- Kannada News Photo gallery adopt these inspiration tips to maintain the good relationship with partner
Relationship Tips: ಸುಮಧುರ ಬಂಧಕ್ಕೆ ಈ ಏಳು ಸೂತ್ರಗಳು ಸಹಕಾರಿ
ಬದುಕಿನಲ್ಲಿ ಸಂಬಂಧಗಳನ್ನು ಬೆಳೆಸಿಕೊಳ್ಳುವುದಕ್ಕಿಂತ ಉಳಿಸಿಕೊಳ್ಳುವುದು ಅತಿ ಮುಖ್ಯವಾಗಿರುತ್ತದೆ. ಸಂಗಾತಿಯೊಂದಿಗಿನ ಬಂಧ ಸುಂದರವಾಗಿರಬೇಕಾದರೆ ಕನಸುಗಳನ್ನು ಹಂಚಿಕೊಳ್ಳಬೇಕು. ಸುಮಧುರ ಬಂಧವನ್ನು ಇಟ್ಟುಕೊಳ್ಳಲು ಇಲ್ಲಿವೆ ನೋಡಿ ಸಲಹೆಗಳು .
Updated on: Mar 10, 2022 | 4:34 PM

ಬದುಕಿನಲ್ಲಿ ಸಂಬಂಧಗಳನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ . ಬದುಕಿನುದ್ದಕ್ಕೂ ಸಂಗಾತಿಗೆ ಹೊಂದಿಕೊಂಡು, ಇಬ್ಬರದ್ದೂ ಒಂದೇ ದಾರಿ ಎಂದು ಸಾಗಬೇಕು. ಇ ನಡುವೆ ದುಃಖ, ದುಮ್ಮಾನ, ಸಿಟ್ಟು ಎಲ್ಲವೂ ಸಹಜ. ಅವೆಲ್ಲವನ್ನೂ ನಿಭಾಯಿಸಿಕೊಂಡು ಹೋದರೆ ಬದುಕು ಸುಂದರ. ಈ ರೀತಿಯ ಸುಂದರ ಬದುಕಿಗೆ ಇಲ್ಲಿವೆ ಒಂದಷ್ಟು ಟಿಪ್ಸ್ಗಳು.

ಯಾವುದೇ ಸಂಬಂಧ ಉಳಿಯಬೇಕೆಂದರೆ ಮಾತನಾಡುವುದು ಮುಖ್ಯವಾಗಿರುತ್ತದೆ. ಎಂಥಹದ್ದೆ ಸಮಸ್ಯೆ, ಜಗಳಗಳಿದ್ದರೂ ಕುಳಿತು ಮಾತನಾಡಿ. ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ. ಅನುಮಾನ ಬಗೆಹರಿಸಿಕೊಳ್ಳಿ.

ಇಬ್ಬರೂ ಜೊತೆಯಾಗಿ ಸಮಸ್ಯೆ ಬಗೆಹರಿಸಿಕೊಳ್ಳಿ. ಒಬ್ಬರಿಗೊಬ್ಬರು ನೆರವಾಗಿ. ಇದರಿಂದ ಯಾವ ಸಮಸ್ಯೆಯೂ ದೊಡ್ಡದು ಎನಿಸುವುದಿಲ್ಲ.

ಕೆಲಸವನ್ನು ಹಂಚಿಕೊಳ್ಳಿ. ಯಾವ ಕೆಲಸವನ್ನೂ ಇವರೆ ಮಾಡಬೇಕು ಎನ್ನುವ ನಿಯಮವಿಲ್ಲ. ಅದರಲ್ಲೂ ಮನೆಯ ಕೆಲಸವನ್ನು ಜೊತೆಯಾಗಿ ಮಾಡಿ. ಇದರಿಂದ ಖುಷಿಯೂ ಹೆಚ್ಚುತ್ತದೆ.

ಇಬ್ಬರೂ ಒಟ್ಟಿಗೆ ತೆರಳಿದ ಸ್ಥಳಗಳಿಗೆ ಮತ್ತೆ ಭೇಟಿ ನೀಡಿ. ನೆನಪುಗಳನ್ನು ಮರುಕಳಿಸಿಕೊಳ್ಳಿ. ಫೋಟೋಗಳನ್ನು ಸೆರೆಹಿಡಿದಿಟ್ಟುಕೊಳ್ಳಿ. ಇನ್ನು ನಿಮ್ಮ ನಡುವಿನ ಪ್ರೀತಿಯನ್ನು ಇಮ್ಮಡಿಯಾಗಿಸುತ್ತದೆ.

ಸಂವಹನ ಸರಿಯಾಗಿರಲಿ. ಇಬ್ಬರ ನಡುವೆ ಹೇಳಿಕೆಗಳು ಪಾರದರ್ಶಕವಾಗಿರಲಿ. ಎಲ್ಲಿದ್ದಿರಿ ಎನ್ನುವದನ್ನು ಸ್ಪಷ್ಟವಾಗಿ ಒಬ್ಬರಿಗೊಬ್ಬರು ಹೇಳಿಕೊಳ್ಳಿ.

ಹೆಚ್ಚಿನ ಸಮಯ ಒಟ್ಟಿಗೆ ಕಳೆಯಿರಿ. ಡಿನ್ನರ್, ಶಾಪಿಂಗ್ಗಳಿಗೆ ಒಟ್ಟಿಗೆ ಹೋಗಿ. ಆಗ ನಿಮ್ಮ ಆಯ್ಕೆಗಳು ಸಂಗಾತಿಗೆ ತಿಳಿಯುತ್ತದೆ,

ನಿಮ್ಮ ಮೇಲೆ ಪ್ರೀತಿ ಹೆಚ್ಚಿಸಿಕೊಳ್ಳಿ. ಇದರಿಂದ ನಿಮ್ಮ ಸಂಗಾತಿಗೆ ನೀವು ಹೆಚ್ಚು ಪ್ರೀತಿಯನ್ನು ನೀಡಬಹುದು. ನಿಮ್ಮ ಮನದ ಮಾತುಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳಬಹುದು.




