27 ಸಾವಿರ ರೂಪಾಯಿ ಬೆಲೆಯ ಚಪ್ಪಲಿ ಧರಿಸಿ ಸಿನಿಮಾ ಪ್ರಚಾರಕ್ಕೆ ಬಂದ ಪೂಜಾ ಹೆಗ್ಡೆ; ಫೋಟೋ ವೈರಲ್
ನಟಿ ಪೂಜಾ ಹೆಗ್ಡೆ ಅವರು ನಟನೆ, ಗ್ಲಾಮರ್ ಮಾತ್ರವಲ್ಲದೇ ತಮ್ಮ ಫ್ಯಾಷನ್ ಸೆನ್ಸ್ ಕಾರಣದಿಂದಲೂ ಗಮನ ಸೆಳೆಯುತ್ತಾರೆ. ಅವರ ಕೆಲವು ಹೊಸ ಫೋಟೋಗಳು ವೈರಲ್ ಆಗಿವೆ. ಪೂಜಾ ಧರಿಸಿದ ಹೀಲ್ಸ್ ಬೆಲೆ ಬಗ್ಗೆ ಫ್ಯಾನ್ಸ್ ಮಾತಾಡ್ತಾ ಇದ್ದಾರೆ.
Updated on: Mar 10, 2022 | 1:34 PM

Pooja Hegde attends Radhe Shyam promotion wearing Rs 27k black heels

Pooja Hegde attends Radhe Shyam promotion wearing Rs 27k black heels

ಭಾರತೀಯ ಚಿತ್ರರಂಗದಲ್ಲಿ ಪೂಜಾ ಹೆಗ್ಡೆ ಅವರಿಗೆ ಸಖತ್ ಬೇಡಿಕೆ ಇದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಪ್ರಭಾಸ್ ಜೊತೆ ಅವರು ಅಭಿನಯಿಸಿರುವ ‘ರಾಧೆ ಶ್ಯಾಮ್’ ಸಿನಿಮಾ ಮಾ.11ರಂದು ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ.

ದಳಪತಿ ವಿಜಯ್ ಜೊತೆ ಪೂಜಾ ಹೆಗ್ಡೆ ಅವರು ‘ಬೀಸ್ಟ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಚಿತ್ರದ ಮೇಲೆ ಸಖತ್ ನಿರೀಕ್ಷೆ ಇದೆ. ಏಪ್ರಿಲ್ 14ರಂದು ರಿಲೀಸ್ ಆಗಲಿರುವ ‘ಬೀಸ್ಟ್’ ಚಿತ್ರವು ‘ಕೆಜಿಎಫ್: ಚಾಪ್ಟರ್ 2’ ಜೊತೆ ಪೈಪೋಟಿ ನಡೆಸಲಿದೆ.

ಪೂಜಾ ಹೆಗ್ಡೆ ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅವರ ಕಾಲ್ಶೀಟ್ ದುಬಾರಿ ಎಂಬ ಕಾರಣಕ್ಕೆ ಕೆಲವು ನಿರ್ಮಾಪಕರು ಬೇರೆ ನಟಿಯರಿಗೆ ಮಣೆ ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೂ ಪೂಜಾ ಚಾರ್ಮ್ ಕಡಿಮೆ ಆಗಿಲ್ಲ.




