್ನಿ, ಮೂಳೆಗಳ ಬೆಳವಣಿಗೆಗೆ ಸಹಕಾರಿ: ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮತ್ತು ದೇಹದಲ್ಲಿನ ಮೂಳೆಗಳನ್ನು ಸದೃಢವಾಗಿಡಲು ಕಬ್ಬಿನ ಹಾಲು ಸಹಕಾರಿಯಾಗಿದೆ.  ಕಿಡ್ನಿ ಸ್ಟೋನ್​, ಮೂತ್ರಕೋಶದ ಸಮಸ್ಯೆಗಳನ್ನೂ ಕುಡ ಕಬ್ಬಿನ ಹಾಲು ನಿವಾರಿಸುತ್ತದೆ. ಆದ್ದರಿಂದ ಕಬ್ಬಿನ ಹಾಲಿನ ಸೇವನೆ ಉತ್ತಮ ಅಭ್ಯಾಸವಾಗಿದೆ. ಆದರೆ ನೆನಪಿಡಿ ಅತಿಯಾದ ಸೇವನೆ ಒಳ್ಳೆಯದಲ್ಲ.

ಚರ್ಮದ ಆರೋಗ್ಯ: ಚರ್ಮದ ಆರೋಗ್ಯವನ್ನು ಉತ್ತಮಪಡಿಸಲು ಕಬ್ಬಿನ ಹಾಲು ಸಹಕಾರಿಯಾಗಿದೆ. ಮುಖದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸಿ ಸ್ವಚ್ಛ ತ್ವಚೆಯನ್ನು ನೀಡುತ್ತದೆ.  ಕಬ್ಬಿನ ಹಾಲಿನೊಂದಿಗೆ ಮುಲ್ತಾನಿ ಮಿಟ್ಟಿಯನ್ನು ಸೇರಿಸಿ ಮುಖಕ್ಕೆ ಹಚ್ಚಿದರೆ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ ಎಂದೂ ಹೇಳುತ್ತಾರೆ.

ಇದನ್ನೂ ಓದಿ:

Tan Removal Face Pack: ಸನ್​ ಟ್ಯಾನ್​ ನಿವಾರಿಸಲು ಈ ಫೇಸ್​ಪ್ಯಾಕ್​ ಬಳಸಿ