RCB IPL Celebration: ವಿಜಯ ಯಾತ್ರೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಅಂತಿಮಗೊಂಡಿಲ್ಲ: ಬಿ ದಯಾನಂದ್, ಪೊಲೀಸ್ ಕಮೀಶನರ್
ಸಂಜೆಯ ಕಾರ್ಯಕ್ರಮಗಳಿಂದಾಗಿ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಆನ್ಲೈನ್ನಲ್ಲಿ ಪಾಸು ಇಲ್ಲವೇ ಟಿಕೆಟ್ಗ ವ್ಯವಸ್ಥೆಯನ್ನು ಕೆಎಸ್ಸಿಎ ಮಾಡಿರಬಹುದು. ಕೇಂದ್ರೀಯ ಬೆಂಗಳೂರು ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಲಿರುವುದರಿಂದ ಅಲ್ಲಿನ ಶಾಲಾ ಕಾಲೇಜುಗಳನ್ನು ಬೇಗ ಮುಚ್ಚುವಂತೆ ಸೂಚಿಸಲಾಗಿದೆ ಎಂದು ಕಮೀಶನರ್ ಹೇಳಿದರು.
ಬೆಂಗಳೂರು, ಜೂನ್ 4: ನಿನ್ನೆ ರಾತ್ರಿ ನಡೆದ ಐಪಿಎಲ್ ಸೀಸನ್ 18 ರ ಫೈನಲ್ ಪಂದ್ಯದಲ್ಲಿ ಆರ್ಸಿಬಿ ತಂಡವು ಪಂಜಾಬ್ ಕಿಂಗ್ಸ್ ಎಲೆವೆನ್ ತಂಡವನ್ನು ಸೋಲಿಸಿದ ಬಳಿಕ ನಡೆದ ಸಂಭ್ರಮಾಚರಣೆಯಲ್ಲಿ ಯಾವುದೇ ರೀತಿಯ ಘಟನೆ ಆಸ್ಪದವೀಯದ ಬೆಂಗಳೂರಿನ ಪ್ರಜ್ಞಾವಂತ ನಿವಾಸಿಗಳು ಧನ್ಯವಾದ ಮತ್ತು ಕೃತಜ್ಞತೆಗಳನ್ನು ನಗರ ಪೊಲೀಸ್ ಕಮೀಶನರ್ ಬಿ ದಯಾನಂದ (B Dayanand) ಸಲ್ಲಿಸಿದರು. ಇವತ್ತು ಆರ್ಸಿಬಿ ಆಟಗಾರರನ್ನು ಕರ್ನಾಟಕ ಸರ್ಕಾರ ಸನ್ಮಾನಿಸಲಿದೆ, ಅದಾದ ಬಳಿಕ ಅವರು ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಲಿದ್ದಾರೆ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಆರ್ಸಿಬಿ ಆಡಳಿತ ಮಂಡಳಿಗಳು ಸತ್ಕಾರ ಕೂಟ ಮತ್ತು ಬೇರೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ, ಎರಡೂ ಕಡೆ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ಟಾಪ್ ಕಾಪ್ ಹೇಳಿದರು.
ಇದನ್ನೂ ಓದಿ: ಆರ್ಸಿಬಿಗೆ ಐಪಿಎಲ್ ಟ್ರೋಫಿ: ಬೆಂಗಳೂರಿನಲ್ಲಿ ಸಂಭ್ರಮಾಚರಣೆ ವೇಳೆ ಕ್ರೌರ್ಯ, ಯುವಕನಿಗೆ ಚಾಕು ಇರಿತ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ