Updated on: Mar 10, 2022 | 8:05 AM
ಕೀಲು ನೋವು ಎಲ್ಲಾ ವಯಸ್ಸಿನವರಲ್ಲಿಯೂ ಕಾಡುವ ಸಮಸ್ಯೆಯಾಗಿದೆ. ವಿಟಮಿನ್ ಡಿ ಯ ಕೊರತೆ, ಕ್ಯಾಲ್ಸಿಯಂ ಕೊರತೆಯಿಂದ ಕೀಲು ನೋವು ಕಾಣಿಸಿಕೊಳ್ಳುತ್ತದೆ. ಅದಕ್ಕೆ ಆಯುರ್ವೇದಲ್ಲಿ ಪರಿಹಾರವಿದೆ ಇಲ್ಲಿದೆ ನೋಡಿ.
ಹುಳಿ, ಉಪ್ಪು, ಹುರಿದ ಆಹಾರದ ಹೆಚ್ಚಿನ ಸೇವನೆ ತಪ್ಪಿಸಿ. ಹೆಚ್ಚು ಉಪ್ಪಿನ ಸೇವನೆ ಮೂಳೆಗಳನ್ನು ದುರ್ಬಲಗೊಳಿಸುತ್ತದೆ.
ವಾತವನ್ನು ಹೆಚ್ಚಿಸುವ ಆಹಾರವನ್ನು ತ್ಯಜಿಸಿ. ಅದೇ ರೀತಿ ಒತ್ತಡದ ಬದುಕಿಗೆ ಕೊಂಚ ಬ್ರೇಕ್ ನೀಡಿ. ಹೆಚ್ಚು ಒತ್ತಡದಿಂದಲೂ ದೇಹದ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಎಣ್ಣೆಯುಕ್ತ ಆಹಾರ ಸೇವಿಸಿ. ತುಪ್ಪ, ಆಲಿವ್ ಆಯಿಲ್ ಸೇರಿದಂತೆ ಕೊಂಚ ಎಣ್ಣೆಯುಕ್ತ ಆಹಾರ ಸೇವಿಸಿ. ಇದು ನಿಮ್ಮ ಕೀಲುಗಳ ನೋವನ್ನು ಕಡಿಮೆ ಮಾಡುತ್ತದೆ.
ಅಭ್ಯಂಜನ ಅಥವಾ ಎಣ್ಣೆಯ ಮಸಾಜ್ ಮಾಡಿ. ಆಗಾಗ ಮೈಗೆ ಹರಳೆಣ್ಣೆಯನ್ನು ಹಾಕಿ ಮಸಾಜ್ ಮಾಡಿಕೊಳ್ಳಿ.
ಅಶ್ವಗಂಧ, ಅರಿಶಿನ, ಶುಂಠಿಯ ಬಳಕೆಯಿರಲಿ. ಇದರಿಂದ ನಿಮ್ಮ ಕೀಲು ನೋವು ಕಡಿಮೆಯಾಗುತ್ತದೆ.