AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore Stampede: ಸಿದ್ದರಾಮಯ್ಯ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: ಹೆಚ್​ಡಿಕೆ ಆರೋಪ ಯಾರ ಬಗ್ಗೆ!?

Bangalore Stampede: ಸಿದ್ದರಾಮಯ್ಯ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: ಹೆಚ್​ಡಿಕೆ ಆರೋಪ ಯಾರ ಬಗ್ಗೆ!?

ವಿವೇಕ ಬಿರಾದಾರ
|

Updated on:Jun 06, 2025 | 3:19 PM

Share

Bengaluru RCB Victory Celebrations Stampede: ಆರ್​ಸಿಬಿ ಗೆಲುವನ್ನು ಸಂಭ್ರಮಿಸಲು ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಿಜಯೋತ್ಸವ ಕಾರ್ಯಕ್ರಮ ವೀಕ್ಷಿಸಲು ಕ್ರೀಡಾಂಗಣಕ್ಕೆ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಈ ವೇಳ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಟ್ಟಿದ್ದಾರೆ. ಅಲ್ಲದೆ, ವಿಧಾನಸೌಧದ ಎದುರುಗಡೆ ಕೂಡ ಸನ್ಮಾನ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮ ಆಯೋಜಿಸಿದ್ದು ಯಾರು? ಈ ವಿಡಿಯೋ ನೋಡಿ

ಬೆಂಗಳೂರು, ಜೂನ್ 06: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಎದುರು ನಡೆದ ಕಾಲ್ತುತಿಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷದ ನಾಯಕರು ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿಯವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದೆ ಗೋವಿಂದ ಗೋವಿಂದ ಅಂತ ಭಜನೆ ಮಾಡುವ ವ್ಯಕ್ತಿಯಿಂದಲೇ ವಿಧಾನಸೌದದ ಗ್ರ್ಯಾಂಡ್​ ಸ್ಟೆಪ್ಸ್​ ಮೇಲೆ ಕಾರ್ಯಕ್ರಮ ನಡೆದಿದೆ. ಈ ವ್ಯಕ್ತಿ ಬೆಂಗಳೂರು ಪೊಲೀಸ್​ ಆಯುಕ್ತರಿಗೆ ಕರೆ ಮಾಡಿ, ಜೂ. 4 ರಂದು ವಿಧಾನಸೌಧದ ಗ್ರ್ಯಾಂಡ್​ ಸ್ಟೆಪ್ಸ್​ ಮೇಲೆ ಕಾರ್ಯಕ್ರಮ ನಡೆಸಲು ಪೊಲೀಸ್​ ಇಲಾಖೆಯಿಂದ ಅನುಮತಿ ನೀಡಬೇಕು ಮತ್ತು ಭದ್ರತೆ ನೀಡಬೇಕು ಎಂದು ಹೇಳಿದ್ದಾರೆ. ಹಾಗಿದ್ದರೆ ಗೋವಿಂದ ಗೋವಿಂದ ಅಂತ ಭಜನೆ ಮಾಡುವ ವ್ಯಕ್ತಿ ಯಾರು? ಈ ವಿಡಿಯೋ ನೋಡಿ.

Published on: Jun 06, 2025 03:19 PM