ಮಹಿಳೆಯರು ಈ ರೀತಿಯ ಅನಾರೋಗ್ಯ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ: ಅಪಾಯದ ಮುನ್ಸೂಚನೆ ಇರಬಹುದು

ಮಹಿಳೆಯರ ಸೂಕ್ಷ್ಮ ಆರೋಗ್ಯವನ್ನು ಕಾಪಾಡಿಕೊಳ್ಲುವುದು ತುಸು ಕಷ್ಟದ ಕೆಲಸವೇ ಆಗಿದೆ. ಕೆಲವು ಮುನ್ಸೂಚನೆಗಳನ್ನು ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ದೊಡ್ಡ ಅಪಾಯ ಎದುರಾಗಬಹುದು. ಹೀಗಾಗಿ ಈ ಲಕ್ಷಣಗಳನ್ನು ಎಂದಿಗೂ ಕಡೆಗಣಿಸಬೇಡಿ.

TV9 Web
| Updated By: Pavitra Bhat Jigalemane

Updated on: Mar 08, 2022 | 5:21 PM

ಸಾಮಾನ್ಯವಾಗಿ ಮಹಿಳೆಯರು ಸಣ್ಣಪುಟ್ಟ ಆರೋಗ್ಯ ಸಮಸ್ಯಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಅದೇ ಸಣ್ಣ ಪ್ರಮಾಣದ ಕೆಲವು ಲಕ್ಷಣಗಳು ಮುಂದೊಂದು ದೊಡ್ಡ ರೋಗಕ್ಕೆ ಕಾರಣವಾಗಬಹುದು. ಹೀಗಾಗಿ ಕೆಲವು ಲಕ್ಷಣಗಳನ್ನು ಕಡೆಗಣಿಸದಿರುವುದೇ ಒಳಿತು. ಹಾಗಾದರೆ ಯಾವೆಲ್ಲಾ ಅನಾರೋಗ್ಯಗಳನ್ನು ಕಡೆಗಣಿಸಬಾರದು ಎನ್ನುವ ಮಾಹಿತಿ ಇಲ್ಲಿದೆ.

1 / 12
ಉಸಿರಾಟದಲ್ಲಿ ಬದಲಾವಣೆ ಆದರೆ ಅಥವಾ ಉಸಿರಾಡಲು ಕಷ್ಟವಾಗಿ ಎದೆಯಲ್ಲಿ ನೋವು ಕಾಣಿಸಕೊಳ್ಳುತ್ತಿದ್ದರೆ ಅಂತಹ ಸೂಚನೆಗಳನ್ನು ನಿರ್ಲಕ್ಷಿಸುವುದು ಒಳಿತಲ್ಲ.

2 / 12
ಪದೆ ಪದೇ ಕಾಣಿಸಿಕೊಳ್ಳುವ ಎದೆಯ ನೋವು, ಜೋರಾದ ಎದೆ ಬಡಿತಗಳ ಬಗ್ಗೆ ಅಸಡ್ಡೆ ಬೇಡ. ಹೃದಯದ ಸಮಸ್ಯೆಗಳು ಹೆಚ್ಚಯ ಮಹಿಳೆಯರಲ್ಲಿಯೇ ಕಾಣಿಸಕೊಳ್ಳುತ್ತದೆ ಹೀಗಾಗಿ ಅಸಡ್ಡೆ ಬೇಡ.

3 / 12
ಇದ್ದಕ್ಕಿಂದ ಹಾಗೆ ಅಶಕ್ತತೆ ಉಂಟಾದರೆ ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ ಇದು ಸ್​ಟ್ರೋಕ್​ನ ಲಕ್ಷಣವಾಗಿರಬಹುದು. ಆಗಾಗ ಗೊಂದಲ ಉಂಟಾಗುವುದು, ಮರೆವು ಈ ರೀತಿಯ ಲಕ್ಷಣಗಳನ್ನು ಕಡೆಗಣಿಸಬೇಡಿ.

4 / 12
ಮುಟ್ಟಿನ ದಿನಗಳಲ್ಲಿ ಏರುಪೇರಾದರೆ ನಿರ್ಲಕ್ಷ ಬೇಡವೇ ಬೇಡ. ಏಕೆಂದರೆ ಇದು ಬೇರೆ ಬೇರೆ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಋತುಚಕ್ರದಲ್ಲಿ ಬದಲಾವಣೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.

5 / 12
ಚರ್ಮದ ಬದಲಾವಣೆ ಬಗ್ಗೆ ಎಚ್ಚರವಹಿಸಿ. ಮಧುಮೇಹಕ್ಕೆ ಮೊದಲು ನಿಮ್ಮ ಚರ್ಮದ ಬಣ್ನ ಬದಲಾವಣೆಗೊಳಳ್ಉತ್ತದೆ. ಹೀಗಾಗಿ ಎಚ್ಚರಿಕೆಯಿಂದಿರಿ.

6 / 12
ದೇಹದ ತೂಕದಲ್ಲಿ ಏಕಾಏಕಿ ಏರಿಕೆ ಅಥವಾ ಇಳಿಕೆ ಕಂಡುಬಂದರೆ ಕೂಡಲೆ ತಜ್ಞರನ್ನು ಸಂಪರ್ಕಿಸಿ. ಏಕೆಂದರೆ ಡಯಾಬಿಟೀಸ್​, ಥೈರಾಯಿಡ್​ನಂತಹ ರೋಗದ ಮುನ್ಸೂಚನೆಗಳಿರಬಹುದು.

7 / 12
ಸ್ತನಗಳ ಗಾತ್ರದ ಬದಲಾವಣೆ: ಸ್ತನ ಕ್ಯಾನ್ಸರ್​ನಂತಹ ರೋಗಗಳು ಆರಂಭವಾದರೆ ಸ್ತನಗಳಲ್ಲಿ ಗಡ್ಡೆ ಬೆಳೆದು ಗಾತ್ರದೊಡ್ಡದಾಗಿ ಗಟ್ಟಿಯಾಗುತ್ತದೆ. ಆದ್ದರಿಂದ  ಎಚ್ಚರಿಕೆವಹಿಸಿ.

8 / 12
ಅತಿಯಾದ ನಿದ್ರಾವಸ್ಥೆ ಮತ್ತು ಗೊರಕೆಯನ್ನು ಹೊಡೆಯವ ಅಭ್ಯಾಸವಾದರೆ ಅದು ಅನಗತ್ಯವಾಗಿ ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಆದ್ದರಿಂದ ನಿದ್ದೆ ಮಾಡುವಾಗ ಮಲಗುವ ಶೈಲಿಯ ಬಗ್ಗೆ ಗಮನವಿರಲಿ.

9 / 12
ಸದಾ ಕಾಲ ಅತಿಯಾದ ಸುಸ್ತು ಕಾಡುತ್ತಿದ್ದರೆ ಅಸಡ್ಡೆ ಬೇಡ. ಇವು ಕ್ಯಾನ್ಸರ್​ನಂತಹ ರೋಗದ ಲಕ್ಷಣಗಳಾಗಿರಬಹುದು.

10 / 12
ಇದ್ದಕ್ಕಿದ್ದ ಹಾಗೆ ಕಣ್ಣುಗಳ ದೃಷ್ಟಿ ಮಂದವಾದರೆ ವೈದ್ಯರಿಗೆ ತೋರಿಸಿ. ರೆಟಿನಾದ ಸಮಸ್ಯೆ ಇದ್ದರೂ ಹಾಗೆ ಆಗುತ್ತದೆ. ಇದರ ನಿರ್ಲಕ್ಷ ಮಾಡಿದರೆ ಶಾಶ್ವತ ಕುರುಡುತನ ಅನುಭವಿಸಬಹುದು,

11 / 12
ಅತಿಯಾದ ಮಾನಸಿಕ ಒತ್ತಡ ಮತ್ತು ಆತಂಕದಲ್ಲಿ ಇದ್ದರೆ, ಇವು ಹಲವು ರೀತಿಯ ಆರೋಗ್ಯ ತೊಂದರೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಮನಸ್ಸನ್ನು ಆದಷ್ಟು ಕೂಲ್​ ಆಗಿ ಇಟ್ಟುಕೊಳ್ಳಿ

12 / 12
Follow us