Bengaluru Stampede; ಪೊಲೀಸರನ್ನು ಹರಕೆ ಕುರಿ ಮಾಡೋದು ಬೇಡ, ಸಿಎಂ ವಿರುದ್ಧವೂ ಎಫ್ಐಅರ್ ಆಗಲಿ: ವಿಜಯೇಂದ್ರ
ಕಾಲ್ತುಳಿತ ಘಟನೆಯಲ್ಲಿ ಸತ್ತವರ ಕುಟುಂಬಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮ್ಯಾನೇಜ್ಮೆಂಟ್ ₹10 ಲಕ್ಷ ಕೊಡಲು ಮುಂದಾಗಿರುವುದನ್ನು ವಿಜಯೇಂದ್ರ ಖಂಡಿಸಿದರು. ಅವರು ಕೊಡುವ ಭಿಕ್ಷೆ ಯಾರಿಗೂ ಬೇಕಿಲ್ಲ, ಐಪಿಎಲ್ ಟೂರ್ನಿಯಲ್ಲಿ ಕೋಟಿಗಟ್ಟಲೆ ಹಣ ಲೂಟಿ ಮಾಡುವ ಅರ್ಸಿಬಿ ಮಾಲೀಕರು, ಪ್ರತಿ ಕುಟುಂಬಕ್ಕೆ ಕನಿಷ್ಟ ಒಂದೊಂದು ಕೋಟಿ ರೂ. ನೀಡಲಿ ಎಂದು ಆಗ್ರಹಿಸಿದರು.
ಬೆಂಗಳೂರು, ಜೂನ್ 6: ಮೆರವಣಿಗೆಗೆ ಪೊಲೀಸ್ ಅನುಮತಿ ಸಿಕ್ಕಿರಲಿಲ್ಲ ಅಂತ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದು ಸರಿಯಿದೆ, ಸರ್ಕಾರ ಅಮಾಯಕ ಪೊಲೀಸ್ ಅಧಿಕಾರಿಗಳನ್ನು ಟಾರ್ಗೆಟ್ ಮಾಡೋದು ನಿಲ್ಲಿಸಬೇಕು, ಇದು ಮುಖ್ಯಮಂತ್ರಿಯವರ ಅಧೀನದಲ್ಲಿರುವ ಗುಪ್ತಚರ ವಿಭಾಗದ ವೈಫಲ್ಯ, ಹಾಗಾಗಿ ಮುಖ್ಯಮಂತ್ರಿ ವಿರುದ್ಧವೂ ಎಫ್ಐಅರ್ (FIR) ಅಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ಪೊಲೀಸ್ ಅಧಿಕಾರಿಗಳಿಂದ ತಪ್ಪಾಗಿದ್ದರೆ ಅವರನ್ನೂ ಶಿಕ್ಷಿಸಲಿ, ಪ್ರಕರಣವನ್ನು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸುವುದನ್ನು ಬಿಟ್ಟು ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಧೀಶರಿಂದ ತನಿಖೆ ಮಾಡಿಸಲಿ ಎಂದು ವಿಜಯೇಂದ್ರ ಹೇಳಿದರು.
ಇದನ್ನೂ ಓದಿ: Bengaluru Stampede: ಪೊಲೀಸರು ಯಾಕೆ ಬಲಿಪಶು ಅಂತ ಕೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಂಮಜಸ ಉತ್ತರ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ