‘ಕೈಯಲ್ಲೇ ಊಟ ಮಾಡಬೇಕು, ಚಪ್ಪಲಿಯನ್ನು ಮನೆಯಿಂದ ಹೊರಗಿಡಬೇಕು’ ಈ ರೀತಿಯ ಆಚರಣೆಗೆ ವೈಜ್ಞಾನಿಕ ಕಾರಣಗಳೇನು? ಇಲ್ಲಿದೆ ಮಾಹಿತಿ

ಕೆಲವು ಆಚರಣೆಗಳು ಅನಾದಿಕಾಲದಿಂದಲೂ ಎಲ್ಲರ ಮನೆಗಳಲ್ಲಿ ನಡೆದುಕೊಂಡು ಬಂದಿದೆ. ಸಾಂಪ್ರಾದಾಯಿಕ ಪದ್ದತಿಗಳಂತೆ ಆಚರಿಸುವ ಪದ್ಧತಿಗಳ ಹಿಂದೆ ವೈಜ್ಞಾನಿಕ ಕಾರಣಗಳೂ ಇರುತ್ತವೆ. 

'ಕೈಯಲ್ಲೇ ಊಟ ಮಾಡಬೇಕು, ಚಪ್ಪಲಿಯನ್ನು ಮನೆಯಿಂದ ಹೊರಗಿಡಬೇಕು' ಈ ರೀತಿಯ ಆಚರಣೆಗೆ ವೈಜ್ಞಾನಿಕ ಕಾರಣಗಳೇನು? ಇಲ್ಲಿದೆ ಮಾಹಿತಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Mar 11, 2022 | 10:40 AM

ಕೆಲವು ಆಚರಣೆಗಳು ಅನಾದಿಕಾಲದಿಂದಲೂ ಎಲ್ಲರ ಮನೆಗಳಲ್ಲಿ ನಡೆದುಕೊಂಡು ಬಂದಿದೆ. ಸಾಂಪ್ರಾದಾಯಿಕ ಪದ್ದತಿಗಳಂತೆ ಆಚರಿಸುವ ಪದ್ಧತಿಗಳ ಹಿಂದೆ ವೈಜ್ಞಾನಿಕ ಕಾರಣಗಳೂ ಇರುತ್ತವೆ.  ಆರೋಗ್ಯದ ಹಿತ ದೃಷ್ಟಿಯಿಂದಲೂ ಕೆಲವು ಆಚರಣೆಗಳನ್ನು ಕಡ್ಡಾಯಗೊಳಿಸಲಾಗಿದೆ.  ಮನೆಯಲ್ಲಿ ಸಾಕಷ್ಟು ಬಾರಿ ಹಿರಿಯರು ಹೇಳುತ್ತಾರೆ ಮನೆಯ ಒಳಗೆ ಚಪ್ಪಲಿ ಹಾಕಿಕೊಂಡು ಬರಬಾರದು, ಕೈಯನ್ನು ಸ್ವಚ್ಛವಾಗಿ ತೊಳದು ಊಟಮಾಡಬೇಕು ಎಂದು .ಈಗ ಕಾಲ ಬದಲಾಗಿದೆ. ಆಧುನಿಕ ಸಂಸ್ಕೃತಿಗಳೆಡೆಗೆ ಆಕರ್ಷಿತರಾಗಿ ಆಚರಣೆ, ಪದ್ಧತಿಗಳನ್ನು ಬದಿಗೊತ್ತಿಯಾಗಿದೆ. ಆದರೆ  ಕೆಲವೊಂದು ಆಚರಣೆಗಳ ಬಗ್ಗೆ ವೈಜ್ಞಾನಿಕ ಕಾರಣಗಳನ್ನು ನೀವು ತಿಳಿದುಕೊಳ್ಳಲೇಬೇಕು.  ಆಗ ಅದರ ಮಹತ್ವದ ಅರಿವಾಗುತ್ತದೆ.

ಕೈಯಲ್ಲೇ ಊಟಮಾಡಬೇಕು: ಹಿಂದಿನ ಕಾಲದಲ್ಲಿ ಬಾಳೆ ಎಲೆಯನ್ನು ಸ್ವಚ್ಛವಾಗಿ ತೊಳೆದು, ಸರಿಯಾಗಿ ಕೈಗಳನ್ನು ಸ್ವಚ್ಛಗೊಳಿಸಿ ನಂತರ ಊಟ ಮಾಡುವ ಪದ್ಧತಿಯಿತ್ತು. ಆದರೆ ಈಗ ಎಲ್ಲಡೆ ಚಮಚಗಳದ್ದೇ ಓಡಾಟವಾಗಿದೆ. ಊಟ, ತಿಂಡಿ ಎಲ್ಲದಕ್ಕೂ ಕೈತಾಗಿಸದೆ ಚಮಚದಲ್ಲೇ ತಿನ್ನುವುದು ಒಂದು ರೀತಿಯ ಟ್ರೆಂಡ್​ ಆಗಿದೆ. ಆದರೆ ಕೈಯಲ್ಲಿ ಊಟ ಮಾಡುವುದರಿಂದ ದೇಹಕ್ಕೆ ಹಲವು ಆರೋಗ್ಯ ಗುಣಗಳು ದೊರೆಯುತ್ತದೆ.  ಕೈಗಳಿಂದ ತಿನ್ನುವ ಪ್ರಯೋಜನವೆಂದರೆ ಕೈಯ ಬೆರಳುಗಳಲ್ಲಿನ ನರಗಳಲ್ಲಿ ಸಂವೇದನಾ ಅನುಭವವಾಗುತ್ತದೆ. ಇದು ಮೆದುಳು, ಹೊಟ್ಟೆ ಮತ್ತು ಬೆರಳುಗಳ ನಡುವಿನ ಸಮನ್ವಯದ ವ್ಯಾಯಾಮವಾಗುತ್ತದೆ. ಸಂದೇಶಗಳು ಹಿಂದಕ್ಕೆ ಮತ್ತು ಮುಂದಕ್ಕೆ ಹೋಗುತ್ತವೆ. ಇದ್ದರಿಂದ ಗಮನವಿಟ್ಟು, ನಿಧಾನವಾಗಿ ಮತ್ತು ನಿರಾಳವಾಗಿ ತಿನ್ನುವಂತೆ ಮಾಡುತ್ತದೆ.  ಕೈಯಲ್ಲಿ ಊಟ ಮಾಡಿದರೆ ಊಟದ ರುಚಿ ಹೆಚ್ಚುತ್ತದೆ ಎನ್ನುತ್ತಾರೆ. ಅಲ್ಲದೆ ಸಂತೃಪ್ಪಿಯ ಊಟವಾಗುತ್ತದೆ. ಹೀಗಾಗಿ ಚಮಚದಲ್ಲಿ ಊಟ ಮಾಡುವ ಬದಲು ಕೈಯಲ್ಲಿ ಊಟ ಮಾಡುವುದೇ ಆರೋಗ್ಯಕ್ಕೂ, ಮನಸ್ಸಿಗೂ ಒಳಿತು.

ಬರಿಗಾಲಿನಲ್ಲಿ ನಡೆಯುವುದು: ಹಳ್ಳಿಗಳಲ್ಲಿ ಈಗಲೂ ಅದೆಷ್ಟೋ ಜನರು ಕಾಲಿಗೆ ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ನಡೆದಾಡುತ್ತಾರೆ. ಇದು ಆರೋಗ್ಯ ದೃಷ್ಟಿಯಿಂದ ಉತ್ತಮ ಅಭ್ಯಾಸವಾಗಿದೆ. ಮನೆಯಲ್ಲಿ ಮಾತ್ರವಲ್ಲ ಹೊರಗೆ ಓಡಾಡುವಾಗಲೂ ಬರಿಗಾಲಿನಲ್ಲಿ ನಡೆಯುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅಧ್ಯಯನದ ಪ್ರಕಾರ, ಬರಿಗಾಲಿನಲ್ಲಿ ಹಸಿರು ಹುಲ್ಲಿನ ಮೇಲೆ ನಡೆಯುವುದರಿಂದ ದೇಹದಲ್ಲಿ ಆ್ಯಂಟಿಆಕ್ಸಿಡೆಂಟ್​ ಅಂಶಗಳು ಹೆಚ್ಚಾಗುತ್ತದೆ, ದೇಹದಲ್ಲಿ ಉರಿಯೂತ ಕಡಿಮೆಯಾಗುತ್ತದೆ ಜತೆಗೆ ಉತ್ತಮ ನಿದ್ದೆಯನ್ನು ನೀಡುತ್ತದೆ. ಹೀಗಾಗಿ ಪ್ರತಿದಿನ ಕನಿಷ್ಟ ಅರ್ಧಗಂಟೆಯಾದರೂ ಬರಿಗಾಲಿನಲ್ಲಿ ನಡೆಯಬೇಕು ಎನ್ನುತ್ತಾರ ತಜ್ಞರು. ಹಿಂದಿನ ಕಾಲದಲ್ಲಿ ಭೂಮಿತಾಯಿಗೆ ಗೌರವ ಕೊಡಬೇಕು ಎನ್ನುವ ಧ್ಯೇಯಕ್ಕೆ ಬದ್ಧರಾಗಿ ಬರಿಗಾಲಿನಲ್ಲಿ ನಡೆಯುತ್ತಿದ್ದರು. ಅದರ ಹಿಂದ ವೈಜ್ಞಾನಿಕ ಕಾರಣವೂ ಇದೆ ಎನ್ನುವುದು ಗಮನಿಸಬೇಕಾದ ಸಂಗತಿ.

ಚಪ್ಪಲಿಯನ್ನು ಮನೆಯಿಂದ ಹೊರಗಿಡಬೇಕು: ಮನೆಗೆ ಯಾರಾದರೂ ಬಂದರೆ ಅಥವಾ ಹೊರಗಡೆ ಹೋಗಿ ಬಂದರೆ ಚಪ್ಪಲಿಯನ್ನು ಹೊರಗೆ ಬಿಡುವಂತೆ ಹೇಳುತ್ತಾರೆ. ಚಪ್ಪಲಿ ಹಾಕಿ ಊರೆಲ್ಲಾ ಸುತ್ತಿ ಮನೆಯ ಒಳಗೆ ಬಂದರೆ ಎಂತಹವರಿಗೂ ಅಸಹ್ಯವಾಗುತ್ತದೆ. ಅದು ಒಳ್ಳೆಯ ಸಂಸ್ಕೃತಿ ಕೂಡ ಆಲ್ಲ. ಅದೂ ಅಲ್ಲದೆ ಚಪ್ಪಲಿಯಲ್ಲಿರುವೆ ಇ ಕೋಲಿ ಎನ್ನುವ ಬ್ಯಾಕ್ಟೀರಿಯಾ ಮೂತ್ರಕೋಶದ ಸೋಂಕಿಗೆ ಕಾರಣವಾಗುತ್ತದೆ. ಜತೆಗೆ ಶೂನಲ್ಲಿ ಕಂಡುಬರುವ ಸಿ ಡಿಪ್​ ಎನ್ನುವ ಬ್ಯಾಕ್ಟೀರಿಯಾ ವಾಸನೆಯನ್ನು ಉತ್ಪತ್ತಿಯಾಗುವಂತೆ ಮಾಡುತ್ತದೆ. ಇದು ಡೈರಿಯಾ, ವಾಂತಿ, ಬೇದಿಯಂತಹ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಚಪ್ಪಲಿಯನ್ನು ಮನೆಯಿಂದ ಹೊರಗೆ ಇಡಬೇಕು ಎನ್ನುತ್ತಾರೆ.  ಮನೆ ಎಂದರೆ ದೇವಾಲಯ. ದೇವರು ನೆಲೆಸಿರುವಲ್ಲಿ ಚಪ್ಪಲಿ ಸಲ್ಲದೆಂಬ ಕಾರಣಕ್ಕೆ ಚಪ್ಪಲಿಯನ್ನು ಮನೆಯಿಂದ ಹೊರಗಿಡಬೇಕು ಎನ್ನುವ ಆಚರಣೆಯನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ:

ಬೇಸಿಗೆಯ ಬೇಗೆ ನೀಗುವ ಕಬ್ಬಿನ ಹಾಲಿನಲ್ಲಿದೆ ಆರೋಗ್ಯ ಗುಣ

Published On - 10:40 am, Fri, 11 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ