Updated on:Mar 08, 2022 | 4:00 PM
ಆಲೂಗಡ್ಡೆ ರಸ ಮತ್ತು ಮುಲ್ತಾನಿ ಮಣ್ಣು: ಟ್ಯಾನಿಂಗ್ ತೊಡೆದುಹಾಕಲು ಆಲೂಗಡ್ಡೆ ರಸವನ್ನು ಬಳಸಲು ತಜ್ಞರು ಶಿಫಾರಸು ಮಾಡುತ್ತಾರೆ. ಒಂದು ಬಟ್ಟಲಿನಲ್ಲಿ ಎರಡು ಚಮಚ ಮುಲ್ತಾನಿ ಮಣ್ಣನ್ನು ತೆಗೆದುಕೊಂಡು ಅದರಲ್ಲಿ ಮೂರು ಚಮಚ ಆಲೂಗಡ್ಡೆ ರಸವನ್ನು ಬೆರೆಸಿ. ಈ ಪೇಸ್ಟ್ ಅನ್ನು ಮುಖದ ಮೇಲೆ 15 ನಿಮಿಷಗಳ ಕಾಲ ಹಚ್ಚಿದ ನಂತರ ನೀರಿನಿಂದ ತೊಳೆಯಿರಿ. ಮುಲ್ತಾನಿ ಮಣ್ಣು ಮೊಡವೆ ಸಮಸ್ಯೆಯನ್ನೂ ನಿವಾರಿಸುತ್ತದೆ.
ಸೌತೆಕಾಯಿಗಳು ಮತ್ತು ನಿಂಬೆಹಣ್ಣುಗಳು: ವಿಟಮಿನ್ ಸಿ ಸಮೃದ್ಧವಾಗಿರುವ ನಿಂಬೆಹಣ್ಣುಗಳು ಟ್ಯಾನಿಂಗ್ ಅನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿ. ಮತ್ತೊಂದೆಡೆ ಸೌತೆಕಾಯಿ ಚರ್ಮವನ್ನು ಸರಿಪಡಿಸುತ್ತದೆ. ಒಂದು ಬಟ್ಟಲಿನಲ್ಲಿ ತುರಿದ ಸೌತೆಕಾಯಿಯನ್ನು ತೆಗೆದುಕೊಂಡು ಕೆಲವು ಹನಿ ನಿಂಬೆ ರಸವನ್ನು ಸೇರಿಸಿ. ಬಿಸಿ ವಾತಾವರಣದಲ್ಲಿ ವಾರಕ್ಕೆ ಮೂರು ಬಾರಿ ಈ ಪೇಸ್ಟ್ ಅನ್ನು ಬಳಸಿ.
ಪಪ್ಪಾಯಿ ಹಣ್ಣು ಟ್ಯಾನ್ ಆದ ಚರ್ಮವನ್ನು ಸರಿಪಡಿಸುತ್ತದೆ. ಪಪ್ಪಾಯಿ ಪೇಸ್ ಪ್ಯಾಕ್ ಹಾಕಿದರೆ ಸುಟ್ಟ ಚರ್ಮ ಕಾಂತಿಯುತವಾಗುತ್ತದೆ,
Published On - 3:46 pm, Tue, 8 March 22